ನವದೆಹಲಿ: ಕೊರೊನಾ ವೈರಸ್ನ ಲಾಕ್‌ಡೌನ್ ಭಾರತದ ಪೂರೈಕೆ ಸರಪಳಿಗೆ ಭಾರಿ ಮಟ್ಟದಲ್ಲಿ ಅಡ್ಡಿಪಡಿಸಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.
'ಕೋವಿಡ್-19 ಮತ್ತು ಭವಿಷ್ಯದ ಕೆಲಸ' ಕುರಿತು ಮಾತನಾಡಿದ ಅವರು, ಸಾಂಕ್ರಾಮಿಕ ರೋಗವು ಒಂದು ವಿಶಿಷ್ಟ ಸವಾಲನ್ನು ಸೃಷ್ಟಿಸಿದೆ. ಇದು ಬಹು ಸಂಕೀರ್ಣ ಮತ್ತು ಅನಿರೀಕ್ಷಿತವಾಗಿದೆ. ನಾವು ಬಹಳ ಪ್ರಕ್ಷುಬ್ಧವಾದ ಸಮಯದ ನಡುವೆ ಹಾದು ಹೋಗುತ್ತಿದ್ದೇವೆ. ನಮ್ಮ ಪೂರೈಕೆ ಸರಪಳಿಯು ಭಾರಿ ಅಸ್ತವ್ಯಸ್ತವಾಗುತ್ತಿದೆ ಎಂದು ಹೇಳಿದರು.