ಕರ್ನಾಟಕ

karnataka

ETV Bharat / business

ಜಿಡಿಪಿ ಡೇಟಾ: ಮೈನಸ್​ 24, ಮೈನಸ್​ 7.3 ಬಳಿಕ ಮತ್ತೆ ಮೈನಸ್ ಶೇ 8ರಷ್ಟು ಕುಸಿತ! - ಎನ್​ಎಸ್​ಒ ಜಿಡಿಪಿ ಡೇಟಾ

ಸ್ಥಿರವಾದ (2011-12) ಬೆಲೆಗಳಲ್ಲಿನ ನೈಜ ಜಿಡಿಪಿ ಅಥವಾ ಒಟ್ಟು ದೇಶೀಯ ಉತ್ಪನ್ನ 2020-21ರ ದರದಲ್ಲಿ 134.09 ಲಕ್ಷ ಕೋಟಿ ರೂ. ಮಟ್ಟ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು 2019-20ನೇ ಸಾಲಿನ ಜಿಡಿಪಿಯ ಮೊದಲ ಪರಿಷ್ಕೃತ ಅಂದಾಜಿನಂತೆ 145.69 ಲಕ್ಷ ಕೋಟಿ ರೂ. ಇತ್ತು. 2020-21ರ ಅವಧಿಯ ಜಿಡಿಪಿಯಲ್ಲಿನ ಬೆಳವಣಿಗೆಯು 2019-20ರಲ್ಲಿನ ಶೇ 4.0ಕ್ಕೆ ಹೋಲಿಸಿದರೆ ಶೇ ಮೈನಸ್​ 8.0ರಷ್ಟು ಎಂದು ನಿರೀಕ್ಷಿಸಲಾಗಿದೆ ಎಂದು ಎನ್‌ಎಸ್‌ಒ 2021ರ ಫೆಬ್ರವರಿ 26ರ ಪ್ರಕಟಣೆಯಲ್ಲಿ ತಿಳಿಸಿತ್ತು.

GDP
GDP

By

Published : May 31, 2021, 3:22 PM IST

ನವದೆಹಲಿ:ಕೇಂದ್ರ ಅಂಕಿ- ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಷ್ಟ್ರೀಯ ಕೇಂದ್ರ ಸಾಂಖಿಕ್ಯ ಯೋಜನಾ (ಎನ್‌ಎಸ್‌ಒ) 2020-21ರ ಹಣಕಾಸು ವರ್ಷದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದತ್ತಾಂಶವನ್ನು ಸೋಮವಾರ ಬಿಡುಗಡೆ ಮಾಡಲಿದೆ.

ಎನ್‌ಎಸ್‌ಒನ ಹಿಂದಿನ ಅಂದಾಜಿನ ಪ್ರಕಾರ, ಜಿಡಿಪಿ ಬೆಳವಣಿಗೆ 2020-21ರಲ್ಲಿ ಶೇ 8ರಷ್ಟು ಋಣಾತ್ಮಕವೆಂದು ಅಂದಾಜಿಸಲಾಗಿದೆ.

ಸ್ಥಿರವಾದ (2011-12) ಬೆಲೆಗಳಲ್ಲಿನ ನೈಜ ಜಿಡಿಪಿ ಅಥವಾ ಒಟ್ಟು ದೇಶೀಯ ಉತ್ಪನ್ನ 2020-21ರ ದರದಲ್ಲಿ 134.09 ಲಕ್ಷ ಕೋಟಿ ರೂ. ಮಟ್ಟ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು 2019-20ನೇ ಸಾಲಿನ ಜಿಡಿಪಿಯ ಮೊದಲ ಪರಿಷ್ಕೃತ ಅಂದಾಜಿನಂತೆ 145.69 ಲಕ್ಷ ಕೋಟಿ ರೂ. ಇತ್ತು. 2020-21ರ ಅವಧಿಯ ಜಿಡಿಪಿಯಲ್ಲಿನ ಬೆಳವಣಿಗೆಯು 2019-20ರಲ್ಲಿನ ಶೇ 4.0ಕ್ಕೆ ಹೋಲಿಸಿದರೆ ಶೇ ಮೈನಸ್​ 8.0ರಷ್ಟು ಎಂದು ನಿರೀಕ್ಷಿಸಲಾಗಿದೆ ಎಂದು ಎನ್‌ಎಸ್‌ಒ 2021ರ ಫೆಬ್ರವರಿ 26ರ ಪ್ರಕಟಣೆಯಲ್ಲಿ ತಿಳಿಸಿತ್ತು.

ಎನ್ಎಸ್ಒನ ಅಭಿಪ್ರಾಯಗಳಿಗೆ ಪ್ರತಿಧ್ವನಿಯಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ತನ್ನ ಇತ್ತೀಚಿನ ದ್ವಿ-ಮಾಸಿಕ ಹಣಕಾಸು ನೀತಿ ಪರಿಶೀಲನೆಯ ಸಮಯದಲ್ಲಿ, ಕಳೆದ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಮೈನಸ್ ಶೇ 8ರಷ್ಟು ಕುಗ್ಗುತ್ತದೆ ಎಂದು ಅಂದಾಜಿಸಿತ್ತು.

ನೈಜ ಜಿಡಿಪಿ ಬೆಳವಣಿಗೆಯನ್ನು 2020-21ರಲ್ಲಿ ಮೈನಸ್​ ಶೇ 8.0ರಷ್ಟು ನಿರೀಕ್ಷಿಸಲಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ 2021ರ ಏಪ್ರಿಲ್ 7ರ ಪ್ರಕಟಣೆಯಲ್ಲಿ ತಿಳಿಸಿತ್ತು. ಜಿಡಿಪಿ ದೇಶದಲ್ಲಿ ಉತ್ಪಾದನೆಯಾಗುವ ಸರಕು ಮತ್ತು ಸೇವೆಗಳ ಒಟ್ಟು ಪ್ರಮಾಣವಾಗಿದೆ. ಇದು ಆರ್ಥಿಕ ಸ್ಥಿತಿಯ ಪ್ರಮುಖ ಸೂಚಕವಾಗಿದೆ.

ಆರ್ಥಿಕ ಚಟುವಟಿಕೆಗಳ ಮೇಲೆ ಕೋವಿಡ್ -19 ಪ್ರೇರಿತ ಲಾಕ್​ಡೌನ್​ಗಳಿಂದಾಗಿ ಸತತ ಎರಡು ತ್ರೈಮಾಸಿಕಗಳಲ್ಲಿ ಸಂಕೋಚನ ಉಂಟಾಗಿದ್ದು, ಹಿಂದಿನ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಆರ್ಥಿಕತೆಯನ್ನು ಆರ್ಥಿಕ ಹಿಂಜರಿತಕ್ಕೆ ನೂಕಿತು. ಪರಿಷ್ಕೃತ ಜಿಡಿಪಿ ದತ್ತಾಂಶವು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಮೈನಸ್​ ಶೇ 24.4ರಷ್ಟು ಮತ್ತು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮೈನಸ್​ ಶೇ 7.3ರಷ್ಟು ಬೆಳವಣಿಗೆ ತೋರಿಸಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ 0.4ರಷ್ಟು ಸಕಾರಾತ್ಮಕ ಬೆಳವಣಿಗೆ ಕಂಡಿದೆ.

ABOUT THE AUTHOR

...view details