ಕರ್ನಾಟಕ

karnataka

ETV Bharat / business

ಭಾರತದ ರಿಯಲ್​ ಕಹಾನಿ ಈಗ ಶುರುವಾಗಿದೆ: ವಿಶ್ವಕ್ಕೆ ಅಮಿತಾಭ್ ಎಚ್ಚರಿಕೆ - ನೀತಿ ಆಯೋಗ

ಭಾರತದ ನಿಜವಾದ ಕಥೆ ಇದೀಗ ಆರಂಭವಾಗಿದೆ. ನಮ್ಮಲ್ಲಿ ನಗರೀಕರಣ ಪ್ರಕ್ರಿಯೆ, ಮೂಲಸೌಕರ್ಯಗಳ ಒದಗಿಸುವಿಕೆ, ತಂತ್ರಜ್ಞಾನದ ವ್ಯಾಪಕ ಬಳಕೆಯ ಪ್ರವೃತ್ತಿ ಇದೀಗ ಶುರುವಾಗಿದೆ. ಮುಂದಿನ ಮೂರು ದಶಕಗಳಲ್ಲಿ ನಾವು ಕೈಗೊಂಡ ಸುಧಾರಣೆಗಳು ಭಾರಿ ಬೆಳವಣಿಗೆ ಆಗುವುದನ್ನು ನೀವು ನೋಡಬಹುದು ಎಂದು ನೀತಿ ಆಯೋಗದ ಸಿಇಒ ಅಮಿತಾಭ್​ ಕಾಂತ್​ ವಾಷಿಂಗ್ಟನ್ ಡಿಸಿಯಲ್ಲಿ ಶಿಕ್ಷಣ ತಜ್ಞರು, ಸಂಶೋಧಕರು, ಕಾರ್ಪೊರೇಟ್​ ಮುಖಂಡರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದರು.

India
ಭಾರತ

By

Published : Dec 14, 2019, 3:30 PM IST

ವಾಷಿಂಗ್ಟನ್​​​: ಕಳೆದ ಕೆಲ ವರ್ಷಗಳಿಂದ ಮೋದಿ ಸರ್ಕಾರ ತೆಗೆದುಕೊಂಡ ಮಹತ್ವಾಕಾಂಕ್ಷೆಯ ಸುಧಾರಣೆಗಳು ಭಾರತವನ್ನು ದೀರ್ಘಾವಧಿಯ ಸ್ಪರ್ಧಾತ್ಮಕ ಮತ್ತು ಉತ್ಪಾದಕ ಸಮರ್ಥ್ಯದ ಆರ್ಥಿಕತೆಯತ್ತ ಕರೆದೊಯ್ಯಲಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಮಿತಾಭ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಶಿಕ್ಷಣ ತಜ್ಞರು, ಸಂಶೋಧಕರು, ಕಾರ್ಪೊರೇಟ್​ ಮುಖಂಡರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಭಾರತದ ಬಗ್ಗೆ ಹೆಚ್ಚಿನ ಸಕಾರಾತ್ಮಕತೆ ಮನೋಭಾವ ಮೂಡುತ್ತಿದೆ. ಕ್ರೋನಿ ಬಂಡವಾಳಶಾಹಿಗೆ (ಆಪ್ತಕೂಟ ಬಂಡವಾಳಶಾಹಿ) ಅಂತ್ಯ, ದಿವಾಳಿತನ ನೀತಿ ಜಾರಿ, ಏಕರೂಪ ತೆರಿಗೆಯ ಜಿಎಸ್​ಟಿ ಜಾರಿ, ನೇರ ಲಾಭ ವರ್ಗಾವಣೆ, ರಿಯಲ್​ ಎಸ್ಟೇಟ್​ ವಹಿವಾಟು ನಿಯಂತ್ರಿಸುವ ರೇರಾ ಸೇರಿದಂತೆ ಭಾರತದ ಆರ್ಥಿಕತೆಯನ್ನು ಜನರು ಮೂಲಭೂತ ಸುಧಾರಣಾ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಭಾರತವು ಮುಂದೆ ದೀರ್ಘಾವಧಿಯ ಸ್ಪರ್ಧಾತ್ಮಕ ಮತ್ತು ಪರಿಣಾಮಕಾರಿ ಉತ್ಪಾದನಾ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಹೇಳಿದರು.

ಭಾರತದ ನಿಜವಾದ ಕಥೆ ಇದೀಗ ಆರಂಭವಾಗಿದೆ. ನಮ್ಮಲ್ಲಿ ನಗರೀಕರಣ ಪ್ರಕ್ರಿಯೆ, ಮೂಲಸೌಕರ್ಯಗಳ ಒದಗಿಸುವಿಕೆ, ತಂತ್ರಜ್ಞಾನದ ವ್ಯಾಪಕ ಬಳಕೆಯ ಪ್ರವೃತ್ತಿ ಇದೀಗ ಶುರುವಾಗಿದೆ. ಮುಂದಿನ ಮೂರು ದಶಕಗಳಲ್ಲಿ ನಾವು ಕೈಗೊಂಡ ಸುಧಾರಣೆಗಳು ಭಾರಿ ಬೆಳವಣಿಗೆ ಆಗುವುದನ್ನು ನೀವು ನೋಡಬಹುದು ಎಂದು ಕಾಂತ್ ಭವಿಷ್ಯ ನುಡಿದರು.

ಇತ್ತೀಚಿನ ವರ್ಷಗಳಲ್ಲಿನ ಭಾರತದ ಆರ್ಥಿಕ ಕುಸಿತದ ಅಂಕಿಅಂಶಗಳ ಪ್ರಶ್ನೆಗೆ ಉತ್ತರಿಸಿದ ಕಾಂತ್, 'ಇವೆಲ್ಲಾ ಅಲ್ಪಾವಧಿಯ ಸೂಚಕಗಳು. ಭಾರತವು 5 ಟ್ರಿಲಿಯನ್ ಡಾಲರ್​ ಆರ್ಥಿಕತೆಯ ಹಾದಿಯಲ್ಲಿ ಸಾಗುತ್ತಿದೆ. ವಿಶ್ವ ಬ್ಯಾಂಕ್​ನ ಸುಲಭ ವ್ಯಾಪಾರ ಮಾಡುವ ರಾಷ್ಟ್ರಗಳ ಸಾಲಿನಲ್ಲಿ ಭಾರತ, ಮುಂದಿನ ವರ್ಷ ಟಾಪ್ 50ರ ಒಳಗೆ ಬರಲಿದೆ. ಮುಂದಿನ ಮೂರು ವರ್ಷಗಳಲ್ಲಿ ಅಗ್ರ 25 ಒಳಗೆ ಸ್ಥಾನ ಪಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details