ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಆಡಳಿತ ಅಕ್ಟೋಬರ್ 12ರಿಂದ ಮೂರು ದಿನಗಳ ಕಾಲ ಜಾಗತಿಕ ಹೂಡಿಕೆ ಸಮಾವೇಶ ಆಯೋಜಿಸಿದೆ.
ಕಾಶ್ಮೀರದಲ್ಲಿ ಬಂಡವಾಳ ಹೂಡಬೇಕೆ? ಹಾಗಿದ್ರೆ ಅ. 12ರವರೆಗೆ ಕಾಯಿರಿ - ಕಾಶ್ಮೀರದಲ್ಲಿ ಬಂಡವಾಳ
ಹೂಡಿಕೆಯ ಶೃಂಗಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ತನ್ನ ಸಾಮರ್ಥ್ಯ, ಕಾರ್ಯತಂತ್ರಗಳು ಮತ್ತು ಲಭ್ಯವಿರುವ ಅವಕಾಶವನ್ನು ಪ್ರದರ್ಶಿಸಲಿದೆ ಎಂದು ಇಂಡಸ್ಟ್ರೀಸ್ನ ಪ್ರಧಾನ ಕಾರ್ಯದರ್ಶಿ ನವೀನ್ ಚೌಧರಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಹೂಡಿಕೆಯ ಶೃಂಗಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ತನ್ನ ಸಾಮರ್ಥ್ಯ, ಕಾರ್ಯತಂತ್ರಗಳು ಮತ್ತು ಲಭ್ಯವಿರುವ ಅವಕಾಶವನ್ನು ಪ್ರದರ್ಶಿಸಲಿದೆ ಎಂದು ಇಂಡಸ್ಟ್ರೀಸ್ನ ಪ್ರಧಾನ ಕಾರ್ಯದರ್ಶಿ ನವೀನ್ ಚೌಧರಿ ಸುದ್ದಿಗಾರರಿಗೆ ತಿಳಿಸಿದರು.
ಹೊರಗಿನ ವ್ಯಾಪಾರ ಮತ್ತು ಉದ್ಯಮಿಗಳ ಮನಸ್ಸಿನಲ್ಲಿರುವ ಭಯ, ಆತಂಕಗಳನ್ನು ಹೋಗಲಾಡಿಸಿ ಅವರ ಬಂಡವಾಳಕ್ಕೆ ಅಗತ್ಯವಾದ ರಕ್ಷಣೆ ಹಾಗೂ ಭರವಸೆ ನೀಡಲಿದ್ದೇವೆ ಎಂದು ಚೌಧರಿ ಹೇಳಿದ್ರು.