ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಐಟಿ ವಲಯದಲ್ಲಿ ಕಳೆದ ಐದು ವರ್ಷಗಳಲ್ಲಿ 8.73 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಸುಳ್ಳು ಡೇಟಾ ಮುಖೇನ ಉದ್ಯೋಗ ಮಾಹಿತಿ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಭಾರತೀಯ ಸಾಫ್ಟ್‌ವೇರ್ ವಲಯದ ಪ್ರಾತಿನಿಧಿಕ ಸಂಸ್ಥೆಯ (ನಾಸ್ಕಾಮ್) ಇತ್ತೀಚಿನ ಮಾಹಿತಿ ಪ್ರಕಾರ, 2014-15ರ ನಡುವೆ ಐಟಿ ಮತ್ತು ಬಿಪಿಒ ವಲಯದಲ್ಲಿ 2.18 ಲಕ್ಷ ಉದ್ಯೋಗ ಸೃಜಿಸಲಾಗಿತ್ತು. 2015-16ರಲ್ಲಿ 2.03 ಲಕ್ಷ, 2016-17ರಲ್ಲಿ 1.75 ಲಕ್ಷ, 2017-18ರಲ್ಲಿ 1.05 ಲಕ್ಷ ಹಾಗೂ 2018-19ರಲ್ಲಿ 1.72 ಲಕ್ಷ ಜನರಿಗೆ ಕೆಲಸ ದೊರಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.