ನವದೆಹಲಿ:ಕೊರೊನಾ ವೈರಸ್ ಲಾಕ್‌ಡೌನ್‌ನ ಎರಡನೇ ಹಂತವನ್ನು ಜಾರಿಗೊಳಿಸಲಾಗಿದ್ದು, ಗೃಹ ಸಚಿವಾಲಯ ಬುಧವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಚಿವಾಲಯವು ಎಲ್ಲ ರೀತಿಯ ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಿದ್ದು, ಈ ಅವಧಿಯಲ್ಲಿ ಸಾರ್ವಜನಿಕರಿಗೆ ಕೆಲವು ಮಾರ್ಗದರ್ಶನಗಳನ್ನು ನೀಡಿದೆ.
ಏ.20ರ ಬಳಿಕ ಲಾಕ್ಡೌನ್ 2.0 ಶುರು... ಏನಿರುತ್ತೆ, ಏನಿರಲ್ಲಿ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿತ್ತಾ, ಎರಡನೇ ಹಂತದ ಲಾಕ್ಡೌನ್ ಅನ್ನು ಮೇ 3ರ ತನಕ ವಿಸ್ತರಿಸುವುದಾಗಿ ಘೋಷಿಸಿದರು. ಏಪ್ರಿಲ್ 20ರ ನಂತರ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡುವುದಾಗಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಇಂದು ಬಿಡುಗಡೆ ಮಾಡಿದೆ.
ಲಾಕ್ಡೌನ್ 2.0
ಏಪ್ರಿಲ್ 20ರಿಂದ ಕೆಲವು ವಲಯಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾದ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳ ಪಟ್ಟಿ ಇಲ್ಲಿದೆ.
- ಕೃಷಿ, ಮೀನುಗಾರಿಕೆ, ತೋಟಗಾರಿಕೆ ಮತ್ತು ಪಶುಸಂಗೋಪನೆ ಚಟುವಟಿಕೆಗಳಿಗೆ ಅವಕಾಶ
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆರ್‌ಬಿಐ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳು ತೆರೆದಿರುತ್ತವೆ
- ಡಿಬಿಟಿ ನಗದು ವರ್ಗಾವಣೆ ವಿತರಣೆ ಪೂರ್ಣಗೊಳ್ಳುವವರೆಗೆ ಸಾಮಾನ್ಯ ಕೆಲಸದದಂತೆ ಬ್ಯಾಂಕ್ ಶಾಖೆಗಳ ಕಾರ್ಯಚರಣೆಗೆ ಅನುಮತಿಸಲಾಗಿದೆ
- ಕ್ಯಾಪಿಟಲ್, ಸಾಲ ಮಾರುಕಟ್ಟೆ ಸೇವೆಗಳು ಮತ್ತು ವಿಮೆ ಕಂಪನಿಗಳು ಕಾರ್ಯನಿರ್ವಹಿಸಲಿವೆ
- ನೀರಿನ ಸಂರಕ್ಷಣೆ ಮತ್ತು ನೀರಾವರಿ ಆದ್ಯತೆಯೊಂದಿಗೆ ಎಂಎನ್‌ಆರ್‌ಇಜಿಎ ಕಾಮಗಾರಿಗಳಿಗೆ ಅವಕಾಶವಿದೆ
- ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಸಿಎನ್‌ಜಿ, ಇತ್ಯಾದಿಗಳ ಮಾರಾಟ ಮತ್ತು ವಿತರಣೆ
