ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಹಿಂದಿನ ಎರಡು ತ್ರೈಮಾಸಿಕಗಳಲ್ಲಿ ಸಂಕೋಚನ ಕಂಡಿರುವ ದೇಶದ ಆರ್ಥಿಕತೆಯು 2020-21ರ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಸಕಾರಾತ್ಮಕವಾಗಿ 1.3 ಪ್ರತಿಶತಕ್ಕೆ ತಿರುಗಬಹುದು. ಕೋವಿಡ್ ಪ್ರಕರಣಗಳ ಸಂಖ್ಯೆ ಕುಸಿಯುತ್ತಿವೆ. ಸಾರ್ವಜನಿಕ ಖರ್ಚು ಹೆಚ್ಚಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಜಿಡಿಪಿ ಅಂಕಿ-ಅಂಶಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಲಿದೆ. 2020ರ ಕ್ಯಾಲೆಂಡರ್ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಕಪ್ಪು ಬಣ್ಣಕ್ಕೆ ಮರಳಿರಬಹುದು ಎಂದು ಡಿಬಿಎಸ್ ಬ್ಯಾಂಕ್ ಅಂದಾಜಿಸಿದೆ. ನೈಜ ವರ್ಷದ ಪೂರ್ಣ ವಾರ್ಷಿಕ ಬೆಳವಣಿಗೆಯು ಶೇ.6.8ರಷ್ಟು ಋಣಾತ್ಮಕವಾಗಿ ಇರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್-19 ಪರಿಸ್ಥಿತಿಯಲ್ಲಿ ತೀವ್ರ ಸುಧಾರಣೆ. ಹೆಚ್ಚುತ್ತಿರುವ ಸಾರ್ವಜನಿಕ ಖರ್ಚು ಡಿಸೆಂಬರ್ 2020ರ ತ್ರೈಮಾಸಿಕದಲ್ಲಿ ಉತ್ತಮವಾಗಿ ಮೂಡಿಬಂದ ಎರಡು ಅಂಶಗಳಾಗಿವೆ ಎಂದು ಡಿವಿಎಸ್ ಗ್ರೂಪ್ ರಿಸರ್ಚ್ ಅರ್ಥಶಾಸ್ತ್ರಜ್ಞ ರಾಧಿಕಾ ರಾವ್ ಹೇಳಿದ್ದಾರೆ.