ನವದೆಹಲಿ :ಮೊದಲೇ ಇಳಿಕೆ ಕಾಣ್ತಿದ್ದ ಆರ್ಥಿಕತೆ ಲಾಕ್‌ಡೌನ್‌ನಿಂದಾಗಿ ಪಾತಾಳ ಕಾಣುವಂತಾಗಿದೆ. ವೈರಸ್‌ನಿಂದಾಗಿ ಕಂಗೆಟ್ಟು ಕಂಪನಿಗಳು ಮುಚ್ಚಿವೆ. ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೆ, ರೈಲ್ವೆಗೆಮಾತ್ರಕೋವಿಡ್-19 ವರದಾನವಾಗಿದೆ.
ವೈರಸ್‌ನೇ ಅವಕಾಶವನ್ನಾಗಿ ಬಳಸಿಕೊಂಡ ರೈಲ್ವೆ ಇಲಾಖೆ ಲಾಕ್‌ಡೌನ್ ಅವಧಿಯಲ್ಲಿ ಶೇ.10ರಷ್ಟು ತನ್ನ ಸರಕು ಸಾಗಾಟ ಹೆಚ್ಚಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ 2020ರ ಸೆಪ್ಟೆಂಬರ್ 6ರವರೆಗೆ ಶೇ.10ರಷ್ಟು ಸಾಗಾಟ ಪ್ರಮಾಣ ಏರಿಕೆಯಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಲಾಖೆ, ಕೋವಿಡ್-19 ಅವಕಾಶವನ್ನಾಗಿ ಬಳಸಿಕೊಂಡು ಎಲ್ಲಾ ಮಾದರಿಯ ಸರಕು ಸಾಗಾಟಗಳನ್ನು ಹೆಚ್ಚಿಸಿದ್ದು, ಆದಾಯವನ್ನು ಹೆಚ್ಚಿಸಿಕೊಂಡಿರುವುದಾಗಿ ತಿಳಿಸಿದೆ.
ಸರಕು ಸಾಗಾಟದಿಂದ ಈ ವರ್ಷ 129.68 ಕೋಟಿ ರೂಪಾಯಿಗಳ ಆದಾಯವಾಗಿದೆ. ಕಳೆದ ವರ್ಷಕ್ಕೆ ಶೇ.10ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 6ರವರೆಗೆ 19.19 ಮಿಲಿಯನ್ ಟನ್‌ಗಳಷ್ಟು (1.81 ಮಿಲಿಯನ್ ಟನ್‌ಗಳಷ್ಟು ಹೆಚ್ಚಳ) ಸರಕು ಸಾಗಾಟ ಮಾಡಲಾಗಿದೆ. ಇದೇ ಸಮಯದಲ್ಲಿ ಹಲವಾರು ರೀತಿಯ ರಿಯಾತಿಗಳನ್ನು ನೀಡಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.