ಮುಂಬೈ :2019-20ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಸಲು ಜನವರಿ 10 ಕೊನೆಯ ದಿನ. ಸಾಮಾನ್ಯವಾಗಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30ರಂದು ಆಗಿತ್ತು. ಆದರೆ, ಈ ವರ್ಷ ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಹಲವು ವಿಸ್ತರಣೆ ಕಂಡಿದೆ.
ತೆರಿಗೆ ಪಾವತಿದಾರರು ಕೊನೆಯ ದಿನಾಂಕದವರೆಗೆ ಕಾಯುವುದು ಸರಿಯಲ್ಲ. ಯಾಕೆಂದರೆ, ಐಟಿ ಇಲಾಖೆಯ ಪೋರ್ಟಲ್‌ನಲ್ಲಿ ಹಲವು ಅನಗತ್ಯ ತಾಂತ್ರಿಕ ತೊಂದರೆಗಳು ಅಥವಾ ದಾಖಲೆಗಳ ಮಾಹಿತಿಯು ಕಾಣೆ ಆಗುವುದರಿಂದ ಪ್ರಕ್ರಿಯೆಯು ವಿಳಂಬವಾಗಬಹುದು, ಇಲ್ಲವೇ ಅಡ್ಡಿಯಾಗಬಹುದು. ಕೆಲವೊಮ್ಮೆ ತಪ್ಪಾದ ವಿವರ ನಮೂದಿಸುವುದರಿಂದ ನಿಮ್ಮ ತೆರಿಗೆ ಮರುಪಾವತಿ ವಿಳಂಬವಾಗಬಹುದು.
ಇದನ್ನೂ ಓದಿ: ಷೇರು ಹೂಡಿಕೆದಾರರ ಸಂಪತ್ತು 32.49 ಲಕ್ಷ ಕೋಟಿ ರೂ. ಹೆಚ್ಚಳ
ಸರಿಯಾದ ಆದಾಯ ತೆರಿಗೆ ಫಾರ್ಮ್ ಆಯ್ಕೆ ಮಾಡಿ :ಸರಿಯಾದ ಆದಾಯ ತೆರಿಗೆ ಫಾರ್ಮ್ ಆಯ್ಕೆ ಮಾಡುವುದು ಬಹಳ ಮುಖ್ಯ. ತಪ್ಪಾದ ಐಟಿಆರ್ ಫಾರ್ಮ್ ಸಲ್ಲಿಸುವುದು ಅಮಾನ್ಯ ರಿಟರ್ನ್ ಎಂದು ಪರಿಗಣಿಸಲಾಗುತ್ತದೆ.
ಸರಿಯಾದ ಮೌಲ್ಯಮಾಪನ ವರ್ಷವನ್ನು ಆರಿಸಿ : ನೀವು 2019-20ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದರೇ ಅದು 2020-21ರ ಮೌಲ್ಯಮಾಪನ ವರ್ಷವಾಗಿದೆ.
ತೆರಿಗೆ ರಿಟರ್ನ್ಸ್ ಸಲ್ಲಿಸಿದ ನಂತರ ಅರ್ಜಿ ಪರಿಶೀಲನೆ :ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ನಂತರವೂ ಪ್ರಕ್ರಿಯೆಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ.
ದಂಡ :ಕಳೆದ ವರ್ಷ ವಿಧಿಸಿದ 5,000 ರೂ. ಬದಲಾಗಿ 10,000 ರೂ.ವರೆಗೆ ದಂಡ ವಿಧಿಸುವ ಮೂಲಕ ಈ ವರ್ಷ ಸರ್ಕಾರವು ಗಡುವನ್ನು ಕಳೆದುಕೊಂಡಿರುವ ದಂಡದ ಮೊತ್ತ ಹೆಚ್ಚಿಸಿದೆ.