ಕರ್ನಾಟಕ

karnataka

ETV Bharat / business

ವ್ಯಾಪಾರ-ವಹಿವಾಟು ವೃದ್ಧಿಗಾಗಿ ಭಾರತ, ಅಮೆರಿಕ ಮತ್ತೊಂದು ಸುತ್ತಿನ ಮಾತುಕತೆ

ವಾಣಿಜ್ಯ ಸಚಿವಾಲಯದ ದತ್ತಾಂಶಗಳ ಪ್ರಕಾರ, ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರವು 2019-20ರಲ್ಲಿ 88.9 ಶತಕೋಟಿ ಯುಎಸ್‌ ಡಾಲರ್‌ನಷ್ಟಿತ್ತು. 2020-21ರಲ್ಲಿ ಇದು 80.5 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ..

India, US discuss ways to increase trade
ವ್ಯಾಪಾರ-ವಹಿವಾಟು ವೃದ್ಧಿಗಾಗಿ ಭಾರತ, ಅಮೆರಿಕ ಮತ್ತೊಂದು ಸುತ್ತಿನ ಮಾತುಕತೆ

By

Published : Aug 20, 2021, 4:47 PM IST

ನವದೆಹಲಿ :ಭಾರತ-ಯುಎಸ್‌ ನಡುವಿನ ವ್ಯಾಪಾರ-ವಹಿವಾಟು ವೃದ್ಧಿಸುವ ಸಂಬಂಧ ಭಾರತಕ್ಕೆ ಅಮೆರಿಕ ರಾಯಭಾರಿ ಅತುಲ್‌ ಕಶ್ಯಪ್‌ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್‌ ಗೋಯಲ್‌ ಇಂದು ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ನಡುವಿನ 2 ಗಂಟೆಗೂ ಅಧಿಕ ಅವಧಿಯ ಚರ್ಚೆಯಲ್ಲಿ ವ್ಯಾಪಾರವನ್ನೇ ಪ್ರಮುಖ ವಿಷಯವನ್ನಾಗಿಸಿದ್ದಾರೆ.

ಸಭೆ ಬಳಿಕ ಟ್ವೀಟ್‌ ಮಾಡಿರುವ ಕಶ್ಯಪ್‌, ವಾಣಿಜ್ಯ ಸಚಿವರ ಜೊತೆ ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. 500 ಬಿಲಿಯನ್‌ ಡಾಲರ್‌ ವ್ಯಾಪಾರದ ಬಗ್ಗೆ ಚರ್ಚಿಸಿದ್ದೇವೆ. ಎರಡು ಪ್ರಜಾಪ್ರಭುತ್ವದ ರಾಷ್ಟ್ರಗಳು ಇನ್ನಷ್ಟು ಹತ್ತಿರವಾಗಿ ದ್ವಿಪಕ್ಷೀಯತೆ ಹೆಚ್ಚಿಸಬೇಕು ಎಂದಿದ್ದಾರೆ.

ಗುರುವಾರ ಮುಂಬೈನಲ್ಲಿ ನಡೆದ ಉದ್ಯಮ ಕುರಿತ ಸಮಾರಂಭದಲ್ಲಿ ಮಾತನಾಡಿದ ಗೋಯಲ್, ಭಾರತ ಮತ್ತು ಯುಎಸ್ ವ್ಯಾಪಾರ ಒಪ್ಪಂದದ ಭರವಸೆಗಳು ಸದ್ಯಕ್ಕೆ ಸರ್ಕಾರದ ಮುಂದಿವೆ ಎಂದು ಹೇಳಿದ್ದರು. ಜೋ ಬೈಡನ್ ಆಡಳಿತವು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಆಸಕ್ತಿಯಿಲ್ಲ ಎಂದು ಈ ಮೊದಲು ಹೇಳಿತ್ತು.

ಅಮೆರಿಕ ಹೊಸ ಒಪ್ಪಂದಗಳತ್ತ ಮುಖ ಮಾಡುತ್ತಿಲ್ಲ. ಆದರೆ, ಎರಡೂ ಕಡೆಯಿಂದ ಹೆಚ್ಚಿನ ಮಾರುಕಟ್ಟೆಗೆ ಅವಕಾಶದ ಬಗ್ಗೆ ಚರ್ಚೆಗಳಾಗುತ್ತಿವೆ. ಇದು ರಫ್ತು ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಗೋಯಲ್‌ ಹೇಳಿದ್ದಾರೆ.

ವಾಣಿಜ್ಯ ಸಚಿವಾಲಯದ ದತ್ತಾಂಶಗಳ ಪ್ರಕಾರ, ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರವು 2019-20ರಲ್ಲಿ 88.9 ಶತಕೋಟಿ ಯುಎಸ್‌ ಡಾಲರ್‌ನಷ್ಟಿತ್ತು. 2020-21ರಲ್ಲಿ ಇದು 80.5 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ.

For All Latest Updates

ABOUT THE AUTHOR

...view details