ಕರ್ನಾಟಕ

karnataka

ETV Bharat / business

ಮಗುವನ್ನು ಜಗತ್ತಿಗೆ ಕರೆ ತರುವ ಮುನ್ನ ಯೋಚಿಸಿ.. ಹೀಗಂತಾ ಪ್ರಧಾನಿ ಹೇಳಿದ್ಯಾಕೆ? - ಜನಸಂಖ್ಯೆ ನಿಯಂತ್ರಣ

ಸಾರ್ವಜನಿಕರು ತಮ್ಮ ಮಗುವನ್ನು ಜಗತ್ತಿಗೆ ಕರೆ ತರುವ ಮುನ್ನ ಆ ಮಗುವಿಗೆ ನ್ಯಾಯ ಒದಗಿಸಬಹುದೇ, ಅವಳು ಅಥವಾ ಅವನು ಬಯಸಿದನ್ನು ಕೊಡಲು ಸಾಧ್ಯವೆ ಎಂಬದನ್ನು ಪ್ರಶ್ನಿಸಿಕೊಳ್ಳಬೇಕು. ಈ ಬಗ್ಗೆ ಸಾಮಾಜಿಕ ಜಾಗೃತಿಯ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಪ್ರತಿಪಾದಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Aug 15, 2019, 1:29 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲಿನ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಜನಸಂಖ್ಯೆ ನಿಯಂತ್ರಣದ ಅಗತ್ಯತೆಯನ್ನು ಪ್ರತಿಪಾದಿಸಿದರು.

ಜನಸಂಖ್ಯೆ ಸ್ಫೋಟದ ಬಗ್ಗೆ ಹೆಚ್ಚಿನ ಚರ್ಚೆ ಹಾಗೂ ಜಾಗೃತಿ ಮೂಡಬೇಕಿದೆ. ಜನಸಂಖ್ಯೆ ಹೆಚ್ಚಾದಷ್ಟು ಭವಿಷ್ಯದ ಪೀಳಿಗೆಗೆ ಇನ್ನಷ್ಟು ಸಮಸ್ಯೆಗಳು ತಂದೊಡಲಿದೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕರು ತಮ್ಮ ಮಗುವನ್ನು ಜಗತ್ತಿಗೆ ಕರೆ ತರುವ ಮುನ್ನ ಆ ಮಗುವಿಗೆ ನ್ಯಾಯ ಒದಗಿಸಬಹುದೇ, ಅವಳು ಅಥವಾ ಅವನು ಬಯಸಿದನ್ನು ಕೊಡಲು ಸಾಧ್ಯವೆ ಎಂಬದನ್ನು ಪ್ರಶ್ನಿಸಿಕೊಳ್ಳಬೇಕು. ಈ ಬಗ್ಗೆ ಸಾಮಾಜಿಕ ಜಾಗೃತಿಯ ಅವಶ್ಯಕತೆಯಿದೆ ಎಂದರು.

ಸಣ್ಣ ಕುಟುಂಬಗಳನ್ನು ಹೊಗಳಿದ ಪ್ರಧಾನಿ, ಕುಟುಂಬ ಚಿಕ್ಕದಾದಷ್ಟು ದೇಶದ ಆಗು- ಹೋಗುಗಳನ್ನು ಗಮಿನಿಸುತ್ತಾ ದೇಶಭಕ್ತಿ ಮೂಡುತ್ತದೆ. ಚಿಕ್ಕ ಕುಟುಂಬ ನೀತಿಯನ್ನು ಪಾಲಿಸುವವರು ದೇಶದ ಅಭಿವೃದ್ಧಿಗೆ ತಮ್ಮ ಪಾಲನ್ನು ನೀಡುತ್ತಿದ್ದಾರೆ. ಇದು ಕೂಡ ದೇಶಭಕ್ತಿಯ ಸ್ವರೂಪ ಎಂದು ಹೇಳಿದರು.

ABOUT THE AUTHOR

...view details