ಕರ್ನಾಟಕ

karnataka

ETV Bharat / business

ಚಿಂತೆ ಬೇಡ, ಭಾರತೀಯ ಆರ್ಥಿಕತೆ ಮಿಂಚಿನ ವೇಗದಲ್ಲಿ ಚೇತರಿಸಿಕೊಳ್ಳುತ್ತೆ: HDFC ಬ್ಯಾಂಕ್​ ಸಿಒಒ - ಭಾರತದ ಆರ್ಥಿಕತೆ ಚೇತರಿಕೆ

ಆರ್ಥಿಕ ಬೆಳವಣಿಗೆಯ ದರವು ಕೋವಿಡ್​​ ಪೂರ್ವದ ಹಂತಗಳಿಗೆ ಬೇಗನೆ ಮರಳಲು ಪ್ರಮುಖ ಅಂಶವಾಗಿದೆ. ಉತ್ತಮ ಕಾರ್ಯತಂತ್ರ, ತಂತ್ರಜ್ಞಾನ, ಬಂಡವಾಳ, ದ್ರವ್ಯತೆ ಮತ್ತು ಪ್ರೇರಿತ ತಜ್ಞರ ತಂಡ ಹೊಂದಿರುವ ಕಂಪನಿಗಳು ಬಿಕ್ಕಟ್ಟಿನ ನಂತರ ವಿಜೇತರಾಗಿ ಹೊರಹೊಮ್ಮುತ್ತವೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದಾರೆ.

Indian economy
ಭಾರತದ ಆರ್ಥಿಕತೆ

By

Published : Jun 18, 2020, 5:04 PM IST

ಮುಂಬೈ: ಭಾರತದ ಜಿಡಿಪಿ ಅತ್ಯಂತ ವೇಗವಾಗಿ ಚೇತರಿಸಿಕೊಳ್ಳಲಿದ್ದು, ಬೆಳವಣಿಗೆಯ ದರವು ಕೋವಿಡ್ ಪೂರ್ವ ಹಂತಕ್ಕೆ ಮರಳಿ ಪಡೆಯುವುದು ಅತ್ಯಗತ್ಯವಾಗಿದೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ/ ಸಿಇಒ ಆದಿತ್ಯ ಪುರಿ ಹೇಳಿದ್ದಾರೆ.

ಖಾಸಗಿ ವಲಯದಲ್ಲಿ ಅತಿದೊಡ್ಡ ಸಾಲದಾತ ಬ್ಯಾಂಕ್​ ಕೋವಿಡ್​ -19 ಸಾಂಕ್ರಾಮಿಕದ ಬಳಿಕ "ವೇ ವೇ ಸ್ಟ್ರಾಂಗರ್​"ನಿಂದ ಹಿಂದೆಂದಿಗಿಂತಲೂ ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂದು ಪುರಿ ತಮ್ಮ ನೌಕರರಿಗೆ ಮಾಡಿದ್ದ ಇ-ಮೇಲ್​ನಲ್ಲಿ ತಿಳಿಸಿದ್ದಾರೆ.

2021ರ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ. ಕೆಲವು ವಿಶ್ಲೇಷಕರು ಜಿಡಿಪಿ ಶೇ 5ರಷ್ಟು ಕುಸಿಯಲಿದೆ ಎಂದಿದ್ದಾರೆ. ನಿರಂತರ ಲಾಕ್‌ಡೌನ್‌ಗಳಿಂದಾಗಿ ಮೊದಲ ತ್ರೈಮಾಸಿಕವು ಕಳೆಗುಂದಲಿದೆ. ಅಗತ್ಯ ಸೇವೆಗಳನ್ನು ಮಾತ್ರ ನಿರ್ವಹಿಸಲು ಅನುಮತಿಸಲಾಗಿದೆ.

ಕೋವಿಡ್ ಬಿಕ್ಕಟ್ಟು ಆರೋಗ್ಯ ಬಿಕ್ಕಟ್ಟಾಗಿದ್ದು, ಇದು ಪೂರೈಕೆ ಸರಪಳಿ ಮತ್ತು ಸಮಯದ ಬೇಡಿಕೆಯನ್ನು ಕೊಂದಿದೆ. ಭಾರತ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕಿನ ಉಜ್ವಲ ಭವಿಷ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಜಿಡಿಪಿಯಿಂದ ದೇಶವು ಶೀಘ್ರವಾಗಿ ಚೇತರಿಸಿಕೊಳ್ಳುತ್ತದೆ ಎಂದು ಪುರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಬೆಳವಣಿಗೆಯ ದರವು ಕೋವಿಡ್​​ ಪೂರ್ವದ ಹಂತಗಳಿಗೆ ಬೇಗನೆ ಮರಳಲು ಪ್ರಮುಖ ಅಂಶವಾಗಿದೆ. ಉತ್ತಮ ಕಾರ್ಯತಂತ್ರ, ತಂತ್ರಜ್ಞಾನ, ಬಂಡವಾಳ, ದ್ರವ್ಯತೆ ಮತ್ತು ಪ್ರೇರಿತ ತಜ್ಞರ ತಂಡ ಹೊಂದಿರುವ ಕಂಪನಿಗಳು ಬಿಕ್ಕಟ್ಟಿನ ನಂತರ ವಿಜೇತರಾಗಿ ಹೊರಹೊಮ್ಮುತ್ತವೆ ಎಂದು ಹೇಳಿದ್ದಾರೆ.

ನಾವು ಹಿಂದೆಂದಿಗಿಂತಲೂ ಮಾರುಕಟ್ಟೆಯಲ್ಲಿ ಬಲವಾದ ಕೋವಿಡ್​ ಮಾರ್ಗದಿಂದ ಹೊರಹೊಮ್ಮುತ್ತೇವೆ ಎಂಬ ವಿಶ್ವಾಸ ನನಗಿದೆ. ಈ ಕಷ್ಟದ ಸಮಯದಲ್ಲಿ ಬೋನಸ್, ವೇತನ ಏರಿಕೆ ಕಾಯ್ದುಕೊಂಡಿರುವ ಕೆಲವೇ ಕಂಪನಿಗಳಲ್ಲಿ ನಮ್ಮ ಬ್ಯಾಂಕ್ ಕೂಡ ಒಂದು ಎಂದು ಸಿಇಒ ಹೇಳಿದರು.

ಮಾರ್ಚ್​​ 2021ಕ್ಕೆ ಅಂತಿಮವಾಗಲಿರುವ ಆರ್ಥಿಕ ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳು ಶೇ. 5ರಷ್ಟು ಕುಸಿಯಲಿದೆ ಎಂದು ಪಿಚ್​ ರೇಟಿಂಗ್​ ಏಜೆನ್ಸಿ ಇಂದು ಅಂದಾಜಿಸಿದೆ. ಇದಕ್ಕೂ ಮೊದಲು ಜಾಗತಿಕ ಬಿಕ್ಕಟ್ಟಿನ ನಂತರ ಭಾರತದ ಜಿಡಿಪಿ ಬೆಳವಣಿಗೆಯು 'ಬಿಬಿಬಿ' ವರ್ಗದ ಹೆಚ್ಚಿನ ಮಟ್ಟಕ್ಕೆ ಮರಳುವ ಸಾಧ್ಯತೆಯಿದೆ. ಇದು ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಹಣಕಾಸು ವಲಯದ ಆರೋಗ್ಯ ಮತ್ತಷ್ಟು ಕ್ಷೀಣಿಸುವುದನ್ನು ತಪ್ಪಿಸುತ್ತದೆ. ಶೇ 9.5ರಷ್ಟು ನೈಜ ಜಿಡಿಪಿ ಬೆಳವಣಿಗೆ ಕಾಣಲಿದೆ ಎಂದು ಮುನ್ಸೂಚನೆ ನೀಡಿತ್ತು.

ಒಟ್ಟಾರೆ ಜಿಡಿಪಿ ಪೈಕಿ ಶೇ 10ರಷ್ಟು ಉತ್ತೇಜಕ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಸರ್ಕಾರದ ಸಾಮಾನ್ಯ ಸಾಲದ ಹೊರೆಯು 2019-20ರಲ್ಲಿ ಜಿಡಿಪಿಯ ಶೇ 70ರಷ್ಟಿದೆ. ಇದು 'ಬಿಬಿಬಿ' ರೇಟಿಂಗ್ ಸರಾಸರಿಗಿಂತ ಶೇ 42ರಷ್ಟಾಗುತ್ತದೆ. ಈ ವಿತ್ತೀಯ ವರ್ಷದಲ್ಲಿ ಸರ್ಕಾರಿ ಸಾಲ ಮತ್ತು ಜಿಡಿಪಿ ಅನುಪಾತವು ಜಿಡಿಪಿಯ ಶೇ 84ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ವಿತ್ತೀಯ ಕೊರತೆಯು ಇನ್ನಷ್ಟು ಹೆಚ್ಚಲಿದೆ. ಹಣದುಬ್ಬರ ಏರಿಕೆಯಾಗಲಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚಳಗೊಳ್ಳಲಿದೆ ಎಂದು ವಿಶ್ಲೇಷಿಸಿತ್ತು.

ABOUT THE AUTHOR

...view details