ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಈವರೆಗೆ ಸುಮಾರು 2.24 ಕೋಟಿ ತೆರಿಗೆದಾರರಿಗೆ 2.13 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ ಮಾಡಿದೆ.
ಈ ಹಣಕಾಸು ವರ್ಷದಲ್ಲಿ ಇದುವರೆಗೆ 2.24 ಕೋಟಿ ತೆರಿಗೆದಾರರಿಗೆ 2.13 ಲಕ್ಷ ಕೋಟಿ ರೂ. ಮೌಲ್ಯದ ತೆರಿಗೆ ಬಾಕಿ ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 22ರ ಅವಧಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ಮರುಪಾವತಿ 79,483 ಕೋಟಿ ರೂ. ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ 1.34 ಲಕ್ಷ ಕೋಟಿ ರೂ.ಯಷ್ಟಿದೆ.
ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 22ರ ನಡುವೆ 2.24 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 2,13,823 ಕೋಟಿ ರೂ. ಮರುಪಾವತಿ ಮಾಡಿದೆ. 2,21,92,812 ಪ್ರಕರಣಗಳಲ್ಲಿ 79,483 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ನೀಡಲಾಗಿದೆ.
ಇದನ್ನೂ ಓದಿ: ಕೊರೊನಾ ಗೆದ್ದವರಿಗೆ ಅಲ್ಪಾವಧಿ ಮೆಮೊರಿ ಲಾಸ್, ಲೋ ಥಿಂಕಿಂಗ್: ಹೊಸ ಅಧ್ಯಯನದಲ್ಲಿ ಅಚ್ಚರಿಯ ಸಂಗತಿ ಬಹಿರಂಗ
ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 22ರವರೆಗೆ 2.24 ಕೋಟಿಗಿಂತ ಹೆಚ್ಚು ತೆರಿಗೆದಾರರಿಗೆ 2,13,823 ಕೋಟಿ ರೂ. ಮರುಪಾವತಿ ಕೊಟ್ಟಿದೆ. 2,21,92,812 ಪ್ರಕರಣಗಳಲ್ಲಿ 79,483 ಕೋಟಿ ರೂ. ಆದಾಯ ತೆರಿಗೆ ಮತ್ತು 2,22,188 ಕಾರ್ಪೊರೇಟ್ ಸಂಸ್ಥೆಗಳ ಕೇಸ್ಗಳಿಗೆ 1,34,340 ಕೋಟಿ ರೂ. ನೀಡಲಾಗಿದೆ ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.