ಕರ್ನಾಟಕ

karnataka

ETV Bharat / business

ಇರಾನ್ ಮೇಲೆ​ ತೈಲ ದಿಗ್ಬಂಧನ: ಭಾರತದಲ್ಲಿ ಪೆಟ್ರೋಲ್​,ಡೀಸೆಲ್​ ಬೆಲೆ 5-10 ರೂ. ಏರಿಕೆ? - undefined

ಸೌದಿ ಅರೇಬಿಯಾ ಸೇರಿದಂತೆ ಕೆಲವು ದೇಶಗಳು ತಕ್ಷಣಕ್ಕೆ ತೈಲ ಉತ್ಪಾದನೆ ಹೆಚ್ಚಿಸದಿರಲು ತೀರ್ಮಾನಿಸಿವೆ. ಬೇಡಿಕೆ ಹಾಗೂ ಪೂರೈಕೆ ನಡುವೆ ವಿಶ್ವಾದ್ಯಂತ ಅಸಮತೋಲನ ಸೃಷ್ಟಿಯಾಗಲಿದೆ. ಜಾಗತಿಕವಾಗಿ ಅತೀ ಹೆಚ್ಚು ತೈಲ ಬಳಸುತ್ತಿರುವ ಮೂರನೇ ರಾಷ್ಟ್ರ ಭಾರತವಾಗಿದ್ದು, ಸಹಜವಾಗಿ ದೇಶಿ ತೈಲದ ಚಿಲ್ಲರೆ ಮಾರುಕಟ್ಟೆಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ?

By

Published : Apr 26, 2019, 10:37 PM IST

ನವದೆಹಲಿ: ಇರಾನ್​ನ ಕಚ್ಚಾ ತೈಲ ಆಮದಿಗೆ ಸಂಬಂಧಿಸಿದಂತೆ ಅಮೆರಿಕ ಭಾರತಕ್ಕೆ ನೀಡಿದ್ದ ಆರು ತಿಂಗಳ ತೈಲ ದಿಗ್ಬಂಧನ ಮೇ 1ಕ್ಕೆ ಕೊನೆಯಾಗಲಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.

ಇರಾನ್ ಜೊತೆಗೆ 2015ರಲ್ಲಿ ಮಾಡಿಕೊಂಡಿದ್ದ ಪರಮಾಣು ಒಪ್ಪಂದಿಂದ ಟ್ರಂಪ್ ಸರ್ಕಾರ ಹಿಂದೆ ಸರಿದು ಆರ್ಥಿಕ ದಿಗ್ಬಂಧನ ವಿಧಿಸಿತ್ತು. ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಮೇ 1ರ ವರೆಗೆ ಆಮದು ವಿನಾಯಿತಿ ನೀಡಿ, ಖರೀದಿ ಪ್ರಮಾಣ ಹಂತ-ಹಂತವಾಗಿ ಇಳಿಸಿ ಪರ್ಯಾಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವಂತೆ ಸೂಚಿಸಿತ್ತು. ಅಮೆರಿಕದ ದಿಗ್ಬಂಧನ ಮೇ 2ರಿಂದ ಅಧಿಕೃತವಾಗಿ ಜಾರಿಗೆ ಬರುತ್ತಿದೆ.

ಅಮೆರಿಕದ ಈ ನಡೆಯಿಂದ ಭಾರತ, ಚೀನಾ, ಜಪಾನ್, ಟರ್ಕಿ, ದಕ್ಷಿಣ ಕೊರಿಯಾ ಸೇರಿದಂತೆ ಎಂಟು ರಾಷ್ಟ್ರಗಳು ತೊಳಲಾಟಕ್ಕೆ ಸಿಲುಕಿಕೊಂಡಿವೆ. ಇರಾನ್​ನಿಂದ ತೈಲ ಪೂರೈಕೆ ಸ್ಥಗಿತಗೊಂಡರೇ ತತಕ್ಷಣದಲ್ಲಿ ಸ್ಪರ್ಧಾತ್ಮಕ ದರದಲ್ಲಿ ತೈಲ ಪೂರೈಸುವ ಬೇರೆ ದೇಶಗಳನ್ನು ಗುರುತಿಸುವುದು ಸುಲಭವಲ್ಲ. ಅಮೆರಿಕ ರಾಜತಾಂತ್ರಿಕ ಸಂಬಂಧದಿಂದ ಹೊರ ಬಂದು ಇರಾನ್​ ಜೊತೆಗೆ ವ್ಯವಹಾರ ನಡೆಸುವುದು ಇನ್ನೂ ಕಷ್ಟದಾಯಕ ಎನ್ನಲಾಗುತ್ತಿದೆ.

