ಕರ್ನಾಟಕ

karnataka

ETV Bharat / business

ಜಲ ದಿಗ್ಬಂಧನಕ್ಕೆ 24 ಸಾವು, ₹ 6000 ಕೋಟಿ ನಷ್ಟ... ಕೇಂದ್ರಕ್ಕೆ ಕೇಳುತ್ತಿಲ್ಲವೇ ಕನ್ನಡಿಗರ ಕೂಗು? - ಮುಖ್ಯಮಂತ್ರಿ ಯಡಿಯೂರಪ್ಪ

ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಹಾಗೂ ನೆರೆಯ ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ಹರಿದು ಬರುತ್ತಿರುವ ಅಧಿಕ ಪ್ರಮಾಣದ ನೀರಿನಿಂದ ದಕ್ಷಣ ಮತ್ತು ಉತ್ತರ ಒಳನಾಡಿನಲ್ಲಿ ಭಾರೀ ಪ್ರಮಾಣದ ಜಲದಿಗ್ಬಂಧನ ಸೃಷ್ಟಿಯಾಗಿದೆ. ಪ್ರವಾಹಕ್ಕೆ ಸಿಲುಕಿದವರ ಆಕ್ರಂದನ ಮುಗಿಲು ಮುಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಒನ್​ ಮ್ಯಾನ್ ಆರ್ಮಿಯಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ.

ಪ್ರವಾಹಕ್ಕೆ ಸಿಲುಕಿದ ಪ್ರದೇಶಗಳು

By

Published : Aug 10, 2019, 4:32 PM IST

ಬೆಂಗಳೂರು:ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು, ಹಳೆ ಮೈಸೂರು ಭಾಗದಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟದ ಪ್ರಮಾಣವನ್ನು ರಾಜ್ಯ ಸರ್ಕಾರ ಅಂದಾಜಿಸಿದೆ.

ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಹಾಗೂ ನೆರೆಯ ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ಹರಿದು ಬರುತ್ತಿರುವ ಅಧಿಕ ಪ್ರಮಾಣದ ನೀರಿನಿಂದ ದಕ್ಷಣ ಮತ್ತು ಉತ್ತರ ಒಳನಾಡಿನಲ್ಲಿ ಭಾರೀ ಪ್ರಮಾಣದ ಜಲದಿಗ್ಬಂಧನ ಸೃಷ್ಟಿಯಾಗಿದೆ. ಪ್ರವಾಹಕ್ಕೆ ಸಿಲುಕಿದವರ ಆಕ್ರಂದನ ಮುಗಿಲು ಮುಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಒನ್​ ಮ್ಯಾನ್ ಆರ್ಮಿಯಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ.

ಎನ್​ಡಿಆರ್​ಎಫ್​, ವಾಯುಪಡೆ, ರಕ್ಷಣಾ ಪಡೆಯ ತಂಡಗಳು ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿವೆ. ಈ ನಡುವೆ ರಾಜ್ಯ ಸರ್ಕಾರ ಪ್ರವಾಹದಿಂದ ಉಂಟಾದ ಹಾನಿಯ ಮೊತ್ತವನ್ನು ಅಂದಾಜಿಸಿ. ರಾಜ್ಯಾದ್ಯಂತ ಸಂಭವಿಸಿರುವ ಪ್ರವಾಹದಿಂದ ಇದುವರೆಗೂ ಸುಮಾರು 6,000 ಕೋಟಿಯಷ್ಟು ಸಾರ್ವಜನಿಕ ಆಸ್ತಿಗೆ ಧಕ್ಕೆಯಾಗಿದೆ. ಇದರಲ್ಲಿ ರೈತರು ಬೆಳೆದಿದ್ದ ಬೆಳೆ, ಜಾನುವಾರು, ಮನೆಗಳ ಕುಸಿತ, ರಸ್ತೆ, ಸೇತುವೆಗಳ ಹಾನಿ ಸಹ ಒಳಗೊಂಡಿದೆ. ಮಳೆ ಸಂಬಂಧಿತವಾಗಿ ಸುಮಾರು 24 ಜನರು ಪ್ರಾಣ ತೆತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ.

ಕಳೆದ 45 ವರ್ಷಗಳಲ್ಲಿ ಇಂತಹ ಪ್ರವಾಹಕ್ಕೆ ರಾಜ್ಯ ತುತ್ತಾಗಿರಲಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ 3,000 ಕೋಟಿ ರೂ. ಪರಿಹಾರ ನಿಧಿ ನಿಡುವಂತೆ ಕೋರಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಮರು ನಿರ್ಮಾಣ ಮಾಡುವ ಉದ್ದೇಶ ಇರಿಸಿಕೊಂಡಿದ್ದೇವೆ. ಕೆಲವು ಹಳ್ಳಿಗಳನ್ನು ಮರು ನಿರ್ಮಾಣ ಮಾಡಬೇಕಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ABOUT THE AUTHOR

...view details