ಕರ್ನಾಟಕ

karnataka

ETV Bharat / business

ಜಿಡಿಪಿ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯ ನಿಜವಾದ ಸೂಚಕವೇ!!

ಒಂದು ನಿರ್ಧಿಷ್ಟ ವರ್ಷದಲ್ಲಿ ದೇಶದಲ್ಲಿ ಉತ್ಪಾದನೆಯಾದ ಸರಕು ಹಾಗೂ ಸೇವೆಗಳ ಮಾರುಕಟ್ಟೆ ಮೌಲ್ಯವೇ ಜಿಡಿಪಿ. ಈ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಜಿಡಿಪಿ ದರವನ್ನು ಕಂಡುಹಿಡಿಯಲಾಗುತ್ತದೆ. ಈ ಒಟ್ಟು ರಾಷ್ಟ್ರೀಯ ಉತ್ಪನ್ನದಿಂದ ದೇಶದ ಒಟ್ಟು ಜನಸಂಖ್ಯೆಯನ್ನು ಭಾಗಿಸಿದರೆ ನಮಗೆ ತಲಾ ರಾಷ್ಟ್ರೀಯ ಉತ್ಪನ್ನ ಎಷ್ಟು ಎಂಬುದು ತಿಳಿಯುತ್ತದೆ. ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ವ್ಯತ್ಯಾಸವಾದಂತೆಲ್ಲ ಈ ಜಿಡಿಪಿಯಲ್ಲೂ ಏರಿಳಿತ ಉಂಟಾಗುತ್ತದೆ.

By

Published : Sep 5, 2019, 7:00 AM IST

ಜಿಡಿಪಿ

ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದು. ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ರಾಷ್ಟ್ರವಾಗಿದ್ದುಕೊಂಡು, ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ವನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಪ್ರಸ್ತುತ ರಾಷ್ಟ್ರದ ಆರ್ಥಿಕ ಸ್ಥಿತಿಗತಿ ವಿವರಿಸುವುದು, ಆರ್ಥಿಕ ಕಾರ್ಯಕ್ಷಮತೆಯ ದಾರಿ ತಪ್ಪಿಸುವ ಸೂಚನೆ ಎಂದು ಹೇಳಬಹುದು. ಇದು ಕೇವಲ ಸರ್ಕಾರ ಮಾತ್ರವಲ್ಲದೇ, ಆರ್ಥಿಕ ತಜ್ಞರೆಂದು ಕರೆಯಲ್ಪಡುವವರು ಹಾಗೂ ಪ್ರಖ್ಯಾತ ಆರ್ಥಿಕ ಸಲಹಾ ಸಂಸ್ಥೆಗಳು ಕೂಡಾ ದೇಶದ ವಾಸ್ತವಿಕ ಆರ್ಥಿಕ ಸನ್ನಿವೇಶವನ್ನು ತೋರ್ಪಡಿಸುವಾಗ ತಮ್ಮ ಆಂತರಿಕ ನ್ಯೂನತೆ ಮತ್ತು ತಪ್ಪುಗಳನ್ನು ಮುಚ್ಚಿಹಾಕಿ, ಜಿಡಿಪಿಯ ಆಧಾರದ ಮೇಲೆ ದೇಶದ ಆರ್ಥಿಕತೆಯ ಹಾದಿಯನ್ನು ವಿಶ್ಲೇಷಿಸುತ್ತಿದ್ದಾರೆ.

ಹಾಗಾದರೆ ಜಿಡಿಪಿ ಎಂದರೇನು?

ಜಿಡಿಪಿ(Gross domestic product) ಅಂದರೆ ಒಟ್ಟು ರಾಷ್ಟ್ರೀಯ ಉತ್ಪನ್ನ. ಒಂದು ನಿರ್ಧಿಷ್ಟ ವರ್ಷದಲ್ಲಿ ದೇಶದಲ್ಲಿ ಉತ್ಪಾದನೆಯಾದ ಸರಕು ಹಾಗೂ ಸೇವೆಗಳ ಮಾರುಕಟ್ಟೆ ಮೌಲ್ಯವೇ ಜಿಡಿಪಿ. ಈ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಜಿಡಿಪಿ ದರವನ್ನು ಕಂಡುಹಿಡಿಯಲಾಗುತ್ತದೆ. ಈ ಒಟ್ಟು ರಾಷ್ಟ್ರೀಯ ಉತ್ಪನ್ನದಿಂದ ದೇಶದ ಒಟ್ಟು ಜನಸಂಖ್ಯೆಯನ್ನು ಭಾಗಿಸಿದರೆ ನಮಗೆ ತಲಾ ರಾಷ್ಟ್ರೀಯ ಉತ್ಪನ್ನ ಎಷ್ಟು ಎಂಬುದು ತಿಳಿಯುತ್ತದೆ. ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ವ್ಯತ್ಯಾಸವಾದಂತೆಲ್ಲ ಈ ಜಿಡಿಪಿಯಲ್ಲೂ ಏರಿಳಿತ ಉಂಟಾಗುತ್ತದೆ.

