ನವದೆಹಲಿ :ಖಾಸಗೀಕರಣಗೊಳ್ಳುವ ಸಾಧ್ಯತೆ ಇರುವ ಬ್ಯಾಂಕ್ಗಳ ಕಾರ್ಮಿಕರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಯ ನೀಡಿದರು.
ಖಾಸಗೀಕರಣಗೊಳ್ಳುವ ಸಾಧ್ಯತೆ ಇರುವ ಬ್ಯಾಂಕ್ಗಳ ಕಾರ್ಮಿಕರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು. ಅವರ ಸಂಬಳ ಅಥವಾ ಅಥವಾ ಪಿಂಚಣಿ ಸೇರಿದಂತೆ ಏನೇ ಇರಲಿ ಎಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ ಎಂದು ಬ್ಯಾಂಕ್ ಖಾಸಗೀಕರಣ ವಿರುದ್ಧ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಆನಂದ್ ಮಹೀಂದ್ರಾರ ಬಾಲ್ಯದ ಆ 'ನಂಬಿಕೆ' ಸುಳ್ಳಾಗಿಸಿದ ಭಾರತೀಯ ಎಂಜಿನಿಯರ್ಸ್!
ನಾವು ಖಾಸಗೀಕರಣ ಅಥವಾ ಹೂಡಿಕೆಯ ಬಗ್ಗೆ ಮಾತನಾಡುವಾಗಲೂ ಸಹ ಪ್ರತಿ ಘಟಕಗಳು ಆರ್ಥಿಕತೆಗೆ ಪರಿಪೂರ್ಣವಾಗುತ್ತವೆ ಎಂಬುದನ್ನು ನಾವು ಗುರುತಿಸುತ್ತೇವೆ. ಈ ಘಟಕಗಳಿಗೆ ಹೂಡಿಕೆಯ ಅಗತ್ಯವಿದೆ. ಕಾರ್ಮಿಕರ ಹಿತಾಸಕ್ತಿಗಳ ರಕ್ಷಣೆ ಮತ್ತು ಸಂಸ್ಥೆಯು ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಭರವಸೆ ನೀಡಿದರು.
ಖಾಸಗೀಕರಣಗೊಳ್ಳುವ ಸಾಧ್ಯತೆ ಇರುವ ಬ್ಯಾಂಕ್ಗಳು ಹಾಗೂ ಸಂಸ್ಥೆಗಳು ಖಾಸಗೀಕರಣದ ನಂತರವೂ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಸಿಬ್ಬಂದಿಯ ಹಿತಾಸಕ್ತಿಗಳನ್ನು ರಕ್ಷಿಸಲಾಗುತ್ತದೆ ಎಂದರು.