ಕರ್ನಾಟಕ

karnataka

ETV Bharat / business

ಸಂಪನ್ಮೂಲ ಕ್ರೋಡೀಕರಿಸಲು ಪೆಟ್ರೋಲ್​, ಡೀಸೆಲ್​ಗೆ ಸೆಸ್ ಹೊರೆ: ಮದ್ಯ ಪ್ರಿಯರ ಜೇಬಿಗೆ ಬಿಎಸ್​ವೈ ಕೈ - ಕರ್ನಾಟಕ ಬಜೆಟ್​ ಲೈವ್​

2020-21ನೇ ಸಾಲಿನಲ್ಲಿ ಒಟ್ಟು ಜಮೆ 2,33,134 ಕೋಟಿ ರೂ. ಆಗಬಹುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 1,79,920 ಕೋಟಿ ರೂ. ರಾಜಸ್ವ ಜಮೆ ಹಾಗೂ 52,918 ಕೋಟಿ ರೂ. ಸಾಲ ಸೇರಿದಂತೆ 53,214 ಕೋಟಿ ರೂ. ಬಂಡವಾಳ ಜಮೆ ಒಳಗೊಂಡಿರಲಿದೆ. 1,79,776 ಕೋಟಿ ರೂ. ರಾಜಸ್ವ ವೆಚ್ಚ, 46,512 ಕೋಟಿ ರೂ. ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ ವೆಚ್ಚ 11,605 ಕೋಟಿ ಸೇರಿ ಒಟ್ಟು ವೆಚ್ಚವು 2,37,893 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.

BSY
ಬಿಎಸ್​ವೈ

By

Published : Mar 5, 2020, 5:16 PM IST

Updated : Mar 5, 2020, 6:04 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರೀಕ್ಷೆಯಂತೆ ಸಂಪನ್ಮೂಲ ಕ್ರೋಡೀಕರಣದ ಅಭಾವದ ನಡುವೆಯೂ ಕೃಷಿ ಮತ್ತು ನೀರಾವರಿಗೆ ಆದ್ಯತೆ ನೀಡುವ ಪ್ರಯತ್ನದಿಂದ ತಮ್ಮ 7ನೇ ಬಜೆಟ್ ಮಂಡಿಸಿದರು.

ದೇಶದ ಒಟ್ಟು ಜಿಎಸ್​ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ತೆರಿಗೆ ಸಂಗ್ರಹಣೆಯಲ್ಲಿ ಶೇ 14ರಷ್ಟು ಬೆಳವಣಿಗೆ ದರ ಕಾಪಾಡಿಕೊಂಡಿದೆ. ಜಿಎಸ್​ಟಿ ಅಡಿಯ ರಾಜಸ್ವದ ಅಂತರ ಕಡಿಮೆ ಆಗುವುದರಿಂದ ನಷ್ಟಪರಿಹಾರ ಯೋಜನೆಯನ್ನು 2022ರ ನಂತರ ವಿಸ್ತರಿಸುವಂತೆ ರಾಜ್ಯವು ಕೇಂದ್ರ ಸರ್ಕಾರ ಹಾಗೂ 15ನೇ ಹಣಕಾಸು ಆಯೋಗವನ್ನು ಕೋರಿದೆ. 2019-20ನೇ ಸಾಲಿನಲ್ಲಿ ವಿದ್ಯುನ್ಮಾನ ಸಾಗಣೆ ಬಿಲ್ಲುಗಳ ಪರಿಶೀಲನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.

2020ರ ಕರ್ನಾಟಕ ರಾಜ್ಯ ಬಜೆಟ್​

ಕೇಂದ್ರ ಸರ್ಕಾರದ ಜಿಎಸ್​ಟಿ ಸಂಗ್ರಹ ಅಭಾವದಿಂದ ರಾಜ್ಯದ ತೆರಿಗೆ ಪಾಲು ಕಡಿಮೆ ಆಗಿದೆ. ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಸಾರಿಗೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳಲ್ಲೂ ಆದಾಯ ಸಂಗ್ರಹ ಇಳಿಕೆಯಾಗಿದೆ. ಸಂಪನ್ಮೂಲ ಕ್ರೋಡೀಕರಣದ ಸವಾಲು ಎದುರಿಸಿದ ಬಿಎಸ್​ವೈ, ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಪೆಟ್ರೋಲ್ ಮತ್ತು ಡೀಸೆಲ್​ ಮೇಲಿನ ತೆರಿಗೆ ದರವನ್ನು ಶೇ 32ರಿಂದ ಶೇ 35ಕ್ಕೆ ಶೇ 21 ರಿಂದ ಶೇ 24ಕ್ಕೆ ಏರಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರದ ಈ ಕ್ರಮದಿಂದ ಪೆಟ್ರೋಲ್‍ 1.60 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 1.59 ರೂ,ಯಷ್ಟು ಹೊರೆ ಜನರ ಮೇಲೆ ಬೀಳಲಿದೆ.

