ಮುಂಬೈ: ದೇಶೀಯ ರೇಟಿಂಗ್ ಸಂಸ್ಥೆ ಇಕ್ರಾ ರೇಟಿಂಗ್ಸ್ ದೇಶದ ಆರ್ಥಿಕತೆಯ ತಾಂತ್ರಿಕ ಹಿಂಜರಿತವು ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕೊನೆಗೊಳ್ಳಲಿದೆ. 2021ರ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಸಂಕೋಚನ ಶೇ 7.8ಕ್ಕೆ ಇರಲಿದೆ ಎಂದು ಅಂದಾಜಿಸಿದೆ.
2021ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿನ ಶೇ 23.9ರಷ್ಟು ಕುಸಿತಕ್ಕೆ ಹೋಲಿಸಿದರೆ ಶೇ 7.5ರಷ್ಟು ಸಂಕುಚಿತಗೊಂಡಿದೆ.
ಕೃಷಿ ಕ್ಷೇತ್ರದ ಸ್ಥಿರ ಕಾರ್ಯಕ್ಷಮತೆ ಮತ್ತು ಸೇವಾ ವಲಯದ ಕೆಲ ಭಾಗಗಳು ಹಿಂದುಳಿಯುವ ಮೂಲಕ, 2021ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಒಂದು ಪ್ರತಿಶತದಷ್ಟು ಸಂಕೋಚನ ಇರಲಿದೆ ಎಂದು ಭವಿಷ್ಯ ನುಡಿದಿದೆ.
ಮೈನಸ್ನಲ್ಲಿ ದಿಲ್ಲಿ, ಮುಂಬೈ, ಚೆನ್ನೈ ತೆರಿಗೆ ಕಲೆಕ್ಷನ್: ಬೆಂಗಳೂರಲ್ಲಿ ಮಾತ್ರವೇ ಪ್ಲಸ್.. ಇದು ಕನ್ನಡಿಗರ ಶಕ್ತಿ!
ಆರೋಗ್ಯಕರ ಸಂಗ್ರಹಣೆ ಮತ್ತು ರಾಬಿ ಸಿಷನ್ನ ಅನುಕೂಲಕರ ದೃಷ್ಟಿಕೋನದ ಜೊತೆಗೆ ಕೋಬಿಡ್-19 ಲಸಿಕೆ ಸಕರಾತ್ಮಕ ಫಲಿತಾಂಶಗಳು 2021ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬೇಡಿಕೆ ಮತ್ತು ಆರ್ಥಿಕ ಚಟುವಟಿಕೆ ಬಲಪಡಿಸುತ್ತವೆ ಎಂದು ರೇಟಿಂಗ್ ಏಜೆನ್ಸಿಯ ಪ್ರಧಾನ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಹೇಳಿದ್ದಾರೆ.
ತಾಂತ್ರಿಕ ಹಿಂಜರಿತವು ಆ ತ್ರೈಮಾಸಿಕದಲ್ಲಿ (4ನೇ ತ್ರೈಮಾಸಿಕ) ಕೊನೆಗೊಳ್ಳುವ ಸಾಧ್ಯತೆಯಿದೆ. ಭಾರತೀಯ ಜಿಡಿಪಿಯಲ್ಲಿನ ಸಂಕೋಚನ ಶೇ 7.8ಕ್ಕೆ ಸೀಮಿತಗೊಳ್ಳುವ ನಿರೀಕ್ಷೆಯಿದೆ ಎಂದರು.
2021ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಎನ್‌ಎಸ್‌ಒ ಜಿಡಿಪಿ ಡೇಟಾ ಬಿಡುಗಡೆ ಮಾಡಿದ ನಂತರ, ರೇಟಿಂಗ್ ಏಜೆನ್ಸಿ 2021ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಸಂಕೋಚನ ಶೇ 7-9ರಷ್ಟರ ನಡುವೆ ಇರಲಿದೆ ಎಂದು ಊಹಿಸಿತ್ತು.