ಕರ್ನಾಟಕ

karnataka

ETV Bharat / business

ಸಿಹಿ ಸುದ್ದಿ: ಭಾರತದ ಆರ್ಥಿಕತೆಗೆ ಸಿಗಲಿದೆ ಅನಿರೀಕ್ಷಿತ ಹೈಜಂಪ್​

2021ರ ವಿತ್ತೀಯ ವರ್ಷದಲ್ಲಿ ದಾಖಲೆಯ ಶೇ 9.4ರಷ್ಟು ಸಂಕೋಚನದ ನಂತರ 2022ರ ಹಣಕಾಸು ವರ್ಷದ ಅವಧಿಯಲ್ಲಿ ಭಾರತದ ಆರ್ಥಿಕತೆಯಲ್ಲಿ ಶೇ 11ರಷ್ಟು ಬೆಳವಣಿಗೆಗೆ ಮರಳಲಿದೆ. ಇದು ಲಸಿಕೆ ವಿತರಣೆಯ ಬೆಂಬಲದಿಂದ ಜಿಗಿತ ಕಾಣಲಿಸಿದೆ ಎಂದು ಹಿರಿಯ ನಿರ್ದೇಶಕ ಡಂಕನ್ ಇನ್ನೆಸ್-ಕೆರ್ ಹೇಳಿದ್ದಾರೆ.

India's economy
ಆರ್ಥಿಕತೆ

By

Published : Jan 11, 2021, 12:12 PM IST

ನ್ಯೂಯಾರ್ಕ್: ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾದ ಆಘಾತದ ಮಧ್ಯೆ 2021ರ ಮಾರ್ಚ್​​ 21ಕ್ಕೆ (2021ರ ಹಣಕಾಸು ವರ್ಷ) ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ದಾಖಲೆಯ ಶೇ 9.4ರಷ್ಟು ಕುಗ್ಗಲಿದೆ ಎಂದು ಫಿಚ್ ರೇಟಿಂಗ್ಸ್ ಅಂದಾಜಿಸಿದೆ.

ಫಿಚ್​ ರೇಟಿಂಗ್ಸ್​ನ ಅಂದಾಜು ಹಿಂದಿನ ಮುನ್ಸೂಚನೆಯಿಂದ ಶೇ 1.1ರಷ್ಟು ಅಂಕ ಸುಧಾರಣೆ ಪ್ರತಿನಿಧಿಸುತ್ತದೆ. ಇದು 2020ರ ಮೂರನೇ ತ್ರೈಮಾಸಿದಲ್ಲಿ ನಿರೀಕ್ಷಿತ ಮರುಕಳಿಸುವಿಕೆಯಾಗಿದೆ.

ಪ್ರಪಂಚದ ಇತರ ಭಾಗಗಳಲ್ಲಿ ಲಸಿಕೆ ವಿತರಣೆ ಪ್ರಾರಂಭವಾಗುತ್ತಿದ್ದಂತೆ ಬೆಳವಣಿಗೆಯ ದೃಷ್ಟಿಕೋನದ ಅಪಾಯಗಳು ಇತ್ತೀಚಿನ ವಾರಗಳಲ್ಲಿ ಕಡಿಮೆಯಾಗಿವೆ. ದೇಶೀಯ ಆರ್ಥಿಕತೆಯಲ್ಲಿ ಆವೇಗ ಹೆಚ್ಚಿಸಲು ಭವಿಷ್ಯದ ಸೂಚಕಗಳು ಭರವಸೆಯ ಲಕ್ಷಣಗಳನ್ನು ಮೂಡಿಸುತ್ತಿವೆ ಎಂದು ಫಿಚ್ ಹೇಳಿದೆ.

ಇದನ್ನೂ ಓದಿ: ಮೊದಲ ಬಾರಿಗೆ 49,000 ಗಡಿ ದಾಟಿದ ಸೆನ್ಸೆಕ್ಸ್: ಐಟಿ ಷೇರು​ಗಳ ಮೌಲ್ಯದಲ್ಲಿ ಏರಿಕೆ

2021ರ ವಿತ್ತೀಯ ವರ್ಷದಲ್ಲಿ ದಾಖಲೆಯ ಶೇ 9.4ರಷ್ಟು ಸಂಕೋಚನದ ನಂತರ 2022ರ ಹಣಕಾಸು ವರ್ಷದ ಅವಧಿಯಲ್ಲಿ ಭಾರತದ ಆರ್ಥಿಕತೆಯಲ್ಲಿ ಶೇ 11ರಷ್ಟು ಬೆಳವಣಿಗೆ ಮರಳಲಿದೆ. ಕೊರೊನಾ ಲಸಿಕೆ ವಿತರಣೆಯ ಬೆಂಬಲದಿಂದ ಈ ಜಿಗಿತ ಕಾಣಸಿಗಲಿದೆ ಎಂದು ಹಿರಿಯ ನಿರ್ದೇಶಕ ಡಂಕನ್ ಇನ್ನೆಸ್-ಕೆರ್ ಹೇಳಿದ್ದಾರೆ.

ಅಮೆರಿಕ, ಯುರೋಪ್ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿನ ಕೋವಿಡ್​-19 ಪ್ರಕರಣಗಳ ಇತ್ತೀಚಿನ ಅಲೆಯು ಚಟುವಟಿಕೆಯ ಮೇಲೆ ಹೊಸ ನಿರ್ಬಂಧಗಳಿಗೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದಿಂದ ಬೆಳವಣಿಗೆಯ ಮೇಲೆ ಉಂಟಾಗುವ ನಿರಂತರ ಅಪಾಯಗಳನ್ನು ಇದು ಎತ್ತಿ ತೋರಿಸುತ್ತದೆ.

ಪ್ರತಿದಿನ ಹೊಸದಾಗಿ ಪತ್ತೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಕಡಿಮೆಯಾಗುತ್ತಿದೆ. ಆರ್ಥಿಕ ಚೇತರಿಕೆ ಉಳಿಸಿಕೊಳ್ಳಲು ಯಶಸ್ವಿ ಲಸಿಕೆ ನೀಡಿಕೆಯು ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.

ABOUT THE AUTHOR

...view details