ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ 1.41 ಕೋಟಿಗೂ ಅಧಿಕ ತೆರಿಗೆ ಪಾವತಿದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ₹ 1.64 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಹಣ ಪಾವತಿಸಿದೆ.
ಇದರಲ್ಲಿ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 53,070 ಕೋಟಿ ರೂ. ಮರುಪಾವತಿ ಆಗಿದ್ದರೇ ಈ ಅವಧಿಯಲ್ಲಿ 1.10 ಲಕ್ಷ ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿ ಸೇರಿದೆ.
ಸಿಬಿಡಿಟಿಯು 2020ರ ಏಪ್ರಿಲ್ 1ರಿಂದ 2021ರ ಜನವರಿ 4ರ ತನಕ 1.64 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಹಣವನ್ನು 1.41 ಕೋಟಿಗೂ ಅಧಿಕ ತೆರಿಗೆದಾರರಿಗೆ ಪಾವತಿಸಿದೆ. ಈ ಪೈಕಿ 53,070 ಕೋಟಿ ರೂ.ಗಳ ವೈಯಕ್ತಿಕ ಆದಾಯ ತೆರಿಗೆ ಮರುಪಾವತಿ ಮತ್ತು 1.10 ಲಕ್ಷ ಕೋಟಿ ರೂ.ಗಳ ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ.
ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2021ರ ಜನವರಿ 04 ರವರೆಗೆ 1.41 ಕೋಟಿಗಿಂತ ಹೆಚ್ಚು ತೆರಿಗೆದಾರರಿಗೆ 1,64,016 ಕೋಟಿ ರೂ. ಮರುಪಾವತಿಯನ್ನು ನೀಡಿರುತ್ತದೆ. 1,38,85,044 ಪ್ರಕರಣಗಳಲ್ಲಿ 53,070 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಆಗಿದೆ. ಕಾರ್ಪೊರೇಟ್ ತೆರಿಗೆ 2,06,847 ಪ್ರಕರಣಗಳಲ್ಲಿ 1,10,946 ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.