ಮುಂಬೈ:ಪ್ರಸಕ್ತ ಆರ್ಥಿಕ ವರ್ಷದ 2019ರ ನವೆಂಬರ್ 15ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 441 ಮಿಲಿಯನ್ ಡಾಲರ್ಗೆ ಏರಿಕೆಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿ- ಅಂಶಗಳ ಪ್ರಕಾರ, ಒಟ್ಟಾರೆ ವಿದೇಶಿ ವಿನಿಮಯ ಸಂಗ್ರಹವು ನವೆಂಬರ್ 8ಕ್ಕೆ ಕೊನೆಗೊಂಡ ವಾರದಲ್ಲಿ 447.80 ಬಿಲಿಯನ್ ಡಾಲರ್ನಿಂದ 448.24 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ.
ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಆಸ್ತಿ (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜೊತೆಗೆ ಭಾರತದ ಮೀಸಲು ಸ್ಥಾನವನ್ನು ಒಳಗೊಂಡಿದೆ.
ಸಾಪ್ತಾಹಿಕ ಆಧಾರದ ಮೇಲೆ ವಿದೇಶಿ ವಿನಿಮಯ ನಿಕ್ಷೇಪಗಳ ಅತಿದೊಡ್ಡ ಘಟಕವಾದ ಎಫ್‌ಸಿಎ 643 ಮಿಲಿಯನ್ ಡಾಲರ್ನಿಂದ 416.47 ಬಿಲಿಯನ್ ಡಾಲರ್ಗೆ ಹೆಚ್ಚಾಗಿದೆ. ಆರ್‌ಬಿಐನ ಸಾಪ್ತಾಹಿಕ ದೇಶದ ಚಿನ್ನದ ನಿಕ್ಷೇಪಗಳ ಮೌಲ್ಯವು 200 ಮಿಲಿಯನ್ ಡಾಲರ್ನಲ್ಲಿ 26.70 ಶತಕೋಟಿ ಡಾಲರ್ ಇಳಿಕೆಯಾಗಿದೆ ಎಂದು ಹೇಳಿದೆ.