ವಾಸ್ತವವಾಗಿ, ದೇಶದ ಜಿಡಿಪಿ ಬೆಳವಣಿಗೆಯ ದರ ಮತ್ತು ದೇಶದ ಕಾರ್ಯಕ್ಷಮತೆಯನ್ನು ಜೋಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಆರ್ಥಿಕ ಕಾರ್ಯಕ್ಷಮತೆ ಮತ್ತು ದೇಶದ ಪ್ರಗತಿಯೊಂದಿಗೆ ಜಿಡಿಪಿಯನ್ನು ಜೋಡಿಸಲು ಸರ್ಕಾರವೇ ಪ್ರಯತ್ನಿಸಿದೆ. ಹೀಗಾಗಿ ದೇಶದ ಅಭಿವೃದ್ಧಿಯನ್ನು ಸೂಚಿಸಲು ಜಿಡಿಪಿ ಮಾನದಂಡಗಳನ್ನು ಅನ್ವಯಿಸಿರುವ ಸಮರ್ಥನೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅನೇಕ ಅಂಶಗಳಿವೆ. ಅದರಂತೆಯೇ ಮುಖ್ಯವಾಗಿ ಭಾರತವು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಐದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. ಇದರಿಂದಾಗಿ ದೇಶದ ಬೆಳವಣಿಗೆಯ ಅಂಶದಲ್ಲೂ ಕುಸಿತವಾಗಿದೆ.

ಜಿಡಿಪಿಯು ಸಾರ್ವಜನಿಕ ಬಳಕೆ ಅಥವಾ ಅನುಭೋಗದ ಒಟ್ಟು ವಾರ್ಷಿಕ ಹಣಕಾಸಿನ ಮೌಲ್ಯಮಾಪನವನ್ನು ಒದಗಿಸುತ್ತದೆ. ಅಲ್ಲದೆ ಸರಕು ಮತ್ತು ಸೇವೆಗಳು, ಸರ್ಕಾರದ ಖರ್ಚು, ಖಾಸಗಿ ಹೂಡಿಕೆಗಳು ಮತ್ತು ದೇಶದಲ್ಲಿ ರಫ್ತಿನಿಂದ ಪಡೆಯುವ ಗಳಿಕೆಗಳ ಸಂಪೂರ್ಣ ಮಾಹಿತಿ ನೀಡುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ, ಹೆಚ್ಚಿನ ಜಿಡಿಪಿ ಇದ್ದರೆ ಅದು ಸರ್ಕಾರದ ಬೊಕ್ಕಸಕ್ಕೆ ಒಳ್ಳೆಯದು. ಹೆಚ್ಚಿನ ಜಿಡಿಪಿಯು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯವನ್ನು ತಂದುಕೊಡಬಲ್ಲದು. ಇದರರ್ಥ ಅಭಿವೃದ್ಧಿ ಕಾರ್ಯಗಳಲ್ಲಿ ಹೂಡಿಕೆ ಮಾಡಲು ದೇಶದ ಬೊಕ್ಕಸದಲ್ಲಿ ಹೆಚ್ಚಿನ ಹಣವಿದ್ದಂತಾಗುತ್ತದೆ. ಈ ಜಿಡಿಪಿಯು ಆರ್ಥಿಕತೆಯ ವಿವಿಧ ಕ್ಷೇತ್ರಗಳ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅದಕ್ಕನುಗುಣವಾಗಿ ಯೋಜನಾ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಜಿಡಿಪಿಯೇ ಎಲ್ಲವೂ ಅಲ್ಲ... ನಿಜವಾದ ಮಾನದಂಡವೂ ಅಲ್ಲ:

ಈ ಸಕಾರಾತ್ಮಕ ಅಂಶಗಳನ್ನು ಹೊರತುಪಡಿಸಿ, ಜಿಡಿಪಿಯನ್ನು ದೇಶದ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯ ನಿರ್ಣಾಯಕ ಅಂಶವಾಗಿ ತೋರಿಸುವುದು ಹಾಸ್ಯಾಸ್ಪದ. ಹೀಗಾಗಿಯೇ ಜಿಡಿಪಿಯು ದೇಶದ ಪ್ರಗತಿ ಮತ್ತು ಕಾರ್ಯಕ್ಷಮತೆಯನ್ನು ಅಳೆಯುವ ಏಕೈಕ ಮಾಪನ ಎಂಬ ವಾದವನ್ನು ಹಲವು ಅರ್ಥಶಾಸ್ತ್ರಜ್ಞರು ಅಲ್ಲಗಳೆದಿದ್ದಾರೆ. ಜಿಡಿಪಿಯು ಬಳಕೆ ಅಥವಾ ಅನುಭೋಗದ ಸರಿಯಾದ ಚಿತ್ರಣವನ್ನು ನೀಡುವುದಿಲ್ಲ ಎಂಬುದು ಈ ವಾದದಿಂದ ತಿಳಿಯುತ್ತದೆ.

