ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿ ಇಕೋಱಪ್ ಅಂದಾಜಿನ ಅನ್ವಯ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ 16.5ರಷ್ಟು ಕುಗ್ಗಲಿದೆ.
ಮೇ ತಿಂಗಳ ಆರಂಭದಲ್ಲಿ ಇಕೋಱಪ್ 2021ರ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಜಿಡಿಪಿ ಸಂಕೋಚನ ಶೇ 20ಕ್ಕಿಂತ ಅಧಿಕ ಎಂದು ಅಂದಾಜಿಸಿತ್ತು. ಈಗ ಅದು ಶೇ 16.5ರಷ್ಟು ತಗ್ಗಲಿದೆ ಎಂದು ದೇಶದ ಅತಿದೊಡ್ಡ ಸಾಲದಾತ ಎಚ್ಚರಿಸಿದೆ.
ಕಾರ್ಪೊರೇಟ್ ಜಿವಿಎಯಲ್ಲಿನ ಕುಸಿತ (ಕೆಲವು ಹಣಕಾಸು ಮತ್ತು ಹಣಕಾಸೇತರ ಸಂಸ್ಥೆಗಳ ನಿರೀಕ್ಷಿತ ಫಲಿತಾಂಶಗಳಿಗಿಂತ ಉತ್ತಮವಾಗಿವೆ) 2021ರ ಮೊದಲ ತ್ರೈಮಾಸಿಕದ ಆದಾಯ ಕುಸಿತಕ್ಕಿಂತ ಗಮನಾರ್ಹವಾಗಿ ಉತ್ತಮವಾಗಿದೆ ಎಂಬುದು ಪಟ್ಟಿ ಮಾಡಿದ ಕಂಪನಿಗಳ ಫಲಿತಾಂಶಗಳಿಂದ ತಿಳಿದುಬಂದಿದೆ.
ಇಲ್ಲಿಯವರೆಗೆ ಸುಮಾರು 1,000 ಪಟ್ಟಿ ಮಾಡಿದ ಘಟಕಗಳು ಮೊದಲ ತ್ರೈಮಾಸಿಕದಲ್ಲಿ ತಮ್ಮ ಫಲಿತಾಂಶಗಳನ್ನು ಪ್ರಕಟಿಸಿವೆ. ಫಲಿತಾಂಶಗಳ ಪೈಕಿ ಟಾಪ್‌ಲೈನ್‌ನಲ್ಲಿ ಶೇ 25ಕ್ಕಿಂತ ಹೆಚ್ಚು ಕುಸಿತ ಮತ್ತು ಬಾಟಮ್‌ಲೈನ್‌ನಲ್ಲಿ ಶೇ 55ಕ್ಕಿಂತ ಅಧಿಕ ಕುಸಿತವನ್ನು ಸೂಚಿಸುತ್ತಿವೆ.
ಕಾರ್ಪೊರೇಟ್ ಜಿವಿಎ (ಒಟ್ಟು ಮೌಲ್ಯವರ್ಧಿತ) ಕುಸಿತವು ಕೇವಲ ಶೇ 14.1ರಷ್ಟು ಮಾತ್ರ ಎಂದು ನಮೂದಿಸಿದ್ದ ಆಸಕ್ತಿದಾಯಕವಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೊರೊನಾ ವೈರಸ್ ಈಗ ಗ್ರಾಮೀಣ ಪ್ರದೇಶಗಳಲ್ಲೂ ತನ್ನ ಕಬಂಧಬಾಹುಗಳನ್ನು ಚಾಚಿದೆ ಎಂದು ಹೇಳಿದೆ.
ಒಟ್ಟು ಹೊಸ ಪ್ರಕರಣಗಳಲ್ಲಿ ಗ್ರಾಮೀಣ ಭಾಗದಲ್ಲಿ ಆಗಸ್ಟ್‌ನಲ್ಲಿ ಶೇ 54ರಷ್ಟು ಏರಿಕೆಯಾಗಿವೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ತೀವ್ರ ಬಾಧಿತ ರಾಜ್ಯಗಳಾಗಿವೆ.