ಮುಂಬೈ: ನವೆಂಬರ್ 20ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೊತ್ತವು 2.51 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿಅಂಶಗಳ ಪ್ರಕಾರ, ನವೆಂಬರ್ 13ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿ ಪ್ರಮಾಣ 572.771 ಬಿಲಿಯನ್ ಡಾಲರ್ನಿಂದ 575.290 ಬಿಲಿಯನ್ಗೆ ತಲುಪಿದೆ.
ಕಲ್ಲಿದ್ದಲು ಕಳ್ಳಸಾಗಣೆ ದೂರು : 3 ರಾಜ್ಯಗಳ 40 ಸ್ಥಳಗಳ ಮೇಲೆ ಸಿಬಿಐ ದಾಳಿ
ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಆಸ್ತಿ ಪ್ರಮಾಣ (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಸ್ಟ್ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜೊತೆಗೆ ದೇಶದ ಮೀಸಲು ಸ್ಥಾನ ಒಳಗೊಂಡಿದೆ. ಒಂದು ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹದ ಅತಿದೊಡ್ಡ ಪಾಲುದಾರವಾದ ಎಫ್‌ಸಿಎಗಳು 2.83 ಬಿಲಿಯನ್ ಡಾಲರ್ ಹೆಚ್ಚಳವಾಗಿ 533.10 ಶತಕೋಟಿ ಡಾಲರ್ಗೆ ಏರಿದೆ.
ದೇಶದ ಚಿನ್ನದ ನಿಕ್ಷೇಪಗಳ ಮೌಲ್ಯವು 339 ದಶಲಕ್ಷ ಡಾಲರ್ನಷ್ಟು ಕ್ಷೀಣಿಸಿ 36.015 ಶತಕೋಟಿ ಡಾಲರ್ಗೆ ತಲುಪಿದೆ. ಎಸ್‌ಡಿಆರ್ ಮೌಲ್ಯವು 4 ಮಿಲಿಯನ್ ಡಾಲರ್ ಗಳಿಕೆ ಕಂಡು 1.492 ಬಿಲಿಯನ್ ಡಾಲರ್ ಆಗಿದೆ. ಐಎಂಎಫ್‌ನೊಂದಿಗೆ ದೇಶದ ಮೀಸಲು ಸ್ಥಾನವು 19 ಮಿಲಿಯನ್ ಡಾಲರ್ ಏರಿಕೆಯಾಗಿ 4.68 ಬಿಲಿಯನ್ ಡಾಲರ್ಗೆ ತಲುಪಿದೆ.