ನವದೆಹಲಿ:ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ದೇಶದಲ್ಲಿ ಕೈಗಾರಿಕೆಗಳು ಮತ್ತು ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದರಿಂದ 5ರಲ್ಲಿ ಓರ್ವ ಉದ್ಯೋಗ ಕಳೆದುಕೊಳ್ಳುತ್ತೇನೆ ಎಂಬ ಆತಂಕದಲ್ಲಿದ್ದಾನೆ ಎಂದು ಸಮೀಕ್ಷೆ ಎಚ್ಚರಿಸಿದೆ.
ಅಂತರ್ಜಾಲ ಆಧಾರಿತ ಮಾರುಕಟ್ಟೆ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣಾ ಸಂಸ್ಥೆಯಾದ ಯೂಗೋವ್ ಸಮೀಕ್ಷೆ ನಡೆಸಿದೆ. ಕೆಲವು ಭಾರತೀಯರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವುದು (ಶೇ 20ರಷ್ಟು), ವೇತನ ಕಡಿತ (ಶೇ 16ರಷ್ಟು), ಈ ವರ್ಷ ಬೋನಸ್ ಅಥವಾ ಏರಿಕೆ ಪಡೆಯದಿರುವುದು (ಶೇ 8ರಷ್ಟು) ಆತಂಕ ಹೊಂದಿದ್ದಾರೆ ಎಂದು ಹೇಳಿದೆ.
ಆರಂಭಿಕ ಅಂದಾಜುಗಳ ಪ್ರಕಾರ ಭಾರತದಲ್ಲಿ ಲಕ್ಷಾಂತರ ಜನರ ಉದ್ಯೋಗಗಳು ಅಪಾಯದಲ್ಲಿವೆ. ನಗರ ನಿರುದ್ಯೋಗ ದರವು ಶೇ 30.9ಕ್ಕೆ ಏರಿದೆ. ಒಟ್ಟಾರೆ ನಿರುದ್ಯೋಗವು ಈಗಾಗಲೇ ಶೇ 23.4ಕ್ಕೆ ತಲುಪಿದೆ.
ಈಗ ಸರಿಸುಮಾರು ಮೂರು ವಾರಗಳಿಂದ ಜನರು ಮನೆಯಲ್ಲಿಯೇ ಇರುವುದರಿಂದ ಯುಗೋವ್‌ನ ಪ್ರಸ್ತುತ ನಡೆಯುತ್ತಿರುವ ಕೋವಿಡ್-19 ಟ್ರ್ಯಾಕರ್‌ನ ದತ್ತಾಂಶದ ಬಳಿಕಯೂ ಜನರಲ್ಲಿ ಭಯದ ಮಟ್ಟವು ಸ್ಥಿರವಾಗಿದೆ ಎಂದಿದೆ.
ವೈರಸ್ ಸೋಂಕಿಗೆ ತಾವು ತುಂಬಾ ಅಥವಾ ತಕ್ಕಮಟ್ಟಿಗೆ ಹೆದರುತ್ತಿದ್ದೇವೆ ಎಂದು ಹೇಳುವವರ ಸಂಖ್ಯೆಯಲ್ಲಿ ಅಲ್ಪ ಕುಸಿತ ಕಂಡುಬಂದಿದ್ದು, ಶೇ 64ರಷ್ಟಿದೆ. ಕಳೆದ ವಾರ ಇದು ಶೇ 66ರಲ್ಲಿ ಇದಿತ್ತು. ತಾವು ಹೆದರುವುದಿಲ್ಲ ಎಂದು ಹೇಳುವ ಜನರ ಸಂಖ್ಯೆಯೂ ಶೇ 27 ರಷ್ಟಿದೆ.