ನವದೆಹಲಿ: ಆರ್ಥಿಕ ಚಟುವಟಿಕೆಯ ಪುನರಾರಂಭದ ನಂತರ ಭಾರತದ ಇಂಧನ ಬಳಕೆಯ ಪ್ರಮಾಣವು 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದು, ಡಿಸೆಂಬರ್‌ನಲ್ಲಿ ಸತತ ನಾಲ್ಕನೇ ತಿಂಗಳು ಹೆಚ್ಚಳವಾಗಿ ಕೋವಿಡ್ ಪೂರ್ವ ಮಟ್ಟಕ್ಕಿಂತ ಶೇ 2ರಷ್ಟು ಕಡಿಮೆಯಾಗಿದೆ.
ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಸೆಲ್ ಪ್ರಕಟಿಸಿದ ತಾತ್ಕಾಲಿಕ ಮಾಹಿತಿಯ ಪ್ರಕಾರ, 2020ರ ಡಿಸೆಂಬರ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಒಟ್ಟು ಬೇಡಿಕೆ 18.94 ದಶಲಕ್ಷ ಟನ್‌ಗಳಿಂದ 18.59 ದಶಲಕ್ಷ ಟನ್‌ಗಳಿಗೆ ಇಳಿದಿದೆ. ಆದರೂ ಇಂಧನ ಬಳಕೆಯು ಸತತ ನಾಲ್ಕನೇ ತಿಂಗಳು ಹೆಚ್ಚಳ ದಾಖಲಿಸಿದೆ. ಇದು ಸಾರಿಗೆ ಮತ್ತು ವ್ಯವಹಾರ ಚಟುವಟಿಕೆ ಪುನರುಜ್ಜೀವನದ ಸಂಕೇತವೆಂದು ಹೇಳಿದೆ.
ನವೆಂಬರ್‌ನಲ್ಲಿ ಭಾರತ 17.86 ದಶಲಕ್ಷ ಟನ್ ಇಂಧನ ಬಳಸಿದೆ. 2020ರ ಫೆಬ್ರವರಿಯ ನಂತರ ಡಿಸೆಂಬರ್‌ನಲ್ಲಿನ ಬಳಕೆಯ ಪ್ರಮಾಣ ಅತ್ಯಧಿಕವಾಗಿದೆ. ಸೆಪ್ಟೆಂಬರ್‌ನಲ್ಲಿ ಪೆಟ್ರೋಲ್ ಕೋವಿಡ್ ಪೂರ್ವ ಮಟ್ಟ ತಲುಪಿದ್ದರೆ, ಡೀಸೆಲ್ ಬಳಕೆ ಅಕ್ಟೋಬರ್‌ನಲ್ಲಿ ಸಾಮಾನ್ಯ ಸ್ಥಿತಿಗೆ ಮರಳಿತು. ಅದರ ಬೇಡಿಕೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕುಸಿಯಿತು.