ಮುಂಬೈ:ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಹಸಿರಿನ ಚಿಗುರೆಲೆಗಳು ಗೋಚರಿಸುತ್ತಿವೆ. ದೇಶವು ಈಗಾಗಲೇ 'ವಿ ಆಕಾರದ' ಚೇತರಿಕೆ ನೋಡುತ್ತಿದೆ ಎಂದು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಭಾರತವು ಈಗಾಗಲೇ 'ವಿ - ಆಕಾರದ' ಚೇತರಿಕೆ ಕಾಣುತ್ತಿದೆ. ವಿವಿಧ ಕ್ಷೇತ್ರಗಳಲ್ಲಿನ ಹಸಿರು ಚಿಗುರುಗಳ ಜೊತೆಗೆ ಫೆಬ್ರವರಿ ತಿಂಗಳಲ್ಲಿ ಎಫ್‌ಪಿಐ ಒಳಹರಿವು 25,787 ಕೋಟಿ ರೂ.ಗಳಷ್ಟಿದೆ ಎಂದು ಠಾಕೂರ್ ಇನ್ಸ್ಟಿಟ್ಯೂಟ್ ಆಫ್ ಆಕ್ಷ್ಯುರೀಸ್ ಆಯೋಜಿಸಿದ ವರ್ಚುಯಲ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: 15 ವರ್ಷ ಹಳೆಯ ಸರ್ಕಾರಿ ವಾಹನಗಳ ನೋಂದಣಿ ರದ್ದು: ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಸತತ ಎರಡು ತ್ರೈಮಾಸಿಕಗಳ ಸಂಕೋಚನದ ನಂತರ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 0.4ರಷ್ಟು ಬೆಳವಣಿಗೆಯೊಂದಿಗೆ ಸಕಾರಾತ್ಮಕತೆಗೆ ಪ್ರವೇಶಿಸಿದೆ.
ಕಳೆದ ಕೆಲವು ತಿಂಗಳಿಂದ ಸ್ಥಿರವಾಗಿ ಹೆಚ್ಚುತ್ತಿರುವ ದೇಶದ ವಿದೇಶಿ ವಿನಿಮಯ ಸಂಗ್ರಹವು 2021ರ ಜನವರಿಯಲ್ಲಿ ಸಾರ್ವಕಾಲಿಕ ಗರಿಷ್ಠ 590 ಬಿಲಿಯನ್ ಡಾಲರ್ಗಳಿಗೆ ಮುಟ್ಟಿದೆ. ಕಳೆದ ಎಂಟು ತಿಂಗಳಲ್ಲಿ ವಿದೇಶಿ ವಿನಿಮಯ ಸಂಗ್ರಹಕ್ಕೆ 100 ಬಿಲಿಯನ್ ಡಾಲರ್ ಸೇರಿದೆ ಎಂದರು.
ಜಾಗತಿಕ ನಿಧಿ ಮತ್ತು ಹೂಡಿಕೆದಾರರು ಭಾರತವನ್ನು ಹೂಡಿಕೆಯ ತಾಣವಾಗಿ ನೋಡುತ್ತಾರೆ. ಭಾರತದ ಬೆಳವಣಿಗೆಯ ಕಥೆಯ ಬಗ್ಗೆ ಅವರು ಮೆಚ್ಚುತ್ತಾರೆ ಎಂಬ ವಿಶ್ವಾಸದ ಚಿಹ್ನೆಗಳಿವು ಎಂದು ಠಾಕೂರ್ ಹೇಳಿದರು.