ನವದೆಹಲಿ: ಕೋವಿಡ್ ಆತಂಕ ಬಹುತೇಕ ಕಡಿಮೆಯಾಗುತ್ತಿರುವ ಬೆನ್ನಲ್ಲೇ ದೇಶ ಆರ್ಥಿಕತೆ ಚೇತರಿಕೆಯತ್ತ ಸಾಗಿದ್ದು, ಕೇಂದ್ರದ ನಿವ್ವಳ ನೇರ ತೆರಿಗೆ ಸಂಗ್ರಹ 2022ರಲ್ಲಿ (ಮಾರ್ಚ್ 16 ರವರೆಗೆ) ಶೇ.48 ಹೆಚ್ಚಿದೆ.
ಈ ವರ್ಷ 13,63,038.3 ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹವಾಗಿದೆ. ಆದರೆ ಇದೇ ಅಧಿಯ ಹಿಂದಿನ ವರ್ಷದಲ್ಲಿ 9,18,430.5 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಷನ್ ತೆರಿಗೆ (ಸಿಐಟಿ) 7,19,035 ಕೋಟಿ ರೂ.(ಮರುಪಾವತಿ ನಿವ್ವಳ), ಭದ್ರತಾ ವಹಿವಾಟು ತೆರಿಗೆ (ಎಸ್‌ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 6,40,588.3 ಕೋಟಿ (ನಿವ್ವಳ) ಸೇರಿದೆ.