2020ರ ಕರ್ನಾಟಕ ರಾಜ್ಯ ಬಜೆಟ್​

ವಾಣಿಜ್ಯ ತೆರಿಗೆಗಳ ಇಲಾಖೆಗೆ 2020-21ನೇ ಸಾಲಿನಲ್ಲಿ 82,443 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ಇರಿಸಿಕೊಂಡಿದೆ. 2019-20ನೇ ಸಾಲಿಗೆ 11,828 ಕೋಟಿ ರೂ. ರಾಜಸ್ವ ಗುರಿಯಲ್ಲಿ 2020ರ ಫೆಬ್ರವರಿ ಅಂತ್ಯದವರೆಗೆ 10,248 ಕೋಟಿ ರೂ. ಸಂಗ್ರಹಿಸಿದ್ದು, ಆಯವ್ಯಯ ಗುರಿಯ ಶೇ 87ರಷ್ಟು ಈಡೇರಿದಂತಾಗಿದೆ. ಶೇ 13ರಷ್ಟು ಅಭಾವ ಕಂಡುಬಂದಿದೆ. 2020-21ನೇ ಸಾಲಿಗೆ 12,655 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.

20 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ಅಪಾರ್ಟ್‍ಮೆಂಟ್‍ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ 5ರಿಂದ ಶೇ 2ಕ್ಕೆ ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ. ನ್ಯಾಷನಲ್ ಇ- ಆಡಳಿತ ಸೇವೆಯ ಪೋರ್ಟಲ್ ಮುಖಾಂತರ ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿ ಸಾಲ ದಾಖಲಾತಿಗಳ ಮುದ್ರಾಂಕ ಶುಲ್ಕ ಪಾವತಿಯನ್ನು ಆನ್‍ಲೈನ್ ಮುಖಾಂತರ ಜಾರಿಗೆ ತರುವುದಾಗಿ ಬಿಎಸ್​ವೈ ಘೋಷಿಸಿದ್ದಾರೆ.

ರಾಜ್ಯದ ಸ್ವಂತ ತೆರಿಗೆಗಳು

ಅಬಕಾರಿ ಇಲಾಖೆಗೆ 2019-20ನೇ ಸಾಲಿಗೆ 20,950 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿತ್ತು. ಫೆಬ್ರವರಿ ಅಂತ್ಯದವರೆಗೆ 19,701 ಕೋಟಿ ರೂ. ಸಂಗ್ರಹವಾಗಿದ್ದು, 1,249 ಕೋಟಿ ರೂ. ಅಭಾವ ಕಂಡುಬಂದಿದೆ. 2020-21ನೇ ಸಾಲಿನಲ್ಲಿ ಮದ್ಯದ ಎಲ್ಲಾ 18 ಘೋಷಿತ ಬೆಲೆಯ ಸ್ಲ್ಯಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಈಗಿನ ದರಗಳ ಮೇಲೆ ಶೇ 6ರಷ್ಟು ಹೆಚ್ಚಿಸಲು ನಿರ್ಧರಿಸಿದೆ. 2020-21ನೇ ಆರ್ಥಿಕ ವರ್ಷದಲ್ಲಿ 22,700 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ಸರ್ಕಾರ ಹೊಂದಿದೆ. ಸಾರಿಗೆಯ ಮೂಲಕ 2019-20ನೇ ಸಾಲಿನಲ್ಲಿ 7,100 ಕೋಟಿ ರೂ. ರಾಜಸ್ವ ಸಂಗ್ರಹಣೆಯ ಗುರಿ ಇರಿಸಿಕೊಳ್ಳಲಾಗಿತ್ತು. ಇದರಲ್ಲಿ 7,115 ಕೋಟಿ ರೂ. ಸಂಗ್ರಹವಾಗಿದೆ.

ಜಮೆಯಾದ ಮೊತ್ತ

2020-21ನೇ 12ಕ್ಕಿಂತ ಹೆಚ್ಚು ಹಾಗೂ 20 ಆಸನಗಳು ಮೀರದ ಪ್ರಯಾಣಿ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ಪ್ರತಿ ಆಸನಕ್ಕೆ 900 ರೂ. ನಿಗದಿಗೊಳಿಸಲಾಗಿದೆ. ಹೊಸ ಮಾದರಿಯ ಸ್ಲೀಪರ್ ಕೋಚ್ ವಾಹನಗಳ ನೋಂದಣಿಯ ಪ್ರತಿ ತ್ರೈಮಾಸಿಕದಂದು ಪ್ರತಿ ಸ್ಲೀಪರ್​ಗೆ 4,000 ರೂ. ಸಂಗ್ರಹಿಸಲು ಉದ್ದೇಶ ಇರಿಸಿಕೊಂಡಿದೆ. ಒಟ್ಟಾರೆಯಾಗಿ 2020-21ನೇ ಸಾಲಿಗೆ 7,115 ಕೋಟಿ ರೂ. ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.

