ಕರ್ನಾಟಕ

karnataka

ETV Bharat / business

ಸಂಸತ್​ನಲ್ಲಿ ಇ-ಸಿಗರೇಟ್​ ನಿಷೇಧ ಮಸೂದೆ ಪಾಸ್..! - ban e cigarettes

ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ (ಉತ್ಪಾದನೆ, ಆಮದು,ರಫ್ತು, ಸಾಗಣೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು) ಮಸೂದೆ 2019, ಸೆಪ್ಟೆಂಬರ್ 18ರಂದು ಹೊರಡಿಸಲಾದ ಸುಗ್ರೀವಾಜ್ಞೆಗೆ ಇಂದು ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ವಿರೋಧ ಪಕ್ಷಗಳು ಸೇರಿದಂತೆ ಹೆಚ್ಚಿನ ಪಕ್ಷಗಳು ಮಸೂದೆಗೆ ಬೆಂಬಲಿಸಿದವು. ಆದರೆ, ನಿಷೇಧ ಜಾರಿಗೆ ಸುಗ್ರೀವಾಜ್ಞೆಯಂತಹ ಮಾರ್ಗ ಅಳವಡಿಸಿಕೊಂಡ ಸರ್ಕಾರದ ನಡೆಯನ್ನು ಪ್ರಶ್ನಿಸಿದರು.

e-cigarettes
ಇ-ಸಿಗರೇಟ್​

By

Published : Nov 27, 2019, 4:29 PM IST

ನವದೆಹಲಿ:ಲೋಕಸಭೆಯಲ್ಲಿ ಬುಧವಾರ ಎಲೆಕ್ಟ್ರಾನಿಕ್ ಸಿಗರೇಟ್ ಮಾರಾಟ ಮತ್ತು ಉತ್ಪಾದನೆಯನ್ನು ನಿಷೇಧಿಸುವ ಮಸೂದೆ ಅಂಗೀಕಾರಗೊಂಡಿದ್ದು, ಆರೋಗ್ಯ ಸಚಿವ ಹರ್ಷವರ್ಧನ್ ಅವರು, 'ಯುವ ಸಮುದಾಯವನ್ನು ಮಾದಕ ವಸ್ತುಗಳಿಂದ ರಕ್ಷಿಸಲು ಈ ಕ್ರಮ ಅಗತ್ಯವಾಗಿದೆ. ಹೊಸ ಫ್ಯಾಷನ್ ಉತ್ತೇಜಿಸುವ ಕಂಪನಿಗಳಿಗೆ ಕಡಿವಾಣ ಬೀಳಲಿದೆ' ಎಂದಿದ್ದಾರೆ.

ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ (ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು) ಮಸೂದೆ 2019, ಸೆಪ್ಟೆಂಬರ್ 18ರಂದು ಹೊರಡಿಸಲಾದ ಸುಗ್ರೀವಾಜ್ಞೆಗೆ ಇಂದು ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ.ಇ-ಸಿಗರೇಟ್​​ ನಿಷೇಧದ ಸುಗ್ರೀವಾಜ್ಞೆ ವಿರೋಧಿಸಿದ ಪ್ರತಿಪಕ್ಷ ಸದಸ್ಯರು ಶಾಸನಬದ್ಧ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸಿದರು. ಪ್ರತಿಪಕ್ಷ ಸದಸ್ಯರು ಮಂಡಿಸಿದ ಹಲವು ತಿದ್ದುಪಡಿಗಳನ್ನು ಸದನವು ತಿರಸ್ಕರಿಸಿತು.

ಮಸೂದೆಯ ಕುರಿತು ಮಾತನಾಡಿದ ಹರ್ಷವರ್ಧನ್, ಹತ್ತನೇ ಮಹಡಿ ಅಥವಾ ಆರನೇ ಮಹಡಿಯಿಂದ ಬಿದ್ದರೂ ಅವನು/ ಅವಳು ಗಾಯಗೊಳ್ಳುತ್ತಾರೆ. ಇಂತಹ ಮಾದಕ ವಸ್ತು ನಿಷೇಧಕ್ಕೆ ಸಮರ್ಥನೆ ಸಲ್ಲದು ಎಂದರು. ವಿರೋಧ ಪಕ್ಷಗಳು ಸೇರಿದಂತೆ ಹೆಚ್ಚಿನ ಪಕ್ಷಗಳು ಮಸೂದೆಗೆ ಬೆಂಬಲಿಸಿದವು. ಆದರೆ, ನಿಷೇಧ ಜಾರಿಗೆ ಸುಗ್ರೀವಾಜ್ಞೆಯಂತಹ ಮಾರ್ಗ ಅಳವಡಿಸಿಕೊಂಡ ಸರ್ಕಾರದ ನಡೆಯನ್ನು ಪ್ರಶ್ನಿಸಿದರು.

For All Latest Updates

ABOUT THE AUTHOR

...view details