ಕರ್ನಾಟಕ

karnataka

ETV Bharat / business

ಲಾಕ್​ಡೌನ್​ ಅಗ್ನಿಕುಂಡದಲ್ಲಿ ಆರ್ಥಿಕತೆ - ’ತಾನು ಬೆಂದು ಜನರ ಜೀವ ರಕ್ಷಿಸಿದಂತಿದೆ’!! - ಲಾಕ್​ಡೌನ್

ಲಾಕ್​ಡೌನ್​ ಭಾರತವನ್ನು ಬಹಳಷ್ಟು ಸಂಕಟಗಳಿಂದ ರಕ್ಷಿಸಿದೆ. ಸೋಂಕು ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ. ಲಾಕ್‌ಡೌನ್ ಮುಂದುವರಿಯುವವರೆಗೂ ಆರ್ಥಿಕ ಚಟುವಟಿಕೆಗಳು ಉದ್ವೇಗದಿಂದ ಕೂಡಿರುತ್ತವೆ. ಆದರೂ ಆರ್ಥಿಕತೆಯಲ್ಲಿ ಬೇಡಿಕೆ ಇರಬೇಕು ಎಂದು ಎಸ್​ಬಿಐ ಮುಖ್ಯಸ್ಥ ಹೇಳಿದ್ದಾರೆ.

SBI Chairman Rajnish Kumar
ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್

By

Published : May 1, 2020, 8:46 PM IST

ಕೋಲ್ಕತ್ತಾ: ಕೊರೊನಾ ವೈರಸ್ ಸಂಕಟ ಮತ್ತು ಲಾಕ್​ಡೌನ್​ ಆರ್ಥಿಕತೆಯನ್ನು ನಷ್ಟಕ್ಕೆ ತಳ್ಳಿದೆ. ಆದರೆ ದೇಶವನ್ನು ಹೆಚ್ಚಿನ ಸಂಕಟದಿಂದ ಪಾರುಮಾಡಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಖ್ಯಸ್ಥ ರಜನೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ನಂತರವೇ ರಾಷ್ಟ್ರವ್ಯಾಪಿ ಲಾಕ್‌ಡೌನ್ ತೆಗೆದುಹಾಕಬೇಕು. ಈಗ ಹೆಚ್ಚಿನ ತಾಳ್ಮೆ ಅಗತ್ಯವಿದೆ. ನಾವು ಪರಿಸ್ಥಿತಿಯ ಸಂಪೂರ್ಣ ನಿಯಂತ್ರಣದಲ್ಲಿದ್ದೇವೆ. ವೈರಸ್ ಹರಡುವಿಕೆಯು ಸಂಪೂರ್ಣವಾಗಿ ನಿಯಂತ್ರಣವಿದೆ ಎಂಬ ವಿಶ್ವಾಸವಿಲ್ಲದೆ ನಾವು ಸಿಬ್ಬಂದಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಪಿಟಿಐಗೆ ತಿಳಿಸಿದ್ದಾರೆ.

ಲಾಕ್​ಡೌನ್​ ಭಾರತವನ್ನು ಬಹಳಷ್ಟು ಸಂಕಟಗಳಿಂದ ರಕ್ಷಿಸಿದೆ. ಸೋಂಕು ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ. ಲಾಕ್‌ಡೌನ್ ಮುಂದುವರಿಯುವವರೆಗೂ ಆರ್ಥಿಕ ಚಟುವಟಿಕೆಗಳು ಉದ್ವೇಗದಿಂದ ಕೂಡಿರುತ್ತವೆ. ಆದರೂ ಆರ್ಥಿಕತೆಯಲ್ಲಿ ಬೇಡಿಕೆ ಇರಬೇಕು. ನಿರ್ಬಂಧಗಳು ಸಂಪೂರ್ಣವಾಗಿ ಸಡಲಿಕೆ ಆಗಲು ಇನ್ನೂ ಸ್ವಲ್ಪ ಸಮಯವಿದೆ ಎಂದು ಹೇಳಿದರು.

ಲಾಕ್​ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೆಲವು ದಿನಗಳ ದೂರದಲ್ಲಿದ್ದೇವೆ. ಕೆಲವು ರಾಜ್ಯಗಳು ಕೆಟ್ಟ ಸ್ಥಿತಿಯಲ್ಲಿವೆ. ದೇಶಾದ್ಯಂತ ಹಸಿರು ವಲಯಗಳ ಸಂಖ್ಯೆಯು ಹೆಚ್ಚಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ವೇಳೆ ಜನರು ಶಿಸ್ತು ಕಾಪಾಡಿಕೊಳ್ಳುವುದು ಮುಂದುವರಿಸಿದರೆ, ವಕ್ರರೇಖೆ ತ್ವರಿತವಾಗಿ ಚಪ್ಪಟೆ ಮಾಡಬಹುದು ಎಂದು ಕುಮಾರ್​ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details