ನವದೆಹಲಿ / ದಾವೋಸ್: 2030ರ ವೇಳೆಗೆ ಜಾಗತಿಕ ಜಿಡಿಪಿ 6.5 ಟ್ರಿಲಿಯನ್ ಡಾಲರ್ಗಳಷ್ಟು ಹೆಚ್ಚಾಗುವ ಸಾಮರ್ಥ್ಯವಿದ್ದು, ಇದರಲ್ಲಿ ಭಾರತದ ಪಾಲು 570 ಬಿಲಿಯನ್ ಡಾಲರ್ (40 ಲಕ್ಷ ಕೋಟಿ ರೂ.) ಇರಲಿದೆ ಎಂದು ಡಬ್ಲ್ಯುಇಎಫ್ ವರದಿ ತಿಳಿಸಿದೆ.
ಭಾರತ ನೀಡುವ 570 ಬಿಲಿಯನ್ ಡಾಲರ್ ಕೊಡುಗೆಯು ಜಾಗತಿಕವಾಗಿ ಚೀನಾ ಮತ್ತು ಅಮೆರಿಕ ಬಳಿಕದ ಸ್ಥಾನದಲ್ಲಿದೆ. ಹೆಚ್ಚುವರಿ ಜಿಡಿಪಿ ಸಾಮರ್ಥ್ಯವು ಚೀನಾದಲ್ಲಿ ಸುಮಾರು 2 ಟ್ರಿಲಿಯನ್ ಯುಎಸ್ ಡಾಲರ್ ಆಗಿದ್ದರೇ ಅಮೆರಿಕದಲ್ಲಿ 1 ಟ್ರಿಲಿಯನ್ ಡಾಲರ್ನ ಹತ್ತಿರದಲ್ಲಿ ಇರಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಜಾಗತಿಕ ನಾಯಕರು ಆನ್‌ಲೈನ್ ದಾವೋಸ್ ಅಜೆಂಡಾ ಶೃಂಗಸಭೆ ನಡೆಸುತ್ತಿರುವ ವೇಳೆ ಈ ವರದಿ ಬಿಡುಗಡೆಯಾಗಿದೆ. 2030ರ ವೇಳೆಗೆ ಕಾರ್ಮಿಕರ ಉನ್ನತೀಕರಣ ಮತ್ತು ಪುನರ್ನಿರ್ಮಾಣದಲ್ಲಿ ತ್ವರಿತ ಹೂಡಿಕೆಯು 53 ಲಕ್ಷ (ನಿವ್ವಳ) ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು. ವಿಶ್ವಾದ್ಯಂತ ಹೆಚ್ಚು ಒಳಗೊಳ್ಳುವಿಕೆ ಮತ್ತು ಸುಸ್ಥಿರ ಆರ್ಥಿಕತೆಗಳನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ ಎಂದು ಹೇಳಿದೆ.
ಭಾರತವು ಸುಮಾರು 23 ಲಕ್ಷ ಹೆಚ್ಚುವರಿ ಉದ್ಯೋಗ ನೀಡುವ ಮೂಲಕ ಅಮೆರಿಕದ 27 ಲಕ್ಷಕ್ಕೆ ಹತ್ತಿರದಲ್ಲಿದೆ. ಆದರೆ, ಚೀನಾ 17 ಲಕ್ಷಕ್ಕಿಂತ ಅಧಿಕ ನೌಕರ ಸೃಜಿಸುವ ಮುಖೇನ ಅಗ್ರ ಸ್ಥಾದಲ್ಲಿದೆ.
ಇದನ್ನೂ ಓದಿ: ಈ ವಿವಿಗೆ 4 ಕೋಟಿ ರೂ. ದಂಡ: ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ಪಿಡಬ್ಲ್ಯುಸಿಯ ಸಹಯೋಗದೊಂದಿಗೆ ರಚಿಸಲಾದ ಅಪ್‌ಸ್ಕಿಲ್ಲಿಂಗ್ ಫಾರ್ ಶೇರ್ಡ್ ಪ್ರಾಸ್ಪೆರಿಟಿ ಎಂಬ ವರದಿಯು, ನಾಲ್ಕನೇ ಕೈಗಾರಿಕಾ ಕ್ರಾಂತಿಯಿಂದ ಸೃಷ್ಟಿಯಾದ ಉದ್ಯೋಗಗಳಿಗೆ ಅಗತ್ಯವಾದ ಅನುಭವ ಮತ್ತು ಕೌಶಲ್ಯಗಳನ್ನು ಜನರಿಗೆ ವೇಗವಾಗಿ ಲಭ್ಯವಾಗಲಿವೆ. 2030ರ ವೇಳೆಗೆ ಜಾಗತಿಕ ಉತ್ಪಾದಕತೆ ಶೇ 3ರಷ್ಟು ಹೆಚ್ಚಳವಾಗಲಿದೆ.
ಕೋವಿಡ್ 19ಕ್ಕಿಂತ ಮುಂಚೆಯೇ ಯಾಂತ್ರೀಕೃತಗೊಂಡ ಮತ್ತು ಡಿಜಿಟಲೀಕರಣದ ಏರಿಕೆಯು ಜಾಗತಿಕ ಉದ್ಯೋಗ ಮಾರುಕಟ್ಟೆಗಳನ್ನು ಪರಿವರ್ತಿಸುತ್ತಿತ್ತು. ಇದರ ಪರಿಣಾಮವಾಗಿ ದೊಡ್ಡ - ಪ್ರಮಾಣದ ಕೌಶಲ್ಯ ವೃದ್ಧಿ ಮತ್ತು ಮರುಹಂಚಿಕೆ ಅಗತ್ಯವಾಗಿದೆ. ಈಗ, ಈ ಅಗತ್ಯವು ಇನ್ನಷ್ಟು ಮಹತ್ವದ್ದಾಗಿದೆ ಎಂದು ಪಿಡಬ್ಲ್ಯೂಸಿ ಜಾಗತಿಕ ಅಧ್ಯಕ್ಷ ಬಾಬ್ ಮೊರಿಟ್ಜ್ ಹೇಳಿದರು.
ಸಾಂಕ್ರಾಮಿಕ ರೋಗದಿಂದ ಲಕ್ಷಾಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಆದರೆ , ಯಾಂತ್ರೀಕೃತ ಮತ್ತು ಡಿಜಿಟಲೀಕರಣ ವೇಗಗೊಳ್ಳುವುದರಿಂದ ಅನೇಕರು ಮತ್ತೆ ಹಿಂತಿರುಗುವ ಸಾಧ್ಯತೆಯಿಲ್ಲ ಎಂದರ್ಥ. ನಾಳೆಯ ಉದ್ಯೋಗಗಳಲ್ಲಿ ನಮಗೆ ಹೊಸ ಹೂಡಿಕೆಗಳು ಬೇಕಾಗುತ್ತವೆ. ಈ ಹೊಸ ಪಾತ್ರಗಳನ್ನು ನಿಭಾಯಿಸಲು ಯುವಜನರನ್ನು ತಯಾರು ಮಾಡುವ ಶಿಕ್ಷಣ ವ್ಯವಸ್ಥೆಗಳಲ್ಲಿ ತೊಡಗಿಸಿಕೊಳ್ಳಲು ಹೊಸ ಆರ್ಥಿಕತೆ ಮತ್ತು ನವ ಸಮಾಜದ ಜನರ ಅವಶ್ಯಕತೆ ಇದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪಕ ನಿರ್ದೇಶಕಿ ಸಾಡಿಯಾ ಜಾಹಿದಿ ಹೇಳಿದರು.