ಕರ್ನಾಟಕ

karnataka

ETV Bharat / business

580 ಶತಕೋಟಿ ಡಾಲರ್​ಗೆ ತಲುಪಿದ ವಿದೇಶಿ ವಿನಿಮಯ: ಚಿನ್ನದ ಸಂಗ್ರಹವೆಷ್ಟು ಗೊತ್ತೇ?

ದೇಶದ ಚಿನ್ನದ ಸಂಗ್ರಹದ ಮೌಲ್ಯವು 315 ದಶಲಕ್ಷದಿಂದ 37.026 ಶತಕೋಟಿ ಡಾಲರ್​ಗೆ ತಲುಪಿದೆ. ಆದರೂ ಎಸ್‌ಡಿಆರ್ ಮೌಲ್ಯವು 1.510 ಬಿಲಿಯನ್ ಡಾಲರ್ ಆಗಿದೆ. ಐಎಂಎಫ್​ನೊಂದಿಗೆ ದೇಶದ ಮೀಸಲು ಸ್ಥಾನವು 5.145 ಬಿಲಿಯನ್ ಡಾಲರ್​ನಲ್ಲಿದೆ.

foreign exchange
ವಿದೇಶಿ ವಿನಿಮಯ

By

Published : Jan 9, 2021, 1:49 PM IST

ಮುಂಬೈ: ಜನವರಿ 1ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 4.483 ಬಿಲಿಯನ್ ಡಾಲರ್​ ಏರಿಕೆಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿ - ಅಂಶಗಳ ಪ್ರಕಾರ, ಡಿಸೆಂಬರ್ 25ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿ ಪ್ರಮಾಣ 580.841 ಬಿಲಿಯನ್​ನಿಂದ 585.324 ಬಿಲಿಯನ್​ ಡಾಲರ್​ಗೆ ಏರಿದೆ.

ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತು(ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್​ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ದೇಶದ ವಿನಿಮಯ ಸ್ಥಾನ ಒಳಗೊಂಡಿದೆ.

ಇದನ್ನೂ ಓದಿ: ಬಜೆಟ್ ತಯಾರಿ, ಲಸಿಕೆ ಖುಷಿಯಲ್ಲಿರುವ ಮೋದಿ ಸರ್ಕಾರ: ₹ 16 ಲಕ್ಷ ಕೋಟಿಯತ್ತ ನೋಡಿ ಎಂದ ತಜ್ಞರು!

ಸಾಪ್ತಾಹಿಕ ಆಧಾರದ ಮೇಲೆ ವಿದೇಶಿ ವಿನಿಮಯ ನಿಕ್ಷೇಪಗಳ ಅತಿದೊಡ್ಡ ಘಟಕವಾದ ಎಫ್‌ಸಿಎಗಳು 4.168 ಬಿಲಿಯನ್‌ನಿಂದ 541.642 ಬಿಲಿಯನ್‌ ಡಾಲರ್​​ಗೆ ಹೆಚ್ಚಳವಾಗಿದೆ. ದೇಶದ ಚಿನ್ನದ ಸಂಗ್ರಹದ ಮೌಲ್ಯವು 315 ದಶಲಕ್ಷದಿಂದ 37.026 ಶತಕೋಟಿ ಡಾಲರ್​ಗೆ ತಲುಪಿದೆ. ಆದರೂ ಎಸ್‌ಡಿಆರ್ ಮೌಲ್ಯವು 1.510 ಬಿಲಿಯನ್ ಡಾಲರ್ ಆಗಿದೆ. ಐಎಂಎಫ್​ನೊಂದಿಗೆ ದೇಶದ ಮೀಸಲು ಸ್ಥಾನವು 5.145 ಬಿಲಿಯನ್ ಡಾಲರ್​ನಲ್ಲಿದೆ.

ABOUT THE AUTHOR

...view details