ನವದೆಹಲಿ:ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ಬಹುಕೋಟಿ ಮೊತ್ತದ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿ ಸಹೋದರ ನೆಹಾಲ್ ದೀಪಕ್ ಮೋದಿ ವಿರುದ್ಧ ಇಂಟರ್ ಪೋಲ್ (ಇಂಟರ್ ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಜೇಷನ್) ರೆಡ್ ಕಾರ್ನಾರ್ ನೋಟಿಸ್ ಹೊರಡಿಸಿದೆ.
ಸಾವಿರಾರು ಕೋಟಿ ವಂಚಿಸಿ ಆರ್ಥಿಕ ಅಪರಾಧ ಎಸಗಿದ ನೆಹಾಲ್ ದೀಪಕ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಜಾರಿ ನಿರ್ದೇಶನಾಲಯವು (ಜಾನಿ) ಕಳೆದ ವರ್ಷದಿಂದಲೇ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗೆ ಮನವಿ ಮಾಡಿಕೊಂಡು ಬರುತ್ತಿತ್ತು. ಕೊನೆಗೂ ಇಡಿ ಕೋರಿಕೆಗೆ ಸ್ಪಂದಿಸಿ ರೆಡ್ ಕಾರ್ನರ್ ನೋಟಿಸಿ ಹೊರಡಿಸಿದೆ.