- ದೂರಸಂಪರ್ಕ ಮತ್ತು ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಉಪಯುಕ್ತ ಚಟುವಟಿಕೆಗಳು
- ಎಲ್ಲ ಸರಕು ವಾಹನಗಳು ಓಡಿಸಲು ಅನುಮತಿಸಲಾಗುವುದು. ರೈಲ್ವೆ, ವಿಮಾನಯಾನ, ಬಂದರು, ಟ್ರಕ್‌ಗಳ ಚಲನೆಗೆ ಅನ್ವಯಿಸುತ್ತದೆ
- ಕಿರಾಣಿ, ಹಣ್ಣು- ಹಂಪಲು, ತರಕಾರಿ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಯಾವುದೇ ಸಮಯದ ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸಲು ಅವಕಾಶ
- ಐಟಿ ಮತ್ತು ಐಟಿ ಸಂಬಂಧಿತ ಸೇವಾ ಸಂಸ್ಥೆಗಳು ಶೇ 50ರಷ್ಟು ಉದ್ಯೋಗಗಳೊಂದಿಗೆ ಕಾರ್ಯಾಚರಣೆ
- ಇ-ಕಾಮರ್ಸ್ ಕಂಪನಿಗಳು
- ಕೊರಿಯರ್ ಸೇವೆಗಳು
- ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮು ಸೇವೆಗಳು
- ಖಾಸಗಿ ಭದ್ರತಾ ಸೇವೆಗಳು
- ಸ್ವಯಂ ಉದ್ಯೋಗಿದ ಸೇವೆಗಳು; ಉದಾ- ಎಲೆಕ್ಟ್ರಿಷಿಯನ್, ಐಟಿ ರಿಪೇರಿ, ಕೊಳಾಯಿಗಾರರು, ಮೋಟಾರ್ ಮೆಕ್ಯಾನಿಕ್ಸ್ ಮತ್ತು ಬಡಗಿಗಳು
- ಹೋಟೆಲ್, ಹೋಂಸ್ಟೇ, ವಸತಿಗೃಹಗಳು ಮತ್ತು ಮೋಟೆಲ್ಗಳು ಲಾಕ್ಡೌನ್ನಲ್ಲಿ ಸಿಲುಕೊಂಡಿರುವ ಪ್ರವಾಸಿಗರಿಗೆ, ವೈದ್ಯಕೀಯ, ತುರ್ತು ಸಿಬ್ಬಂದಿ, ವಾಯು ಮತ್ತು ಸಮುದ್ರಯಾನ ಸಿಬ್ಬಂದಿಗೆ ಅವಕಾಶ
- ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳಿಗೆ ಅವಕಾಶ. ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮುನ್ಸಿಪಾಲ್ಟಿ ವ್ಯಾಪ್ತಿಯ ಹೊರಗಿನ ಕೈಗಾರಿಕೆಗಳಿಗೆ
- ಎಸ್ಇಝ್ಯಡ್, ರಫ್ತು ಆಧಾರಿತ ಘಟಕಗಳು, ಕೈಗಾರಿಕಾ ಎಸ್ಟೇಟ್, ಕೈಗಾರಿಕಾ ಟೌನ್‌ಶಿಪ್‌ಗಳಲ್ಲಿ ಪ್ರವೇಶ ನಿಯಂತ್ರಣ ಹೊಂದಿರುವ ಉತ್ಪಾದನೆ ಮತ್ತು ಇತರ ಕೈಗಾರಿಕಾ ಸಂಸ್ಥೆಗಳಿಗೆ ವಿನಾಯಿತಿ
- ಗ್ರಾಮೀಣ ಪ್ರದೇಶಗಳಲ್ಲಿನ ಆಹಾರ ಸಂಸ್ಕರಣಾ ಕೈಗಾರಿಕೆಗಳು
- ಗಣಿಗಾರಿಕೆ ಕಾರ್ಯಾಚರಣೆ
- ಪ್ಯಾಕೇಜಿಂಗ್ ವಸ್ತುಗಳ ಉತ್ಪಾದನಾ ಘಟಕಗಳು
- ಗ್ರಾಮೀಣ ಪ್ರದೇಶದಲ್ಲಿ ಇಟ್ಟಿಗೆ ಗೂಡುಗಳು
- ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ನೀರಾವರಿ ಯೋಜನೆ, ಕಟ್ಟಡ, ಎಂಎಸ್‌ಎಂಇ ಇತ್ಯಾದಿಗಳ ನಿರ್ಮಾಣಕ್ಕೆ ಅವಕಾಶ
- ಕೈಗಾರಿಕಾ ಎಸ್ಟೇಟ್ಗಳಲ್ಲಿ ಎಲ್ಲಾ ರೀತಿಯ ಯೋಜನೆಗಳಿಗೆ ಅವಕಾಶ
- ನಗರಸಭೆ ಮತ್ತು ಪುರಸಭೆಗಳ ಮಿತಿಯೊಳಗೆ ನಿರ್ಮಾಣ ಯೋಜನೆಗಳಲ್ಲಿನ ಕಾಮಗಾರಿಗಳ ಮುಂದುವರಿಕೆ. ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರ ಬಳಕೆ. ಯಾವುದೇ ಕಾರ್ಮಿಕರನ್ನು ಹೊರಗಿನಿಂದ ಕರೆತರುವಂತಿಲ್
ಮೇ 3ರವರೆಗೆ ನಿಷೇಧಿತ ಕಾರ್ಯಚರಣೆಗಳು
- ಎಲ್ಲಾ ವೈದ್ಯಕೀಯ ಮತ್ತು ಪಶುವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ದಾದಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಲ್ಯಾಬ್ ತಂತ್ರಜ್ಞರ ಇತರ ಆಸ್ಪತ್ರೆ ಬೆಂಬಲ ಸೇವಾ ಮತ್ತು ಭದ್ರತಾ ಉದ್ದೇಶಗಳ ಪ್ರಯಾಣ ಹೊರತುಪಡಿಸಿ ಎಲ್ಲಾ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ರದ್ದು
- ಭದ್ರತಾ ಉದ್ದೇಶಗಳನ್ನು ಹೊರತುಪಡಿಸಿ ರೈಲುಗಳ ಎಲ್ಲಾ ಪ್ರಯಾಣಿಕ ಸಂಚಾರ ನಿಷೇಧ
- ಸಾರ್ವಜನಿಕ ಸಾರಿಗೆಗೆ ಬಸ್ಗಳ ಸೇವೆ ಬಂದ್
- ಮೆಟ್ರೋ ರೈಲು ಸೇವೆಗಳು ಸ್ಥಗಿತ
- ವೈದ್ಯಕೀಯ ಕಾರಣಗಳಿಗೆ ಅಥವಾ ಈ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳ ಅಂತರ ಜಿಲ್ಲೆ ಮತ್ತು ಅಂತರ ರಾಜ್ಯ ಸಂಚಾರ
- ಎಲ್ಲ ಶೈಕ್ಷಣಿಕ, ತರಬೇತಿ, ಕೋಚಿಂಗ್ ಸಂಸ್ಥೆಗಳು ಬಂದ್
- ಈ ಮಾರ್ಗಸೂಚಿಗಳ ಅಡಿಯಲ್ಲಿ ನಿರ್ದಿಷ್ಟವಾಗಿ ಅನುಮತಿಸಲಾದ ಎಲ್ಲ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು ನಿಷೇಧ
- ಈ ಮಾರ್ಗಸೂಚಿಗಳ ಅಡಿಯಲ್ಲಿ ನಿರ್ದಿಷ್ಟವಾಗಿ ಅನುಮತಿಸಲಾದ ಆತಿಥ್ಯ ಸೇವೆಗಳಿಗೆ ವಿರಾಮ
- ಟ್ಯಾಕ್ಸಿ (ಆಟೋ ರಿಕ್ಷಾ ಮತ್ತು ಸೈಕಲ್ ರಿಕ್ಷಾ ಸೇರಿದಂತೆ) ಮತ್ತು ಕ್ಯಾಬ್ ಸೇವೆಗಳು ಬಂದ್
- ಸಿನೆಮಾ ಹಾಲ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ಉದ್ಯಾನ, ಚಿತ್ರಮಂದಿರ, ಬಾರ್ ಮತ್ತು ಅಸೆಂಬ್ಲಿ ಹಾಲ್ ನಿಷೇಧ