ಕರ್ನಾಟಕ

karnataka

ETV Bharat / business

ಹಳಿ ದುರಸ್ತಿ, ಪರಿಶೀಲನೆ, ಮೇಲ್ವಿಚಾರಣೆಗೆ ಬಂತು ಅತ್ಯದ್ಭುತ ರೈಲ್​ ಸೈಕಲ್: ವಿಡಿಯೋ ನೋಡಿ - ರೈಲ್ ಬೈಸಿಕಲ್

ಪ್ರಸ್ತುತ ನಡೆಯುತ್ತಿರುವ ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ರೈಲ್ವೆ ಜಾಲದಲ್ಲಿನ ಕೆಲವು ವಿಭಾಗಗಳನ್ನು ಸ್ಥಗಿತಗೊಳಿಸಲಾಗಿದೆ. ಈ ವಿಭಾಗಗಳಲ್ಲಿ ಗಸ್ತು ತಿರುಗುವುದು, ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ರೈಲ್ ಬೈಸಿಕಲ್ ಬಳಸಬಹುದು.

Rail Bicycle
ರೈಲ್ ಬೈಸಿಕಲ್

By

Published : Jul 30, 2020, 5:47 PM IST

ನವದೆಹಲಿ:ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಮತ್ತೊಂದು ನವೀನ ವ್ಯವಸ್ಥೆಯನ್ನು ಪರಿಚಯಿಸಿದೆ. ರಾಷ್ಟ್ರೀಯ ಸಾರಿಗೆದಾರರು ತಪಾಸಣೆ, ಮೇಲ್ವಿಚಾರಣೆ ಮತ್ತು ತುರ್ತು ರಿಪೇರಿಗಾಗಿ ರೈಲು ಹಳಿಗಳಲ್ಲಿ ತ್ವರಿತವಾಗಿ ಪ್ರಯಾಣಿಸಲು ರೈಲ್ ಬೈಸಿಕಲ್ ಎಂಬ ಹೊಸ ಕಾರ್ಯವಿಧಾನವನ್ನು ಪರಿಚಯಿಸಿದೆ.

ರೈಲ್ವೆ ಸಚಿವಾಲಯದ ಪ್ರಕಾರ, ಮಳೆಗಾಲದಲ್ಲಿ ಕೆಲವೊಮ್ಮೆ ಹಳಿ ಪರಿಶೀಲನೆ ಪರಿಸ್ಥಿತಿ ತುಂಬಾ ಕಷ್ಟಕರವಾಗುತ್ತದೆ. ಇದರಿಂದಾಗಿ ರೈಲು ಸೇವೆಗಳನ್ನು ಅನಗತ್ಯವಾಗಿ ನಿರ್ಬಂಧಿಸಲಾಗುತ್ತದೆ. ರೈಲ್ ಬೈಸಿಕಲ್ ನೆರವಿನಿಂದ ತುರ್ತು ರಿಪೇರಿಗೆ ಯಾವುದೇ ಸ್ಥಳವನ್ನು ಸುಲಭವಾಗಿ ತಲುಪಬಹುದು. ಭಾರೀ ಮಳೆ ಸುರಿದ ನಂತರ ಸೇತುವೆಯಂತಹ ಸೂಕ್ಷ್ಮ ಸ್ಥಳಗಳನ್ನು ರೈಲ್ ಬೈಸಿಕಲ್‌ನೊಂದಿಗೆ ಕಡಿಮೆ ಅವಧಿಯಲ್ಲಿ ತೆರಳಿ ತಪಾಸಣೆ ಮಾಡಬಹುದು.

ತುರ್ತು ಸಂದರ್ಭಗಳ ಹೊರತಾಗಿ ರೈಲ್ವೆ ಬೈಸಿಕಲ್ ಹವಾಮಾನ ಪ್ಯಾಟ್ರೋಲಿಂಗ್‌ ಮತ್ತು ರೈಲ್ವೆ ಹಳಿಗಳ ದೈನಂದಿನ ಮೇಲ್ವಿಚಾರಣೆಗೆ ಸಹಕಾರಿಯಾಗುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಪ್ರಸ್ತುತ ನಡೆಯುತ್ತಿರುವ ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ರೈಲ್ವೆ ಜಾಲದಲ್ಲಿನ ಕೆಲವು ವಿಭಾಗಗಳನ್ನು ಸ್ಥಗಿತಗೊಳಿಸಲಾಗಿದೆ. ಈ ವಿಭಾಗಗಳಲ್ಲಿ ಗಸ್ತು ತಿರುಗುವುದು, ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ರೈಲ್ ಬೈಸಿಕಲ್ ಬಳಸಬಹುದು.

ಈ ಬೈಸಿಕಲ್​ ಸುಮಾರು 20 ಕಿ.ಗ್ರಾಂ ತೂಕವಾಗಿದ್ದು, ಕೇವಲ ಒಬ್ಬರು ತಲುಪಬಹುದು. ಓರ್ವನೇ ಚಕ್ರವನ್ನು ಸುಲಭವಾಗಿ ಜೋಡಿಸಿ ಕಿತ್ತುಹಾಕಬಹುದು. ಬೈಸಿಕಲ್‌ನ ಸರಾಸರಿ ವೇಗ ಗಂಟೆಗೆ 10 ಕಿ.ಮೀ ಮತ್ತು ಗರಿಷ್ಠ ವೇಗ 15 ಕಿ.ಮೀ. ಕೆಲವೊಮ್ಮೆ ಇಬ್ಬರನ್ನು ಸಾಗಿಸಬಲ್ಲದು. ಇದರ ಒಟ್ಟು ವೆಚ್ಚ ಕೇವಲ 5000 ರೂ. ಮಾತ್ರ ಅನ್ನೋದು ವಿಶೇಷ.

ABOUT THE AUTHOR

...view details