ನವದೆಹಲಿ:ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧದ ವರದಿಗಳು ಬಂದ ಒಂದು ದಿನದ ಬಳಿಕ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ದೇಶದಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟನ್ನು ಸಂಪೂರ್ಣವಾಗಿ ರದ್ದುಪಡಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಕಡೆಯಿಂದ ನಾವು ಎಲ್ಲಾ ಆಯ್ಕೆಗಳನ್ನು ಮುಚ್ಚುತ್ತಿಲ್ಲ ಎಂಬುದು ಸ್ಪಷ್ಟ. ಜನರಿಗೆ ಬ್ಲಾಕ್‌ಚೈನ್, ಬಿಟ್‌ಕಾಯಿನ್ ಅಥವಾ ಕ್ರಿಪ್ಟೋಕರೆನ್ಸಿಯ ಮೇಲೆ ಪ್ರಯೋಗ ಮಾಡಲು ನಾವು ಕೆಲ ಅವಕಾಶಗಳನ್ನು ಮುಕ್ತವಾಗಿರಿಸಲು ಅನುಮತಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದಿಲ್ಲ. ಭಾರತವು ಎಲ್ಲಾ ರೀತಿಯ ಕ್ರಿಪ್ಟೋಕರೆನ್ಸಿಗಳಿಗಿಂತ ಹಿಂದುಳಿದಿಲ್ಲ. ಪಾವತಿಗಾಗಿ ಪರ್ಯಾಯ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಅನುಮತಿಸುತ್ತದೆ ಎಂದರು.
ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್) ಕಂಪನಿಗಳು ಬ್ಲಾಕ್‌ಚೈನ್‌ನ್ನು ಅವಲಂಬಿಸಿವೆ. ಕ್ರಿಪ್ಟೋಕರೆನ್ಸಿಗಳಿಗೆ ಈ ತಂತ್ರಜ್ಞಾನವು ನಿರ್ಣಾಯಕವಾಗಿದೆ. ಅಂತಹವರಿಗೆ ವಿಶೇಷ ನೀತಿ ಲಭ್ಯವಾಗಲಿದೆ ಎಂದರು. ಆದರೆ, ಕ್ಯಾಬಿನೆಟ್ನಲ್ಲಿ ಇದು ಯಾವ ರೀತಿಯ ಸೂತ್ರೀಕರಣ ಒಳಗೊಂಡಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಡಿಜಿಟಲ್ ಕರೆನ್ಸಿ ನೋಟ್ಸ್ ಶೀಘ್ರದಲ್ಲೇ ಸಿದ್ಧವಾಗಲಿದೆ. ಇದು ಪೂರ್ಣಗೊಳ್ಳುವ ಹಂತದಲ್ಲಿದ್ದು, ಒಮ್ಮೆ ಅಂತಿಮವಾದ ನಂತರ ಅದನ್ನು ಕ್ಯಾಬಿನೆಟ್ ಮುಂದಿಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಥಮ ಬಾರಿಗೆ ಎಲೆಕ್ಟ್ರಿಕ್ ಕಾರ್ ಮಾಡೆಲ್ ಪರಿಚಯಿಸಿದ ಕಿಯಾ ಮೋಟಾರ್ಸ್
ಬ್ಲಾಕ್‌ಚೇನ್ ತಂತ್ರಜ್ಞಾನದಲ್ಲಿ ಇದೊಂದು ದೊಡ್ಡ ಸ್ಥಾನ ಪಡೆಯಲಿದೆ. ಬಹಳಷ್ಟು ಫಿನ್‌ಟೆಕ್ ಕಂಪನಿಗಳು ಅದರ ಮೇಲೆ ಸಾಕಷ್ಟು ಪ್ರಗತಿ ಸಾಧಿಸಿವೆ. ನಾವು ಹಲವು ಪ್ರಸ್ತಾಪಗಳನ್ನು ಪಡೆದುಕೊಂಡಿದ್ದೇವೆ. ರಾಜ್ಯ ಮಟ್ಟದಲ್ಲಿ ಹೆಚ್ಚಿನ ಕೆಲಸಗಳು ನಡೆಯುತ್ತಿವೆ ಎಂದು ಸಚಿವೆ ತಿಳಿಸಿದರು.
ಭಾರತದಲ್ಲಿ ಫಿನ್‌ಟೆಕ್ ಮತ್ತು ಬ್ಲಾಕ್‌ಚೈನ್‌ನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ನಾವು ಅದನ್ನು ಖಂಡಿತವಾಗಿಯೂ ಪ್ರೋತ್ಸಾಹಿಸುತ್ತೇವೆ ಎಂದರು.