ಬೆಂಗಳೂರು: ಕೊರೊನಾ ವೈರಸ್ ಸೋಂಕು ಪ್ರೇರೇಪಿತ ಲಾಕ್ಡೌನ್ನಿಂದ ಹೊರ ರಾಜ್ಯದಲ್ಲಿ ಸಿಲುಕಿರುವ ವಲಸಿಗ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ರಾಜ್ಯ ರಸ್ತೆಸಾರಿಗೆ ನಿಗಮ ಪ್ರಯಾಣಿಕ (ಕೆಎಸ್ಆರ್ಟಿಸಿ) ಸೇವೆ ಒದಗಿಸುತ್ತಿದೆ.
ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತಾ ರಾಜ್ಯ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ. ಇದನ್ನು ಪಡೆಯಲು ಇಚ್ಛಿಸುವವರು ಕೆಎಸ್ಆರ್ಟಿಸಿ ಸೂಚಿಸಿದ ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರಾರಸಾ ನಿಗಮವು ಮೇ 11ರಿಂದ (ಇಂದಿನಿಂದ) ಜಾರಿಗೆ ಬರುವಂತೆ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳು ಕಾರ್ಯನಿರ್ವಹಿಸಲಿವೆ.