ಕರ್ನಾಟಕ

karnataka

ETV Bharat / business

ಹೇಗಿದೆ ದೇಶದ ಆರ್ಥಿಕಾಭಿವೃದ್ಧಿಯ ಆರೋಗ್ಯ? ಮಧ್ಯಾಹ್ನ ಮುಖ್ಯ ಆರ್ಥಿಕ ಸಲಹೆಗಾರರಿಂದ ಮಾಹಿತಿ - ಆರ್ಥಿಕ ಸಮೀಕ್ಷೆ

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್​ ಕೆ. ಸುಬ್ರಮಣಿಯನ್​ ಅವರು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಧ್ಯಾಹ್ನ 1.45ಕ್ಕೆ ಸುದ್ದಿಗೋಷ್ಠಿ ನಡೆಸಿ, 2019-20ರ ಆರ್ಥಿಕ ಸಮೀಕ್ಷೆಯ ಬಗ್ಗೆ ವಿವರವಾದ ಮಾಹಿತಿ ನೀಡಲಿದ್ದಾರೆ.

Economy Survey
ಆರ್ಥಿಕ ಸಮೀಕ್ಷೆ

By

Published : Jan 31, 2020, 11:46 AM IST

Updated : Jan 31, 2020, 1:39 PM IST

ನವದೆಹಲಿ:ಮುಂಗಡ ಪತ್ರ ಮಂಡನೆಗೂ ಮುನ್ನ 'ಆರ್ಥಿಕ ಸಮೀಕ್ಷೆ' ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಬಳಿಕ ಮಧ್ಯಾಹ್ನ 1.45ಕ್ಕೆ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಕೆ.ಸುಬ್ರಮಣಿಯನ್‌ ದೇಶದ ಆರ್ಥಿಕ ಆರೋಗ್ಯದ ಬಗ್ಗೆ ವಿವರವಾಗಿ ಮಾತನಾಡಲಿದ್ದಾರೆ.

ಭಾರತದ ಆರ್ಥಿಕ ಸಮೀಕ್ಷೆಯು ಏಪ್ರಿಲ್ 1ರಿಂದ ಮುಂದಿನ ವರ್ಷದಲ್ಲಿ ಶೇ 6 ರಿಂದ 6.5ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ ಎಂಬ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಬಜೆಟ್‌ನಲ್ಲಿ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ವಿತ್ತೀಯ ಕ್ರಮಗಳ ಬಗ್ಗೆ ಉಲ್ಲೇಖವಿರಲಿದೆ. ಹೀಗಾಗಿ, ಸಮೀಕ್ಷೆ ಸಾಕಷ್ಟು ಕುತೂಹಲ ಮೂಡಿಸಿದೆ.

Last Updated : Jan 31, 2020, 1:39 PM IST

ABOUT THE AUTHOR

...view details