ಭಾರತದ ಜಿಡಿಪಿಯಲ್ಲಿ ಈ ಲೆಕ್ಕಾಚಾರವನ್ನು ನೋಡೋಣ. ಅಂದಾಜು ಶೇ 20 ಅಂದರೆ, ಭಾರತದ ಜನಸಂಖ್ಯೆಯ ಸುಮಾರು 25 ಕೋಟಿ ಜನರು ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿದ್ದಾರೆ. ಪ್ರತಿ ವ್ಯಕ್ತಿಯು ಬದುಕಲು ದಿನಕ್ಕೆ 32 ರೂ.(ರಂಗರಾಜನ್​ ಕಮಿಟಿಯ ಮಾನಮದಂಡಗಳ ಆಧಾರದಲ್ಲಿ) ಬೇಕು. ಇದು ದೇಶದ ಗ್ರಾಮೀಣ ಭಾಗಕ್ಕೆ ಅನ್ವಯಿಸುತ್ತದೆ. ಅಂದರೆ ವರ್ಷಕ್ಕೆ 11,664 ರೂ. ಖರ್ಚಾಗುತ್ತದೆ. ಈ ಲೆಕ್ಕಾಚಾರಗಳಿಗೆ ಅನುಗುಣವಾಗಿ ಇಡೀ ಬಿಪಿಎಲ್ ಜನಸಂಖ್ಯೆಯ ಒಟ್ಟು ಖರ್ಚು ಅಂದಾಜು ರೂ. 2,91,600 ಕೋಟಿ ರೂ. ಇದು ಒಟ್ಟು ಜಿಡಿಪಿಯ 140.78 ಲಕ್ಷ ಕೋಟಿ (2018-19)ಯ ಸುಮಾರು ಶೇ 2ರಷ್ಟು ಆಗಿದೆ.

ಉನ್ನತ ಜೀವನಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವುದೇ ಸರ್ಕಾರದ ಉದ್ದೇಶವಾಗಿದ್ದರೆ, ಗಣನೀಯ ಪ್ರಮಾಣದ ಜಿಡಿಪಿಯು ಆಗಾಗ್ಗೆ ಇದನ್ನು ರೂಪಿಸುತ್ತದೆ. ಮತ್ತು ಅಂತಹ ಯಾವುದೇ ಬೆಳವಣಿಗೆಯನ್ನು ಸೂಚಿಸಲು ವಸ್ತುಗಳ ಕೊರತೆಯಿದೆ. ಇದು ಬೆಳವಣಿಗೆ ಮತ್ತು ಕಾರ್ಯಕ್ಷಮತೆಯನ್ನು ಹೇಗೆ ಪ್ರತಿಬಿಂಸುತ್ತದೆ ಎಂಬುದೇ ಸದ್ಯದ ಪ್ರಶ್ನೆ. ಅಲ್ಲದೇ ಭಾರತದ ಒಟ್ಟಾರೆ ಆರ್ಥಿಕ ಸ್ಥಾನಮಾನದ ಮೌಲ್ಯಮಾಪನಕ್ಕಾಗಿ ಈ ಅಂಶಗಳನ್ನು ಅನ್ವಯಿಸಬಹುದೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.

ಉದಾಹರಣೆಗೆ, ಕಡಿಮೆ ಮತ್ತು ಮಧ್ಯಮ ಆದಾಯದ ಜನರನ್ನ ಒಳಗೊಂಡಿರುವ ಜನಸಂಖ್ಯೆಯ ದೊಡ್ಡ ಭಾಗವು, ಖಾಸಗಿ ಬಳಕೆಯಲ್ಲಿ 40 ಲಕ್ಷ ಕೋಟಿ ರೂ. ಮತ್ತು ಒಂದು ಸಣ್ಣ ವಿಭಾಗವು 35 ಲಕ್ಷ ಕೋಟಿ ರೂ. ಖರ್ಚು ಮಾಡಲು ಶಕ್ತವಾಗಿದ್ದರೆ, ಎಲ್ಲಾ ಸಂಭವನೀಯತೆಗಳಲ್ಲಿ ಈ ಎಲ್ಲ ಖರ್ಚುಗಳ ಒಟ್ಟು ಮೊತ್ತವು ಹೆಚ್ಚಿನ ಜೀವನ ಮಟ್ಟವನ್ನು ಸೂಚಿಸುತ್ತದೆ ಮತ್ತು ತಲಾ ಜಿಡಿಪಿಯನ್ನು ಹೆಚ್ಚಿಸುತ್ತದೆ. ಇಂತಹ ವ್ಯತ್ಯಾಸವು ಆರ್ಥಿಕ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸಬಹುದೇ ಎಂಬುದು ಚರ್ಚಾಸ್ಪದವಾಗಿದೆ.

