ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯಲ್ಲಿಯೂ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯು ಮುಂದುವರೆದಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂದಗತಿ ಆರ್ಥಿಕತೆಯ ನಡುವೆ ನಡೆಸಿದ ಎರಡನೇ ಪತ್ರಿಕಾ ಗೋಷ್ಠಿಯಲ್ಲಿ ವಿಲೀನ ಆಗಲಿರುವ ಬ್ಯಾಂಕ್ಗಳನ್ನು ಹೆಸರಿಸಿದ್ದಾರೆ.
ದೇಶದ 10 ಬ್ಯಾಂಕ್ಗಳ ವಿಲೀನ ನಾಲ್ಕು ಹಂತಗಳಲ್ಲಿ ನಡೆಯಲಿದೆ. ಇದರಲ್ಲಿ ಕರ್ನಾಟಕದಲ್ಲಿ ಜನ್ಮ ತಳೆದ ಮೂರು ರಾಷ್ಟ್ರೀಕೃತ ಬ್ಯಾಂಕ್ಗಳು ಇದರಲ್ಲಿ ಸೇರಿವೆ. ಈ ಹಿಂದೆ ನವಂಬರ್ 2018ರಲ್ಲಿ ಕನ್ನಡ ನೆಲದ ವಿಜಯಾ ಬ್ಯಾಂಕ್ ಅನ್ನು ರಾಷ್ಟ್ರೀಯ ಬ್ಯಾಂಕ್ ಉಳಿಸಿಕೊಳ್ಳಲು ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಜೊತೆಗೆ ವಿಲೀನಗೊಳಿಸಿದರು ಎಂಬ ಆಪಾದನೆ ಕೇಳಿಬಂದಿತ್ತು. ಇದಕ್ಕೂ ಮೊದಲೇ ದೇಶದ ಹಳೆಯ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಪ್ ಮೈಸೂರನ್ನು ಎಸ್ಬಿಐನೊಂದಿಗೆ ಮರ್ಜ್ ಮಾಡಲಾಯಿತು.
ವಿಲೀನವಾಗಲಿರುವ ರಾಜ್ಯದ 3 ಬ್ಯಾಂಕ್ಗಳು