ನವದೆಹಲಿ: 2019-20ರ ಹಣಕಾಸು ವರ್ಷದ ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯು ಶೇ 15ರಷ್ಟು ಹೆಚ್ಚಳವಾಗಿದೆ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಮಂಡಳಿ (ಡಿಪಿಐಐಟಿ) ತಿಳಿಸಿದೆ.
ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಮಂಡಳಿ ಬಿಡುಗಡೆ ಮಾಡಿದ ದತ್ತಾಂಶಗಳ ಅನ್ವಯ, 26.09 ಬಿಲಿಯನ್ ಡಾಲರ್ನಷ್ಟು ಎಫ್ಡಿಐ ಭಾರತಕ್ಕೆ ಹರಿದು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 22.66 ಬಿಲಿಯನ್ ಡಾಲರ್ನಷ್ಟು ಇತ್ತು ಎಂದು ಹೇಳಿದೆ.
ಸೇವಾ ವಲಯದ ಹಣಕಾಸು, ಬ್ಯಾಂಕಿಂಗ್, ವಿಮೆ, ಹೊರಗುತ್ತಿಗೆ ಇಂಡಸ್ಟ್ರಿಗಳು ಅತಿಹೆಚ್ಚಿನ ಹೂಡಿಕೆಯ ತಾಣಗಳಾಗಿವೆ. ಇವುಗಳ ಸ್ವೀಕೃತಿ ಮೊತ್ತವು 4.4 ಬಿಲಿಯನ್ ಡಾಲರ್ನಷ್ಟಿದೆ. ಈ ಬಳಿಕ ಟೆಲಿಕಾಂ ವಲಯ 4.3 ಬಿಲಿಯನ್ ಡಾಲರ್ ಮತ್ತು ಕಂಪ್ಯೂಟರ್ ಸಾಫ್ಟವೇರ್ ಹಾಗೂ ಹಾರ್ಡ್ವೇರ್ 4 ಬಿಲಿಯನ್ ಡಾಲರ್ ಮೂಲಕ ನಂತರದ ಸ್ಥಾನದಲ್ಲಿವೆ.