ನವದೆಹಲಿ :ಕೇಂದ್ರೀಯ ನೇರ ತೆರಿಗೆ ಮಂಡಳಿಯು 2018-19ನೇ ಸಾಲಿನ (2019-20ನೇ ವಿತ್ತೀಯ ವರ್ಷ) ಪರಿಷ್ಕೃತ ಮತ್ತು ತಡವಾದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಮತ್ತೆ ಎರಡು ತಿಂಗಳು ವಿಸ್ತರಿಸಿದೆ.
ಸಿಬಿಡಿಟಿಯು ಪರಿಷ್ಕೃತ ಆದೇಶವನ್ನು ಸೆಪ್ಟೆಂಬರ್ 30ರಂದು ಹೊರಡಿಸಿದೆ. ಕೋವಿಡ್-19 ಸೋಂಕಿನ ಪರಿಸ್ಥಿತಿಯಿಂದಾಗಿ ತೆರಿಗೆದಾರರು ಎದುರಿಸುತ್ತಿರುವ ನೈಜ ತೊಂದರೆಗಳನ್ನು ಪರಿಗಣಿಸಲಾಗಿದೆ.
2019-20ರ ಮೌಲ್ಯಮಾಪನ ವರ್ಷಕ್ಕೆ ವಿಳಂಬ/ಪರಿಷ್ಕೃತ ಐಟಿಆರ್ಗಳನ್ನು 2019-20 ಸೆಪ್ಟೆಂಬರ್ 30ರಿಂದ 2020ರ ನವೆಂಬರ್ 30ರವರೆಗೆ ನೀಡಲು ನಿಗದಿತ ದಿನಾಂಕ ವಿಸ್ತರಿಸುತ್ತದೆ ಎಂದು ಸಿಬಿಡಿಟಿ ಟ್ವೀಟ್‌ನಲ್ಲಿ ತಿಳಿಸಿದೆ.