ಕರ್ನಾಟಕ

karnataka

ETV Bharat / business

ಆರ್ಟಿಕಲ್​ 370 ರದ್ಧತಿ ಬಳಿಕ ಕಾಶ್ಮೀರದ ಯುವಕರಿಗೆ ವರ್ಲ್ಡ್​ ಕ್ಲಾಸ್ ಉದ್ಯೋಗ - Union Minister Mahendra Nath Pandey

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಯುವಕರು ಖಂಡಿತವಾಗಿಯೂ ಮುಖ್ಯವಾಹಿನಿಗೆ ಪ್ರವೇಶಿಸಿ, ವಿಶ್ವ ದರ್ಜೆಯ ಉದ್ಯೋಗಾವಕಾಶಗಳನ್ನು ಪಡೆಯಲಿದ್ದಾರೆ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದರು.

ಸಾಂದರ್ಭಿಕ ಚಿತ್ರ

By

Published : Aug 8, 2019, 10:56 PM IST

ನವದೆಹಲಿ: ಆರ್ಟಿಕಲ್​ 370 ರದ್ದತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ವಿಶ್ವ ದರ್ಜೆಯ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ ಎಂದು ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಕೆಲವೇ ದಿನಗಳ ಬಳಿಕ ಭಾರತೀಯ ಹೈಕಮಿಷನರ್‌ನನ್ನು ಹೊರಹಾಕಿ, ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಬುಧವಾರ ಪ್ರಕಟಿಸಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಯುವಕರು ಖಂಡಿತವಾಗಿಯೂ ಮುಖ್ಯವಾಹಿನಿಗೆ ಪ್ರವೇಶಿಸಿ, ವಿಶ್ವ ದರ್ಜೆಯ ಉದ್ಯೋಗಾವಕಾಶಗಳನ್ನು ಪಡೆಯಲಿದ್ದಾರೆ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರು ಹೇಳಿದರು.

ಪಾಕಿಸ್ತಾನದ ರಾಜಕೀಯವು ಕಾಶ್ಮೀರದ ಜನರಿಗೆ ಸುಳ್ಳು ಕನಸುಗಳನ್ನು ತೋರಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು. ಈಗ ಆ ಅಧ್ಯಾಯ ಶಾಶ್ವತವಾಗಿ ಮುಚ್ಚಿ ಹೋಗಿದೆ. ಇನ್ನು ಕೆಲವೇ ದಿನಗಳಲ್ಲಿ ಪಾಕಿಸ್ತಾನವೇ ಭಾರತದೊಂದಿಗೆ ಮುಕ್ತ ವ್ಯಾಪಾರ ಮಾಡಲು ಮನವಿ ಮಾಡಲಿದೆ ಎಂದು ಪಾಂಡೆ ವ್ಯಂಗ್ಯವಾಡಿದರು.

ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ಅಭಿವೃದ್ಧಿಯ ಮುಂಚೂಣಿಯಲ್ಲಿವೆ. ಆದರೆ, ಭಾರತದ ಕಿರೀಟವಾದ ಕಾಶ್ಮೀರವು ಅಂತಹ ಪ್ರಗತಿಯಿಂದ ವಂಚಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details