ಹೈದರಾಬಾದ್:ಕಳೆದ ವಾರ ಇಂಡಿಪೆಂಡೆಂಟ್ ಎಕನಾಮಿಕ್ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಮಾಸಿಕ ದತ್ತಾಂಶವು ಭಾರತದ ನಿರುದ್ಯೋಗ ದರ ಜೂನ್‌ನಲ್ಲಿ ಶೇ. 11ಕ್ಕೆ ತೀವ್ರವಾಗಿ ಕುಸಿದಿದ್ದು, ಮೇ ಮತ್ತು ಏಪ್ರಿಲ್ ಎರಡೂ ತಿಂಗಳಲ್ಲಿ ಶೇ. 23.5ರಷ್ಟಿತ್ತು.
ಗ್ರಾಮೀಣ ನಿರುದ್ಯೋಗ ದರವು ಜೂನ್‌ನಲ್ಲಿ ಶೇ. 10.5ರಷ್ಟಿತ್ತು. ಇದು ಮೇ ತಿಂಗಳಲ್ಲಿ ಶೇ. 22.5ರಷ್ಟಿತ್ತು. ಆದರೆ ನಗರ ನಿರುದ್ಯೋಗವು ಶೇ. 12ರಷ್ಟು ಆಗಿದ್ದು, ತಿಂಗಳ ಹಿಂದೆ ಶೇ. 25.8ರಷ್ಟಿತ್ತು.
ಜೂನ್ ಮಾಸಿಕದ ಉದ್ಯೋಗ ಸಂಖ್ಯೆಯ ಚೇತರಿಕೆಯು ಕೆಲವು ಹೂಡಿಕೆದಾರರ ಹುರುಪಿಗೆ ಕಾರಣವಾಗಿದೆ. ಕೊರೊನಾದಿಂದ ಹಳಿ ತಪ್ಪಿದ ಆರ್ಥಿಕತೆಯು ಮತ್ತೆ ಹಾದಿಯತ್ತ ಮರಳುತ್ತಿದೆ ಎಂಬುದರ ಸುಳಿವು ನೀಡಿದಂತಿದೆ. ಆದರೆ ದತ್ತಾಂಶವನ್ನು ತೀರಾ ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ರೆಡ್ ಫ್ಲಾಗ್ನಲ್ಲಿ ತೋರುತ್ತಿವೆ.
ಕೋವಿಡ್-19 ಸಾಂಕ್ರಾಮಿಕ ಪ್ರೇರೇಪಿತವಾಗಿ ಮಾರ್ಚ್ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಭಾರತದಲ್ಲಿ 12.2 ಕೋಟಿ ಉದ್ಯೋಗಗಳು ನಷ್ಟವಾದವು ಎಂದು ಸಿಎಂಐಇ ಡೇಟಾ ಹೇಳುತ್ತದೆ. ಕ್ರಮೇಣವಾಗಿ ನಿರ್ಬಂಧ ಸಡಿಲಿಸಿದಂತೆ ಮೇ ತಿಂಗಳಲ್ಲಿ 2.1 ಕೋಟಿ ಉದ್ಯೋಗಗಳು ಮರಳಿದ್ದರೆ, ಜೂನ್‌ನಲ್ಲಿ 7 ಕೋಟಿ ಉದ್ಯೋಗಿಗಳು ಕೆಲಸಕ್ಕೆ ವಾಪಸ್ ಆಗಿದ್ದಾರೆ.
ನಿರುದ್ಯೋಗ ಏರಿಳಿತ ಅಂಕಿ-ಅಂಶದ ನಕ್ಷೆ ಚೇತರಿಸಿಕೊಂಡ 7 ಕೋಟಿ ಉದ್ಯೋಗಗಳಲ್ಲಿ ಕೇವಲ 39 ಲಕ್ಷ ಅಥವಾ ಶೇ. 5.5ರಷ್ಟ ಮಾತ್ರ ಸಂಬಳ ಪಡೆಯುವ ಉದ್ಯೋಗಗಳಾಗಿವೆ. ಉಳಿದ ಚೇತರಿಕೆಯು ಹೆಚ್ಚಾಗಿ ಅನೌಪಚಾರಿಕ ಮತ್ತು ಕೃಷಿ ಉದ್ಯೋಗಗಳಿಂದ ಬಂದಿದೆ ಎಂದು ಸಿಎಂಇಐ ತಿಳಿಸಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುಮಾರು 1.8 ಕೋಟಿ ವೇತನ ಉದ್ಯೋಗಗಳು ಕಡಿತಗೊಂಡವು. ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸುವುದರ ಜೊತೆಗೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ) ಚಟುವಟಿಕೆಗಳಲ್ಲಿನ ಹಠಾತ್ ಏರಿಕೆಯು ದೇಶದ ಉದ್ಯೋಗ ಮಾರುಕಟ್ಟೆಯ ಚೇತರಿಕೆಗೆ ಪ್ರಮುಖ ಕಾರಣವಾಯಿತು ಎಂದು ಸಿಎಂಐಇ ವಿವರಿಸಿದೆ.