ಕರ್ನಾಟಕ

karnataka

ETV Bharat / business

10,430 ಕೋಟಿ ರೂ.ಗೆ ತಲುಪಿದ ಭಾರತದ ಚಾಲ್ತಿ ಖಾತೆ ಕೊರತೆ - ಚಾಲ್ತಿ ಖಾತೆ ಕೊರತೆ

ಪ್ರಾಥಮಿಕ ಹಂತದ 34.6 ಶತಕೋಟಿ ಡಾಲರ್​ಗಳಷ್ಟು ಕಡಿಮೆ ವ್ಯಾಪಾರ ಕೊರತೆ ಮತ್ತು ನಿವ್ವಳ ಸೇವೆಗಳ ಸ್ವೀಕೃತ ಕಾರಣದಿಂದಾಗಿ ಇದು ಸಂಭವಿಸಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

CAD
ಸಿಎಡಿ

By

Published : Mar 12, 2020, 10:56 PM IST

ಮುಂಬೈ:ಡಿಸೆಂಬರ್ ಮಾಸಿಕದಲ್ಲಿ ಭಾರತದ ಪ್ರಸ್ತುತ ಚಾಲ್ತಿ ಖಾತೆಯ ಕೊರತೆಯು 1.4 ಬಿಲಿಯನ್ ಡಾಲರ್​ಗೆ (₹ 10,430 ಕೋಟಿ) ತಲುಪಿದ್ದು, ಜಿಡಿಪಿಯ ಶೇ 0.2ರಷ್ಟಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್ ತಿಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕೊರತೆಯ ಪ್ರಮಾಣವು ಜಿಡಿಪಿಯ ಶೇ 2.7ರಷ್ಟು ಇತ್ತು. ಈ ಹಿಂದಿನ ತ್ರೈಮಾಸಿಕದಲ್ಲಿ ಶೇ 0.9ರಷ್ಟು ಹೊಂದಿತ್ತು.

ಪ್ರಾಥಮಿಕ ಹಂತದ 34.6 ಶತಕೋಟಿ ಡಾಲರ್​ಗಳಷ್ಟು ಕಡಿಮೆ ವ್ಯಾಪಾರ ಕೊರತೆ ಮತ್ತು ನಿವ್ವಳ ಸೇವೆಗಳ ಸ್ವೀಕೃತ ಕಾರಣದಿಂದಾಗಿ ಇದು ಸಂಭವಿಸಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಸಿಎಡಿ (ಚಾಲ್ತಿ ಖಾತೆ ಕೊರತೆ) ಸ್ಥೂಲ ಆರ್ಥಿಕ ಆರೋಗ್ಯದ ನಿರ್ಣಾಯಕ ಸೂಚಕವಾಗಿದೆ. ಒಟ್ಟಾರೆ ವಿದೇಶಿ ವಿನಿಮಯದ ನಡುವಿನ ಅಂತರವನ್ನು ಪ್ರತಿನಿಧಿಸುತ್ತದೆ. ಇದೊಂದು ಆರ್ಥಿಕತೆಯ ಸ್ವೀಕೃತಿಯಾಗಿದೆ. ಗುರುವಾರದ ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ 17 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಪ್ರತಿ ಡಾಲರ್​ ಎದುರು ₹ 74.24ರಲ್ಲಿ ವಹಿವಾಟು ನಡೆಸಿತ್ತು.

ABOUT THE AUTHOR

...view details