50 ರಿಂದ 75 ಡಾಲರ್​ಗೆ ಜಿಗಿದ ಬ್ಯಾರೆಲ್ ಕಚ್ಚಾ ತೈಲ ದರ

ಪ್ರಸ್ತುತ ಚುನಾವಣೆಯ ಕಾರಣಕ್ಕಾಗಿ ದರ ಏರಿಕೆ ಪ್ರಮಾಣಕ್ಕೆ ಕಡಿವಾಣ ಬಿದ್ದಿದೆ. ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ದರ ಏರಿಕೆ ಪ್ರಮಾಣ ವೇಗ ಪಡೆಯಲಿದೆ. ಇದಕ್ಕೆ ಇರಾನ್ ಮೇಲಿನ ಅಮೆರಿಕ ನಿರ್ಬಂಧವು ನೇರ ಪರಿಣಾಮ ಬೀರಲಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ಇಂಧನ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಬ್ಯಾರೆಲ್​ ಬ್ರೆಂಟ್​ ಕಚ್ಚಾ ತೈಲ ದರ ವಾರದ ಹಿಂದಷ್ಟೇ 71.97 ಡಾಲರ್​ ಇದದ್ದು, ಈಗ 75 ಡಾಲರ್​ಗೆ ಬಂದು ತಲುಪಿದೆ. ಕಳೆದ ಡಿಸೆಂಬರ್​ನಲ್ಲಿ ಕನಿಷ್ಠ 50 ಡಾಲರ್​ಗೆ ಕುಸಿದಿದ್ದ ಕಚ್ಚಾ ತೈಲ ಬೆಲೆ ಕೆಲವೇ ತಿಂಗಳಲ್ಲಿ ಶೇ 54ರಷ್ಟು ಏರಿಕೆ ಕಂಡಿದೆ. ಈ ಎಲ್ಲ ಬೆಳವಣಿಗೆಗಳು ಗಮನಿಸಿದರೆ ಮುಂದಿನ ದಿನಗಳಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 5ರಿಂದ 10 ರೂ.ವರೆಗೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿನ ಜನರ ಖರೀದಿ ಸಾಮರ್ಥ್ಯ ದ್ವಿಗುಣಗೊಳ್ಳುತ್ತಿದೆ. ಇಂಧನ ಮೇಲಿನ ಅವಲಂಬನೆಯ ಪ್ರಾಮಾಣ ಸಹ ಅದೇ ವೇಗದಲ್ಲಿ ಸಾಗುತ್ತಿದೆ. ಸಾಂಪ್ರದಾಯಿಕ ಇಂಧನಗಳ ಬೇಡಿಕೆಯಿಂದ ಹಿಮ್ಮುಖವಾಗಿ ಸೌರ, ಪವನ ಹಾಗೂ ಜೈವಿಕದಂತಹ ಪರ್ಯಾಯ ಇಂಧನ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಜೊತೆಗೆ ತೈಲ ಆಮದು ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

2017-18ರಲ್ಲಿ ಆಮದು ಮೌಲ್ಯ ₹ 6.02 ಕೋಟಿ ಇದದ್ದು, 2018-19ರಲ್ಲಿ ₹ 8.62 ಲಕ್ಷ ಕೋಟಿಗೆ ತಲುಪಿದೆ. ಡಿಸೆಂಬರ್​ನಲ್ಲಿನ ತೈಲ ದರ ಇಳಿಕೆಯ ಪರಿಣಾಮ ಜಿಡಿಪಿಯ ಚಾಲ್ತಿ ಖಾತೆ ಕೊರತೆ ಪ್ರಮಾಣ ಶೇ 2.5ರಷ್ಟಿತ್ತು. ಆರ್​ಬಿಐನ ಬಿಗಿಯಾದ ಆರ್ಥಿಕ ನೀತಿಗಳ ಹಿಡಿತ ಹಣದುಬ್ಬರ ಸಾಧಾರಣವಾಗಿ ಹಿಡಿತಕ್ಕೆ ಸಿಲುಕಿತ್ತು. ಮುಂದಿನ ದಿನಗಳಲ್ಲಿ ತೈಲ ದರ ಏರಿಕೆಯಾದರೆ ಇವುಗಳಲ್ಲಿ ತದ್ವಿರುದ್ಧ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.

For All Latest Updates

TAGGED:

ABOUT THE AUTHOR

...view details