ವಲಯವಾರು ಹಂಚಿಕೆ

ಪರಿಷ್ಕೃತ ಅಂದಾಜು 2019-20

2019-20ರ ಪರಿಷ್ಕೃತ ಅಂದಾಜು ಅನ್ವಯ ಈ ಆಯವ್ಯಯದಲ್ಲಿ ಅಂದಾಜಿಸಲಾದ 2,30,738 ಕೋಟಿ ರೂ.ಗೆ ಹೋಲಿಸಿದರೆ ಒಟ್ಟಾರೆ ಜಮೆ 2,26,088 ಕೋಟಿ ರೂ.ಯಷ್ಟಿದೆ. ರಾಜ್ಯದ ರಾಜಸ್ವ ಕ್ರೋಢೀಕರಣದ ಪ್ರಯತ್ನದ ಫಲವಾಗಿ 1,77,255 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸ್ವಂತ ತೆರಿಗೆ ರಾಜಸ್ವ ಸಂಗ್ರಹಣೆಯು ಜಿಎಸ್​ಟಿ ನಷ್ಟ ಪರಿಹಾರ ಒಳಗೊಂಡು 1,18,989 ಕೋಟಿ ರೂ.ಗಳಷ್ಟಿದೆ. ಪರಿಷ್ಕೃತ ಅಂದಾಜಿನ ಪ್ರಕಾರ ಒಟ್ಟು ವೆಚ್ಚವು 2,26,625 ಕೋಟಿ ರೂ.ಗಳಾಗಿದೆ. ಇದು 2018-19ಕ್ಕೆ ಹೋಲಿಸಿದಲ್ಲಿ ಶೇ.5.64 ರಷ್ಟು ಹೆಚ್ಚಳ ಆಗಿದೆ.

ಆಯವ್ಯಯ ಅಂದಾಜು 2020-21

2020-21ನೇ ಸಾಲಿನಲ್ಲಿ ಒಟ್ಟು ಜಮೆ 2,33,134 ಕೋಟಿ ರೂ. ಆಗಬಹುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 1,79,920 ಕೋಟಿ ರೂ. ರಾಜಸ್ವ ಜಮೆ ಹಾಗೂ 52,918 ಕೋಟಿ ರೂ. ಸಾಲ ಸೇರಿದಂತೆ 53,214 ಕೋಟಿ ರೂ. ಬಂಡವಾಳ ಜಮೆ ಒಳಗೊಂಡಿರಲಿದೆ. 1,79,776 ಕೋಟಿ ರೂ. ರಾಜಸ್ವ ವೆಚ್ಚ, 46,512 ಕೋಟಿ ರೂ. ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ ವೆಚ್ಚ 11,605 ಕೋಟಿ ಸೇರಿ ಒಟ್ಟು ವೆಚ್ಚವು 2,37,893 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.

ವಲಯವಾರು ಹಂಚಿಕೆ

ರಾಜಸ್ವ ಹೆಚ್ಚುವರಿ 143 ಕೋಟಿ ರೂ.ಯೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ 46,072 ಕೋಟಿ ರೂ. ಇರಲಿದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯದ ಆಂತರಿಕ ಉತ್ಪನ್ನದ ಶೇ 2.55 ರಷ್ಟಾಗಿರುತ್ತದೆ. 2020-21ರ ಕೊನೆಯಲ್ಲಿ 3,68,692 ಕೋಟಿ ರೂ. ಒಟ್ಟು ಹೊಣೆಗಾರಿಕೆಯು ಆಂತರಿಕ ಉತ್ಪನ್ನದ ಶೇ 20.42ರಷ್ಟು ಆಗಬಹುದು.

ಸಂಪನ್ಮೂಲ ಕ್ರೋಡೀಕರಣ

2020-21ನೇ ಸಾಲಿನ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವನ್ನು 2019-20ನೇ ಸಾಲಿನ ಪರಿಷ್ಕೃತ ಅಂದಾಜು ಮೀರಿ ಜಿಎಸ್​ಟಿ ನಷ್ಟ ಪರಿಹಾರ ಒಳಗೊಂಡಂತೆ ಶೇ 7.66ರ ಹೆಚ್ಚಳದೊಂದಿಗೆ 1,28,107 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.

2020-21ನೇ ಸಾಲಿನ ಆಯವ್ಯಯದ ಅಂದಾಜು

ತೆರಿಗೆಯೇತರ ರಾಜಸ್ವಗಳಿಂದ 7,767 ಕೋಟಿ ರೂ. ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 28,591 ಕೋಟಿ ರೂ. ಹಾಗೂ 15,454 ಕೋಟಿ ರೂ. ಕೇಂದ್ರ ಸರ್ಕಾರದ ಸಹಾಯ ಅನುದಾನ ರೂಪದಲ್ಲಿ ಬರಲಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 52,918 ಕೋಟಿ ರೂ. ಒಟ್ಟು ಸಾಲ, 40 ಕೋಟಿ ರೂ. ಋಣೇತರ ಸ್ವೀಕೃತಿ ಮತ್ತು 257 ಕೋಟಿ ರೂ. ಸಾಲಗಳ ವಸೂಲು ಮೊತ್ತವನ್ನು ಸಹ ಅಂದಾಜಿಸಲಾಗಿದೆ.

Last Updated : Mar 5, 2020, 6:04 PM IST

ABOUT THE AUTHOR

...view details