ನವದೆಹಲಿ:2021ರ ಅಂತ್ಯದ ವೇಳೆಗೆ ಭಾರತದಲ್ಲಿ ವೇತನ ಬೆಳವಣಿಗೆಯು ಸರಾಸರಿ 6.4 ಪ್ರತಿಶತದಷ್ಟಿದೆ ಎಂದು ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ಅಂದಾಜಿಸಿದೆ.
ಕಳೆದ ವರ್ಷ ಸರಾಸರಿ 5.9ಕ್ಕೆ ಹೋಲಿಸಿದರೆ ಈ ಬಾರಿ ಸಂಬಳ ಸ್ವಲ್ಪ ಉತ್ತಮವಾಗಿ ಇರಲಿದೆ. ಕೊರೊನಾ ಬಿಕ್ಕಟ್ಟಿನಿಂದ ನಲುಗುತ್ತಿರುವ ಕಾರ್ಪೊರೇಟ್ ವಲಯವು ಚೇತರಿಸಿಕೊಳ್ಳುವ ಸಾಕಷ್ಟು ಸಾಮರ್ಥ್ಯ ಹೊಂದಿದೆ ಎಂದು ವಾಲಿಸ್ ಟವರ್ಸ್ ವ್ಯಾಟ್ಸನ್ ಇಂಡಿಯಾ ಟ್ಯಾಲೆಂಟ್ ಮತ್ತು ರಿವಾರ್ಡ್ಸ್ ವಿಭಾಗದ ಮುಖ್ಯಸ್ಥ ರಾಜುಲ್ ಮಾಥುರ್ ಹೇಳಿದ್ದಾರೆ.
ಇದನ್ನೂ ಓದಿ: ಮೂಡಿದ ಆರ್ಥಿಕ ಚೇತರಿಕೆ ಭರವಸೆ: 609 ಅಂಕ ಜಿಗಿದ ಸೆನ್ಸೆಕ್ಸ್
ಸಮೀಕ್ಷೆಯ ಪ್ರಕಾರ, ಕಂಪನಿಗಳು ತಮ್ಮ ಪ್ರಮುಖ ಉದ್ಯೋಗಿಗಳ ಮತ್ತು ಹೆಚ್ಚು ಪ್ರತಿಭಾವಂತ ವೃತ್ತಿಪರರ ವೇತನ ಹೆಚ್ಚಿಸುವ ಸಾಧ್ಯತೆಯಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಕಂಪನಿಗಳು ಈ ವರ್ಷ ಸರಾಸರಿ ಶೇ 20.6ರಷ್ಟು ವೇತನ ಹೆಚ್ಚಳ ಮಾಡಲಿವೆ ಎಂದಿದೆ.
'ಸಂಬಳ ಬಜೆಟ್ ಯೋಜನೆ ವರದಿ' ಎಂಬ ಶೀರ್ಷಿಕೆಯಡಿ ಕಳೆದ ವರ್ಷ ಅಕ್ಟೋಬರ್ / ನವೆಂಬರ್‌ನಲ್ಲಿ 130 ದೇಶಗಳ 18,000 ಕಂಪನಿಗಳ ಪ್ರತಿನಿಧಿಗಳಿಂದ ಸಂಗ್ರಹಿಸಿದ ಮಾಹಿತಿಯೊಂದಿಗೆ ಆನ್‌ಲೈನ್‌ನಲ್ಲಿ ಸಮೀಕ್ಷೆ ನಡೆಸಲಾಯಿತು. ಶೇ 37ರಷ್ಟು ಭಾರತೀಯ ಕಂಪನಿಗಳು ಸಮೀಕ್ಷೆಯಲ್ಲಿವೆ.
ಮುಂಬರುವ ವರ್ಷದಲ್ಲಿ ಆದಾಯವು ಸಕಾರಾತ್ಮಕವಾಗಿ ಇರಲಿದೆ. ಉದ್ಯೋಗ ನಿಯೋಜನೆಗಳು ಇನ್ನೂ ಚೇತರಿಸಿಕೊಳ್ಳಬೇಕಾಗಿಲ್ಲ. ಕೇವಲ 10 ಪ್ರತಿಶತ ಕಂಪನಿಗಳು ಮಾತ್ರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿವೆ.
ಏಷ್ಯಾ-ಪೆಸಿಫಿಕ್ ಪ್ರದೇಶದ ಇಂಡೋನೇಷ್ಯಾದಲ್ಲಿ ಶೇ 6.5ರಷ್ಟು, ಚೀನಾದಲ್ಲಿ ಶೇ 6ರಷ್ಟು, ಫಿಲಿಪೈನ್ಸ್‌ನಲ್ಲಿ ಶೇ 5ರಷ್ಟು, ಸಿಂಗಾಪುರದಲ್ಲಿ ಶೇ 3.5ರಷ್ಟು ಮತ್ತು ಹಾಂಕಾಂಗ್‌ನಲ್ಲಿ ಶೇ 3ರಷ್ಟು ವೇತನ ಹೆಚ್ಚಳವಾಗುವ ನಿರೀಕ್ಷೆಯಿದೆ. ತಂತ್ರಜ್ಞಾನ, ಔಷಧೀಯ, ಗ್ರಾಹಕ ಉತ್ಪನ್ನಗಳು ಮತ್ತು ಚಿಲ್ಲರೆ ಕ್ಷೇತ್ರಗಳಲ್ಲಿನ ಉದ್ಯೋಗಿಗಳು ಸರಾಸರಿ 8 ಪ್ರತಿಶತದಷ್ಟು ವೇತನ ಹೆಚ್ಚಳ ಪಡೆಯುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ.
ಸಮೀಕ್ಷೆಯ ಪ್ರಕಾರ, ಹಣಕಾಸು ಸೇವೆಗಳು ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿನ ವೇತನವು ಶೇ ರಷ್ಟು, ಬಿಪಿಒ ವಲಯದಲ್ಲಿ ಶೇ 6 ರಷ್ಟು ಮತ್ತು ಇಂಧನ ಕ್ಷೇತ್ರದಲ್ಲಿ ಶೇ 4.6ರಷ್ಟು ಏರಿಕೆಯಾಗಿದೆ