ಅನುಭೋಗದ ಹೊರತಾಗಿ, ಜಿಡಿಪಿಯ ಇತರ ಅಂಶಗಳಾದ ಸರ್ಕಾರದ ಖರ್ಚು ಕೂಡ ಪ್ರಗತಿಗೆ ಪ್ರಚೋದನೆಯನ್ನು ನೀಡುತ್ತದೆ ಎಂದು ಪರಿಗಣಿಸಲಾಗುತ್ತದೆ. ಸರ್ಕಾರದ ಖರ್ಚಿನ ಪ್ರಕಾರವೇ ಬೆಳವಣಿಗೆಗೆ ನೇರ ಅನುಪಾತದಲ್ಲಿರುತ್ತದೆ. ಆದ್ಯತೆಗಳು ಮತ್ತು ಹಂಚಿಕೆಗಳು ಅವಶ್ಯಕತೆಗಳಿಗೆ ಹೊಂದಿಕೆಯಾದರೆ ಇದು ಬಹುಶಃ ಆಗಿರಬಹುದು.

ಜಿಡಿಪಿಯು ದೇಶದ ಬೆಳವಣಿಗೆಗೆ ಸೂಚಕವಾಗಿದ್ದರೆ, ಆರೋಗ್ಯ ಕ್ಷೇತ್ರವು ದುರ್ಬಲ ಸ್ಥಿತಿಯಲ್ಲಿರುವುದು ಹೇಗೆ? ಈ ಕ್ಷೇತ್ರದಲ್ಲಿ ದೇಶವು 103 ನೇ ಸ್ಥಾನದಲ್ಲಿರುವುದು ಯಾಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನೊಂದೆಡೆ ಭಾರತದಲ್ಲಿ ‘ಗಂಭೀರ ಹಸಿವು’ ಇನ್ನೂ ಯಾಕಿದೆ ಎನ್ನುವುದಕ್ಕೇ ಅರ್ಥಶಾಸ್ತ್ರಜ್ಞರು ಸೂಕ್ತ ಉತ್ತರ ನೀಡಲು ಸಾಧ್ಯವೇ!. ಬಹು ಆಯಾಮದ ಬಡತನ ಸೂಚ್ಯಂಕದಲ್ಲಿ ಭಾರತವು ಉನ್ನತ ಸ್ಥಾನದಲ್ಲಿದೆ. ಇನ್ನೊಂದೆಡೆ ಈ ಜಿಡಿಪಿ ಅಂಕಿ-ಅಂಶಗಳ ಆಧಾರದಲ್ಲಿ ದೇಶದ ಶಿಕ್ಷಣದ ಸಂಪೂರ್ಣ ನಿರ್ಲಕ್ಷಿತ ಸ್ಥಿತಿಯನ್ನು ವಿವರಿಸಲು ಸಾಧ್ಯವೇ ಹಾಗೂ ಕೈಗಾರಿಕಾ ಕಾರ್ಯಕ್ಷಮತೆಯು ತೀರಾ ಆಳಕ್ಕೆ ಇಳಿಯುವುದಕ್ಕೆ ವಿವರಣೆಯಿದೆಯೇ ಎಂಬುದು ಪ್ರಶ್ನಾರ್ಹ.

ಜಿಡಿಪಿಯನ್ನೊಳಗೊಂಡಿರುವ ವಿವಿಧ ಕ್ಷೇತ್ರಗಳ ಮೇಲಿನ ಸರ್ಕಾರದ ಖರ್ಚಿನಲ್ಲಿ ಉತ್ತರವಿದ್ದರೆ, ಈ ಖರ್ಚಿನ ಹಂಚಿಕೆಗಳು ಬೆಳವಣಿಗೆಯ ಅಂಶವನ್ನು ಪ್ರಚೋದಿಸುವಲ್ಲಿ ವಿಫಲವಾಗಿವೆ ಎಂಬ ನೈಜ ಚಿತ್ರಣ ಲಭಿಸುತ್ತದೆ. ಹೀಗಾಗಿ ಭಾರತದ ಅರ್ಥಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರು ಜಿಡಿಪಿ ಕಲ್ಪನೆಯನ್ನು ಹಾಳುಮಾಡುವುದನ್ನು ಮತ್ತು ಬೆಳವಣಿಗೆಯ ಭ್ರಮೆಯನ್ನು ಹರಡುವುದನ್ನು ನಿಲ್ಲಿಸುವುದು ಉತ್ತಮ.

ABOUT THE AUTHOR

...view details