ಕರ್ನಾಟಕ

karnataka

ETV Bharat / business

ವಿದ್ಯುತ್​, ಗಣಿಗಾರಿಕೆ, ಉತ್ಪಾದನಾ ಕ್ಷೇತ್ರಗಳ ಕಳಪೆ ಸಾಧನೆ... ದೇಶಿ ಆರ್ಥಿಕತೆಗೆ ವೇದನೆ! - ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ

ಉತ್ಪಾದನೆ ವಲಯ ಮಾಪನದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಅನ್ವಯ ವಿದ್ಯುತ್, ಗಣಿಗಾರಿಕೆ ಮತ್ತು ಉತ್ಪಾದನಾ ಕ್ಷೇತ್ರಗಳ ಕಳಪೆ ಸಾಧನೆಯಿಂದಾಗಿ ಈ ಕ್ಷೇತ್ರವು ಕುಸಿತದ ಬೆಳವಣಿಗೆ ದಾಖಲಿಸಿದೆ. 2018ರ ಅಕ್ಟೋಬರ್​ನಲ್ಲಿ ಇದು ಶೇ. 8.4ರಷ್ಟು ಇತ್ತು ಎಂದು ಇಂದು ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ತಿಳಿಸಿದೆ.

Industrial
ಉತ್ಪಾದನೆ ವಲಯ

By

Published : Dec 12, 2019, 7:26 PM IST

ನವದೆಹಲಿ: ಕೈಗಾರಿಕಾ ಉತ್ಪಾದನಾ ವಲಯವು ಅಕ್ಟೋಬರ್‌ನಲ್ಲಿ ಶೇ. 3.8ರಷ್ಟು ಕುಸಿತ ಕಂಡಿದೆ ಎಂದು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ತಿಳಿಸಿದೆ.

ಕೈಗಾರಿಕಾ ಉತ್ಪಾದನಾ ವಲಯ ಮಾಪನದ ಐಐಪಿ ಅನ್ವಯ, ವಿದ್ಯುತ್, ಗಣಿಗಾರಿಕೆ ಮತ್ತು ಉತ್ಪಾದನಾ ಕ್ಷೇತ್ರಗಳ ಕಳಪೆ ಸಾಧನೆಯಿಂದಾಗಿ ಈ ಕ್ಷೇತ್ರವು ಕುಸಿತ ದಾಖಲಿಸಿದೆ. 2018ರ ಅಕ್ಟೋಬರ್​ನಲ್ಲಿ ಇದು ಶೇ. 8.4ರಷ್ಟು ಇತ್ತು ಎಂದು ಇಂದು ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ತಿಳಿಸಿದೆ.

ವಿದ್ಯುತ್​, ಗಣಿಗಾರಿಕೆ, ಉತ್ಪಾದನಾ ಕ್ಷೇತ್ರಗಳ ಸಾಧನೆ

ಅಕ್ಟೋಬರ್‌ನಲ್ಲಿ ತಯಾರಿಕಾ ಕ್ಷೇತ್ರದ ಉತ್ಪಾದನೆಯು ಶೇ. 3.8ರಷ್ಟು ಕುಸಿತ ಕಂಡುಬಂದಿದೆ. ಒಂದು ವರ್ಷದ ಹಿಂದಿನ ಶೇ. 8.2ರಷ್ಟು ಬೆಳವಣಿಗೆಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇ. 2.1 ರಷ್ಟು ಕುಸಿತ ದಾಖಲಿಸಿದೆ.

ವಿದ್ಯುತ್ ಉತ್ಪಾದನೆಯು ಅಕ್ಟೋಬರ್‌ನಲ್ಲಿ ಶೇ. 12.2 ರಷ್ಟು ಕುಸಿದಿದೆ. ಇದು ಹಿಂದಿನ ವರ್ಷದಲ್ಲಿ ಶೇ. 10.8ರಷ್ಟು ಬೆಳವಣಿಗೆಗೆ ಇತ್ತು. ಗಣಿಗಾರಿಕೆ ಉತ್ಪಾದನೆಯು ಪರಿಶೀಲನೆಯ ಮಾಸಿಕದಲ್ಲಿ ಶೇ. 8ರಷ್ಟು ಕುಸಿದಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ. 7.3ರಷ್ಟು ಬೆಳವಣಿಗೆ ಸಾಧಿಸಿತ್ತು.

ABOUT THE AUTHOR

...view details