ನವದೆಹಲಿ: ಭಾರತದಲ್ಲಿ 'ಈಗ ಖರೀದಿಸಿ, ನಂತರ ಪಾವತಿಸಿ' (ಬೈ ನೌ, ಪೇ ಲೇಟರ್ ಆಫರ್) ವಲಯವು ಹಣಕಾಸು ವರ್ಷ 2026 ಕ್ಕೆ (FY26) 56 ಬಿಲಿಯನ್ ಡಾಲರ್ಸ್ಗೆ ತಲುಪಲಿದೆ ಎಂದು ಹೆಚ್ಡಿ ಎಫ್ಸಿ ಸೆಕ್ಯುರಿಟೀಸ್ ಅಂದಾಜಿಸಿದೆ.
ಕೊರೊನಾ ಸಮಯದಲ್ಲಿ ಬಹುತೇಕರು ಆರ್ಥಿಕವಾಗಿ ಕುಗ್ಗಿ ಹೋಗಿದ್ದರೆ, ಇನ್ನೂ ಕೆಲವರು ಕೆಲಸವಿಲ್ಲದೇ ಪರದಾಡುತ್ತಿದ್ದರು. ಅಂತವರ ಸಮಸ್ಯೆಗೆ ಸ್ಪಂದಿಸುವುದಕ್ಕೆ ‘ಈಗ ಖರೀದಿಸಿ, ನಂತರ ಪಾವತಿಸಿ’ ಎಂಬ ಆ್ಯಪ್ಗಳನ್ನ ಪರಿಚಯಿಸಲಾಗಿದೆ. ಅದರ ಮೂಲಕ ಹಣವನ್ನು ಸಾಲದ ರೂಪವಾಗಿ ಅಥವಾ ಅಗತ್ಯ ಸಾಮಗ್ರಿಯನ್ನ ಖರೀದಿಸಬಹುದಾಗಿದೆ. ಆದರೆ ನಿರ್ದಿಷ್ಟ ಅವಧಿಯವೊಳಗೆ ಸಾಲ ಮರುಪಾವತಿ ಮಾಡಬೇಕಿದೆ. ಈ ವಿಭಾಗವು ತಕ್ಷಣ ವಸ್ತುಗಳನ್ನು ಖರೀದಿ ಮಾಡಲು ಅಲ್ಪಾವಧಿಯ ಹಣಕಾಸು ಸೇವೆಯನ್ನು ಒದಗಿಸುತ್ತದೆ.