ನವದೆಹಲಿ:ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ಕಳೆದ ಹಣಕಾಸು ವರ್ಷದಲ್ಲಿ ಶೇ.90 ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ವಿದೇಶಿ ನೇರ ಹೂಡಿಕೆಯ ಹರಿವು ತೀವ್ರವಾಗಿ ಕುಂಠಿತಗೊಂಡ ಕ್ಷೇತ್ರಗಳಲ್ಲಿ ಒಂದಾಗಿದೆ.
ಏಕೆಂದರೆ ಟೆಲಿಕಾಂನಲ್ಲಿನ ಎಫ್‌ಡಿಐ ಒಂದು ವರ್ಷದ ಅವಧಿಯಲ್ಲಿ 4,400 ಮಿಲಿಯನ್ ಡಾಲರ್ ನಿಂದ 400 ಮಿಲಿಯನ್ ಡಾಲರ್‌ಗೆ ಕಡಿಮೆಯಾಗಿದೆ , ಇತ್ತೀಚಿನ ಅಧಿಕೃತ ಅಂಕಿ ಅಂಶಗಳಲ್ಲಿ ಈ ಅಂಶ ಬಹಿರಂಗವಾಗಿದೆ.
ಲೋಕಸಭೆಯಲ್ಲಿ ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಹಂಚಿಕೊಂಡ ಮಾಹಿತಿಯ ಪ್ರಕಾರ, 2018-19ನೇ ಹಣಕಾಸು ವರ್ಷದಲ್ಲಿ ಭಾರತವು ಟೆಲಿಕಾಂ ವಲಯದಲ್ಲಿ 2667.91 ಮಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಹರಿದು ಬಂದಿತ್ತು.
2018-19ನೇ ಹಣಕಾಸು ವರ್ಷದಲ್ಲಿ ಟೆಲಿಕಾಂ ವಲಯದಲ್ಲಿ ಹಠಾತ್ ಏರಿಕೆ ಕಂಡಿತ್ತು. 1,777.25 ಮಿಲಿಯನ್ ಡಾಲರ್‌ನಿಂದ 4,445.16 ಮಿಲಿಯನ್ ಡಾಲರ್ ಅಥವಾ ಶೇಕಡಾ 66ಕ್ಕಿಂತ ಹೆಚ್ಚಿನ ಏರಿಕೆಯಾಗಿತ್ತು.
ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ ಸಮಯದಲ್ಲಿ ಟೆಲಿಕಾಂ ವಲಯದಲ್ಲಿ ಎಫ್‌ಡಿಐ ಹೂಡಿಕೆಯು ತೀವ್ರ ಕುಸಿತ ಅನುಭವಿಸಿತು. ಇದು ದೇಶದಲ್ಲಿ 4,26,000 ಕ್ಕೂ ಹೆಚ್ಚು ಸೋಂಕಿತರನ್ನು ಹಾಗೂ ಪ್ರಪಂಚದಾದ್ಯಂತ 4.2 ದಶಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ.
ಇದನ್ನೂ ಓದಿ: ಭಾರತೀಯ ಪ್ರಜಾಪ್ರಭುತ್ವದ ಅಪಖ್ಯಾತಿಗೆ ನಡೆದ ಪ್ರಯತ್ನವೇ ಫೋನ್ ಹ್ಯಾಕಿಂಗ್: ಕೇಂದ್ರ ಸಚಿವ ವೈಷ್ಣವ್
ಕಳೆದ ವರ್ಷ, ದೇಶವು ಕೇವಲ 392.11 ಮಿಲಿಯನ್ ಡಾಲರ್ ಎಫ್‌ಡಿಐ ಪಡೆದಿದೆ. ಇದು 2019-20ರಲ್ಲಿ ಟೆಲಿಕಾಂ ವಲಯದಲ್ಲಿ ಪಡೆದ ಎಫ್‌ಡಿಐಗೆ ಹೋಲಿಸಿದರೆ ಶೇಕಡಾ 90ಕ್ಕಿಂತಲೂ ಕಡಿಮೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ದೇಶವು ಟೆಲಿಕಾಂ ವಲಯದಲ್ಲಿ $ 295.92 ಮಿಲಿಯನ್ ಎಫ್‌ಡಿಐ ಪಡೆದಿದ್ದರಿಂದ ಈ ವರ್ಷ ಪರಿಸ್ಥಿತಿ ಸುಧಾರಿಸಬಹುದು. ಇದು ಕಳೆದ ವರ್ಷ ಟೆಲಿಕಾಂ ಕ್ಷೇತ್ರದಲ್ಲಿ ಪಡೆದ ಒಟ್ಟು ಎಫ್‌ಡಿಐನ ಶೇ. 75 ಕ್ಕಿಂತ ಹೆಚ್ಚಿದೆ.
ಇಬ್ಬರು ಲೋಕಸಭಾ ಸದಸ್ಯರಾದ ಹೀನಾ ಗವಿತ್ ಮತ್ತು ಉನ್ಮೇಶ್ ಭಯ್ಯಾ ಸಾಹೇಬ್ ಪಟೇಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಂವಹನ ಮತ್ತು ಐಟಿ ಸಚಿವ ವೈಷ್ಣವ್, ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ (NDCP), 2018 ಡಿಜಿಟಲ್ ಸಂವಹನ ವಲಯದಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸುವ ಗುರಿಯನ್ನು ಹೊಂದಿದೆ. ಆದರೆ, ನಿಯಮಗಳಲ್ಲಿ ಎಫ್‌ಡಿಐ ಆಕರ್ಷಿಸುವ ನಿರ್ದಿಷ್ಟ ಗುರಿ ಇಲ್ಲ ಎಂದು ಹೇಳಿದ್ದಾರೆ.