ಕರ್ನಾಟಕ

karnataka

ETV Bharat / business

NPA ಘೋಷಣೆ ತಡೆ ಮಧ್ಯಂತರ ಆದೇಶ ಹಿಂಪಡೆಯುವಂತೆ ಸುಪ್ರೀಂಕೋರ್ಟ್​ಗೆ ಆರ್​ಬಿಐ ಮನವಿ - ಎನ್​ಪಿಎ ಘೋಷಣೆ

ಕೋವಿಡ್​-19 ಸಾಂಕ್ರಾಮಿಕ ಪರಿಣಾಮದಿಂದಾಗಿ ತೊಂದರೆಗಳನ್ನು ಎದುರಿಸಿ ಒತ್ತಡಕ್ಕೊಳಗಾದ ಸಾಲಗಾರರಿಗೆ ಪರಿಹಾರವಾಗಿ, ಸುಪ್ರೀಂಕೋರ್ಟ್ ಸೆಪ್ಟೆಂಬರ್ 3ರಂದು ಆಗಸ್ಟ್ 31ರವರೆಗೆ ಡೀಫಾಲ್ಟ್ ಆಗಿರದ ಸಾಲದ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್‌ಪಿಎ ಎಂದು ಘೋಷಿಸದಂತೆ ಮಧ್ಯಂತರ ಆದೇಶ ಹೊರಡಿಸಿತ್ತು.

RBI
ಆರ್​ಬಿಐ

By

Published : Nov 5, 2020, 4:53 PM IST

ನವದೆಹಲಿ:ಸಾಲಗಾರರಿಗೆ ಮಧ್ಯಂತರ ಪರಿಹಾರ ನೀಡಿದ ಸುಪ್ರೀಂಕೋರ್ಟ್​, ಆಗಸ್ಟ್ 31ರವರೆಗೆ ಡೀಫಾಲ್ಟ್ (ಬೇಪಾವತಿ) ಆಗಿರದ ಸಾಲದ ಖಾತೆಗಳನ್ನು ಮುಂದಿನ ಆದೇಶದವರೆಗೆ ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಘೋಷಿಸದಂತೆ ಬ್ಯಾಂಕ್​ಗಳಿಗೆ ನಿರ್ದೇಶನ ನೀಡಿತ್ತು. ತನ್ನ ಮಧ್ಯಂತರ ಆದೇಶ ತೆರವುಗೊಳಿಸುವಂತೆ ಆರ್‌ಬಿಐ, ನ್ಯಾಯಾಲಯಕ್ಕೆ ಒತ್ತಾಯಿಸಿದೆ.

ಕೋವಿಡ್​-19 ಸಾಂಕ್ರಾಮಿಕ ಪರಿಣಾಮದಿಂದಾಗಿ ತೊಂದರೆಗಳನ್ನು ಎದುರಿಸಿ ಒತ್ತಡಕ್ಕೊಳಗಾದ ಸಾಲಗಾರರಿಗೆ ಪರಿಹಾರವಾಗಿ, ಸುಪ್ರೀಂಕೋರ್ಟ್ ಸೆಪ್ಟೆಂಬರ್ 3ರಂದು ಮಧ್ಯಂತರ ಆದೇಶ ಹೊರಡಿಸಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪರ ಹಾಜರಾದ ವಕೀಲರು, ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠಕ್ಕೆ ಮಧ್ಯಂತರ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಕೋರಿದರು.

ಎನ್‌ಪಿಎ ಘೋಷಣೆ ನಿಷೇಧಿಸುವ ಆದೇಶದಿಂದಾಗಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದೇವೆ. ಈಗಿನ ಮಧ್ಯಂತರ ಆದೇಶ ತೆಗೆದುಹಾಕುವಂತೆ ಆರ್‌ಬಿಐ ಪರ ಹಾಜರಿದ್ದ ಹಿರಿಯ ವಕೀಲ ವಿ ಗಿರಿ ನ್ಯಾಯಪೀಠಕ್ಕೆ ಮನವಿ ಮಾಡಿದರು.

ABOUT THE AUTHOR

...view details