ನವದೆಹಲಿ: ಕೊರೊನಾ ಸಂಕಷ್ಟದ ಅವಧಿಯಲ್ಲಿ ಅಪಾಯದ ವ್ಯಾಪ್ತಿ ಮುಂದುವರಿಸುವುದನ್ನು ಉತ್ತೇಜಿಸಲು ಎಲ್ಐಸಿ ತನ್ನ ಪಾಲಿಸಿದಾರರಿಗೆ ಅವಧಿ ಮುಗಿದ ಅಥವಾ ಲ್ಯಾಪ್ಸ್ ಆದ ಪಾಲಿಸಿಗಳಿಗೆ ವಿಶೇಷ ಅವಕಾಶ ನೀಡುತ್ತಿದೆ.
ಗ್ರಾಹಕರು ಅವಧಿ ಮುಗಿದ ಅಥವಾ ಸ್ಥಗಿತಗೊಂಡ ತಮ್ಮ ವೈಯಕ್ತಿಕ ಪಾಲಿಸಿಗಳನ್ನು ಮರು ಚಾಲನೆ ನೀಡಲು ಆಗಸ್ಟ್ 10ರಿಂದ ಅಕ್ಟೋಬರ್ 9ರವರೆಗೆ ವಿಶೇಷ ಅಭಿಯಾನವನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಪ್ರಾರಂಭಿಸಲು ನಿರ್ಧರಿಸಿದೆ.
ಅನಿವಾರ್ಯ ಕಾರ್ಯಗಳಿಂದ ಪ್ರೀಮಿಯಂ ಪಾವತಿಸಲು ಆಗದೆ ಲ್ಯಾಪ್ಸ್ ಆದ ಪಾಲಿಸಿಗಳು ಚಾಲ್ತಿಗೆ ಬರಲಿವೆ. ಇನ್ಶೂರೆನ್ಸ್ ಕವರ್ ಆಗುವುದಕ್ಕೆ ಹಳೆಯ ಪಾಲಿಸಿಗಳಿಗೆ ಜೀವ ನೀಡುವುದು ಉತ್ತಮ ಎಂದು ಕಂಪನಿ ನಂಬಿದೆ. ಪ್ರಸ್ತುತ ಬಿಕ್ಕಟ್ಟಿನ ದೃಷ್ಟಿಯಿಂದ ವೈದ್ಯಕೀಯ ಅವಶ್ಯಕತೆಗಳಲ್ಲಿ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ವಿಳಂಬ ಶುಲ್ಕಕ್ಕೆ ಮಾತ್ರ ನೀಡಲಾಗುವುದು. ಟರ್ಮ್ ಅಶ್ಯೂರೆನ್ಸ್ ಮತ್ತು ಇತರ ಹೆಚ್ಚಿನ ಅಪಾಯದ ಪ್ಲ್ಯಾನ್ಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಶೇಷ ಪುನರುಜ್ಜೀವನ ಅಭಿಯಾನದ ಅಡಿಯಲ್ಲಿ ನಿರ್ದಿಷ್ಟವಾದ ಅರ್ಹ ಪ್ಲ್ಯಾನ್ಗಳನ್ನು ಪಾಲಿಸಿಯ ಕೆಲವು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ. ಎಲ್ಲಿಂದ ಪ್ರೀಮಿಯಂ ಪಾವತಿಸಿಲ್ಲವೀ, ಆ ಮೊದಲ ಪ್ರೀಮಿಯಂ ಬಾಕಿ ಉಳಿಸಿಕೊಂಡು ಐದು ವರ್ಷದೊಳಗೆ ನಿರ್ದಿಷ್ಟ ಅರ್ಹತಾ ಪ್ಲಾನ್ಗಳಿಗೆ ಮಾತ್ರ ಮತ್ತೆ ಚಾಲನೆ ನೀಡಬಹುದು.
ಪಾಲಿಸಿದಾರರಿಗೆ ಮರು ಚಾಲನೆಗೆ ಶೇ 20ರಷ್ಟು ವಿಳಂಬ ಶುಲ್ಕದ ರಿಯಾಯಿತಿ ನೀಡಲಾಗುವುದು. 1 ಲಕ್ಷದಿಂದ 3 ಲಕ್ಷ ರೂ. ನಡುವೆ ಶೇ 25ರಷ್ಟು ರಿಯಾಯಿತಿ ಸಿಗಲಿದೆ. ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ಕಳೆದುಹೋದ ಮತ್ತು ಪುನರುಜ್ಜೀವನದ ದಿನಾಂಕದಂದು ಪಾಲಿಸಿ ಅವಧಿಯನ್ನು ಪೂರ್ಣಗೊಳಿಸದ ಪ್ಲಾನ್ಗಳು ಈ ಅಭಿಯಾನದಲ್ಲಿ ಅವಕಾಶ ನೀಡಲಾಗುತ್ತದೆ.
ಮರುಚಾಲನೆ ನೀಡುವ ಸರಳ ವಿಧಾನ:
ಸ್ಥಗಿತಗೊಂಡ ಪಾಲಿಸಿಯನ್ನು ಮರು ಚಾಲನೆ ನೀಡಲು ಪಾಲಿಸಿದಾರರು ತಮ್ಮ ಎಲ್ಐಸಿ ಏಜೆಂಟರು ಅಥವಾ ಸಲಹೆಗಾರರನ್ನು ಸಂಪರ್ಕಿಸಬೇಕು. ಎಲ್ಐಸಿಯ ಅಧಿಕೃತ ವೆಬ್‌ಸೈಟ್‌ನಿಂದ ಮರು ಚಾಲನಾ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾದ ಮಾಹಿತಿ ಭರ್ತಿ ಮಾಡಿ. ಅದನ್ನು ಎಲ್‌ಐಸಿ ಕೇಂದ್ರ ಶಾಖಾ ಕಚೇರಿಗೆ (ಪಾಲಿಸಿ ಪಡೆದ ಕಚೇರಿ) ಸಲ್ಲಿಸಿ, ಬಾಕಿ ಉಳಿದ ಮೊತ್ತದೊಂದಿಗೆ ವಿಳಂಬ ಶುಲ್ಕವನ್ನು ನಗದು / ಚೆಕ್ ಮೂಲಕ ಪಾವತಿಸಬಹುದು.