ಮುಂಬೈ: ಭಾರತದಲ್ಲಿ ಹಣದುಬ್ಬರವು 2021ರಲ್ಲಿ ಏರಿಕೆಯಾಗಬಹುದು. ಆದರೆ, ವರ್ಷಾಂತ್ಯದ ವೇಳೆಗೆ ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ತಿಳಿಸಿದೆ.
ಸರಾಗ ಪೂರೈಕೆಗೆ ಅಡ್ಡಿಯಾದ ನಿರ್ಬಂಧಗಳಿಂದಾಗಿ 2021ರ ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಹಣದುಬ್ಬರವು ಏರಿಕೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಸಿಪಿಐ ಹಣದುಬ್ಬರವು 2021ರ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ (2021 ಕ್ಯಾಲೆಂಡರ್ ವರ್ಷದಲ್ಲಿ (1ನೇ ತ್ರೈಮಾಸಿಕ) ಸರಾಸರಿ ಶೇ 6ರಷ್ಟು ಮತ್ತು 2022ರ ವಿತ್ತೀಯ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ (ಸಿವೈ 21 ಕ್ಯೂ2) ಶೇ 5.6ರಷ್ಟು ಇರಲಿದೆ. 2021ರ ವರ್ಷಾಂತ್ಯದ ವೇಳೆಗೆ ಶೇ 4.3ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಿದೆ.